* ಕಳೆದ ಜನವರಿಯಲ್ಲಿ ಚೀನಾದಲ್ಲಿ ಬಿಡುಗಡೆಯಾಗಿದ್ದ ಒನ್‌ಪ್ಲಸ್ 10 ಪ್ರೋ ಭಾರತದಲ್ಲಿ ಬಿಡುಗಡೆಗೆ ಸಿದ್ಧ
* ಪ್ರೊಸೆಸರ್, ಕ್ಯಾಮೆರಾ ಹಾಗೂ ಇತರ ತಾಂತ್ರಿಕ ವಿಶೇಷತೆಗಳಿಂದ ಗಮನ ಸೆಳೆಯುತ್ತಿರುವ ಫೋನ್
* ಒನ್‌ಪ್ಲಸ್ 10 ಪ್ರೋ ಬಿಡುಗಡೆ ದಿನಾಂಕವನ್ನು ಟ್ವಿಟರ್ ಮೂಲಖ ಖಚಿತಪಡಿಸಿದ ಚೀನಾ ಕಂಪನಿ
OnePlus 10 Pro Launch: ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಲ್ಲಿ ಪ್ರಮುಖವಾಗಿರುವ, ಚೀನಾ (China) ಮೂಲದ ಒನ್‌ಪ್ಲಸ್ (OnePlus) ತನ್ನ ಪ್ರೀಮಿಯಂ ಫೋನುಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಪಾಲು ಪಡೆದುಕೊಂಡಿದೆ. ಹೊಸ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡುವ ಮೂಲಕ ಗ್ರಾಹಕರರನ್ನು ತನ್ನತ್ತ ಸೆಳೆಯುತ್ತಿದೆ. ಈಗ ಕಂಪನಿಯು ಭಾರತೀಯ ಮಾರುಕಟ್ಟೆಗೆ ಒನ್‌ಪ್ಲಸ್ 10 ಪ್ರೋ (OnePlus 10 Pro) ಸ್ಮಾರ್ಟ್‌ಫೋನ್ ಅನ್ನು ಮಾರ್ಚ್ 31ರಂದು ಲಾಂಚ್ ಮಾಡಿದೆ. ಸ್ವತಃ ಕಂಪನಿಯೇ ಸುದ್ದಿಯನ್ನು ಖಚಿತಪಡಿಸಿದೆ. ಒನ್‌ಪ್ಲಸ್ 10 ಪ್ರೋ ಸ್ಮಾರ್ಟ್‌ಫೋನ್ ಲಾಂಚ್ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿಯನ್ನು ಕಂಪನಿ ಷೇರ್ ಮಾಡಿಕೊಂಡಿದೆ.
ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಈ ಫೋನ್ ಕಳೆದ ಜನವರಿಯಲ್ಲಿ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿ ಸದ್ದು ಮಾಡಿತ್ತು. ಅದೇ ಫೋನ್ ಈಗ ಭಾರತಕ್ಕೂ ಕಾಲಿಡುತ್ತಿದೆ. ಪ್ರೀಮಿಯಂ ಫ್ಲ್ಯಾಗ್‌ಶಿಫ್ ಆಗಿರುವುದರಿಂದ ಬೆಲೆಯ ತುಟ್ಟಿಯೇ ಆಗಿರುತ್ತದೆ. ಕೆಲವು ಮೂಲಗಳ ಪ್ರಕಾರ ಈ ಸ್ಮಾರ್ಟ್‌ಫೋನ್ 54 ಸಾವಿರ ರೂ.ನಿಂದ ಆರಂಭವಾಗುವ ಸಾಧ್ಯತೆ ಇದೆ. ಆದರೆ, ಈ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ನೀಡಿಲ್ಲ.
ಇದನ್ನೂ ಓದಿ: WhatsApp Multi Device Support ಬಿಡುಗಡೆ: ಲಿಂಕ್ ಮಾಡುವುದು ಹೇಗೆ?
ವಿಶೇಷತೆಗಳು ಏನಿರಬಹುದು?: ಭಾರತದಲ್ಲಿ ಬಿಡುಗಡೆಯಾಗಲಿರುವ ಒನ್‌ಪ್ಲಸ್ 10 ಪ್ರೋ ಸ್ಮಾರ್ಟ್‍ಫೋನ್ ವಿಶೇಷತೆಗಳ ಬಗ್ಗೆ ಅಷ್ಟೇನೂ ಮಾಹಿತಿ ಇಲ್ಲ. ಆದರೆ, ಕಂಪನಿಯು ಕಳೆದ ಜನವರಿಯಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಿರುವ ಫೋನ್ ಅನ್ನೇ ಈಗ ಭಾರತದಲ್ಲೂ ಬಿಡುಗಡೆ ಮಾಡುತ್ತಿದೆ. ಹಾಗಾಗಿ, ಆ ಫೋನಿನ ವಿಶೇಷತೆಗಳನ್ನು ನಿರೀಕ್ಷಿಸಬಹುದು. ಅಥವಾ ಒಂದಿಷ್ಟು ಬದಲಾವಣೆಗಳನ್ನು ಕಾಣಬಹುದು. ಈ ಫೋನು ColorOS 12.1ನೊಂದಿಗೆ ಆಂಡ್ರಾಯ್ಡ್ 12 ಆಧರಿತವಾಗಿದೆ. OnePlus 10 Pro 80W ಸೂಪರ್ ಫ್ಲ್ಯಾಶ್ ಚಾರ್ಜ್ ವೇಗದ ಚಾರ್ಜಿಂಗ್ (ವೈರ್ಡ್) ಮತ್ತು 50W ಫ್ಲ್ಯಾಶ್ ಚಾರ್ಜ್ (ವೈರ್‌ಲೆಸ್)ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
Are you ready for the ? pic.twitter.com/bbu2VWgS28
— OnePlus India (@OnePlus_IN)
ಈ ಸ್ಮಾರ್ಟ್‌ಫೋನ್ 6.7-ಇಂಚಿನ QHD+ (1,440x3,216 ಪಿಕ್ಸೆಲ್‌ಗಳು) ಬಾಗಿದ LTPO 2.0 AMOLED ಡಿಸ್‌ಪ್ಲೇ ಜೊತೆಗೆ 1Hz ಮತ್ತು 120Hz ನಡುವಿನ ಡೈನಾಮಿಕ್ ರಿಫ್ರೆಶ್ ದರವನ್ನು ಹೊಂದಿದೆ. ಪ್ರದರ್ಶನವು 1,300 ನಿಟ್‌ಗಳ ಗರಿಷ್ಠ ಹೊಳಪನ್ನು ನೀಡುತ್ತದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಹೊಂದಿದೆ. OnePlus 10 Pro ಪ್ರಮುಖ Snapdragon 8 Gen 1 SoC ನಿಂದ ಚಾಲಿತವಾಗಿದ್ದು, 12GB ಯ LPDDR5 RAM ನೊಂದಿಗೆ ಸಂಯೋಜಿತಗೊಂಡಿದೆ.
ಇದನ್ನೂ ಓದಿ: Realme GT 2 Pro ಏಪ್ರಿಲ್ 7ಕ್ಕೆ ಭಾರತದಲ್ಲಿ ಲಾಂಚ್: ಬೆಲೆ ಎಷ್ಟು?
ಕ್ಯಾಮೆರಾ ಹೇಗಿದೆ?: ಒನ್‍ಪ್ಲಸ್ 10 ಪ್ರೋ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪರ್ಚರ್ ಲೆನ್ಸ್‌ನೊಂದಿಗೆ 48-ಮೆಗಾಪಿಕ್ಸೆಲ್ ಸೋನಿ IMX789 ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಅಲ್ಟ್ರಾ-ವೈಡ್ 8 ಫೋಟೋಗ್ರಫಿಗಾಗಿ f/2.2 ಅಪರ್ಚರ್ ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL JN1 ಸಂವೇದಕ ಮತ್ತು 3.3x ಆಪ್ಟಿಕಲ್ ಜೂಮ್‌ನೊಂದಿಗೆ ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರ್. ಸ್ಮಾರ್ಟ್‌ಫೋನ್ ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೋನಿ IMX615 ಕ್ಯಾಮೆರಾ ಸಂವೇದಕವನ್ನು f/2.4 ಅಪರ್ಚರ್ ಲೆನ್ಸ್‌ನೊಂದಿಗೆ ಅಳವಡಿಸಲಾಗಿದೆ.
ಟ್ವಿಟರ್‌ನಲ್ಲಿ ಮಾಹಿತಿ: ಒನ್‌ಪ್ಲಸ್ 10 ಪ್ರೋ ಸ್ಮಾರ್ಟ್ ಬಿಡುಗಡೆ ಬಗ್ಗೆ ಕಂಪನಿಯು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. The specs are already out, what else is there to expect? ಎಂಬ ಟ್ವೀಟ್‌ನಲ್ಲಿ ಲಾಂಚ್ ದಿನಾಂಕ ಮತ್ತು ಸಮಯದ ಮಾಹಿತಿಯನ್ನು ನೀಡಿದೆ. ಮಾರ್ಚ್ ಅಂತ್ಯದ ವೇಳೆಗೆ ಪ್ರಮುಖ OnePlus ಸ್ಮಾರ್ಟ್‌ಫೋನ್ ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ಪಾದಾರ್ಪಣೆ ಮಾಡಲಿದೆ ಎಂದು MWC 2022 ರಲ್ಲಿ ಕಂಪನಿಯ ಘೋಷಣೆಗೆ ಅನುಗುಣವಾಗಿ ಬಿಡುಗಡೆ ವೇಳಾಪಟ್ಟಿಯನ್ನು ರೂಪಿಸಲಾಗಿದೆ.