
ಇದು ಐ ಫೋನ್ (iPhone) ಜಮಾನಾ. ಹೊಸ ಐ ಫೋನ್ ಮಾರ್ಕೆಟ್ ಗೆ ಬರ್ತಿದ್ದಂತೆ ಜನರು ಅದಕ್ಕೆ ಅಪ್ ಗ್ರೇಡ್ ಆಗ್ತಾರೆ. ಹಳೆ ಈ ಫೋನ್ ಎಕ್ಸ್ ಚೇಂಜ್ ಮಾಡೋರು ಒಂದಿಷ್ಟು ಮಂದಿಯಾದ್ರೆ ಕೆಲವರು ಹಳೆ ಫೋನ್ ಜೊತೆ ಹೊಸ ಫೋನ್ ಕೂಡ ಮನೆಯಲ್ಲೇ ಇಟ್ಟುಕೊಂಡಿರ್ತಾರೆ. ನಿಮ್ಮ ಬಳಿಯೂ ಹಳೆ ಐ ಫೋನ್ ಇದೆ ಎಂದಾದ್ರೆ ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಮುಂದಿನ ದಿನಗಳಲ್ಲಿ ಈ ಐ ಫೋನ್ ಗಳಿಗೆ ಹೆಚ್ಚು ಬೇಡಿಕೆ ಬರುವ ಸಾಧ್ಯತೆ ಇದೆ.
ಆಪಲ್ನ ಹೊಸ ಐಫೋನ್ 16 ಸರಣಿ ಫೇಮಸ್ ಆಗ್ತಿರೋ ಕಾರಣಕ್ಕೆ ಮೊದಲೇ ಹೇಳಿದಂತೆ ಜನರು ಹಳೆ ಫೋನ್ ಬಿಟ್ಟು ಹೊಸ ಫೋನ್ ಗೆ ಅಪ್ಗ್ರೇಡ್ ಆಗ್ತಿದ್ದಾರೆ. ಹಾಗಾಗಿ ಕೆಲ ಹಳೆಯ ಐಫೋನ್ ಈಗ ವಿಂಟೇಜ್ ಅಥವಾ ಕಲೆಕ್ಟರ್ಸ್ ಐಟಂ ಪಟ್ಟಿಗೆ ಸೇರ್ತಿದೆ. ಇದ್ರಿಂದ ಅವುಗಳ ಬೆಲೆ ಲಕ್ಷಾಂತರ ರೂಪಾಯಿಗೆ ಏರಿಕೆ ಆಗ್ತಿದೆ. ಹಳೆ ಪೆನ್, ಹಳೆ ನಾಣ್ಯ, ಹಿಂದಿನ ಕಾಲದ ವಸ್ತುಗಳನ್ನು ದುಬಾರಿ ಬೆಲೆಗೆ ಖರೀದಿ ಮಾಡುವ ಜನರು ನಮ್ಮಲ್ಲಿರುವಂತೆ ಹಳೆ ಐ ಫೋನ್ ಸಂಗ್ರಹಿಸಲು ದುಬಾರಿ ಬೆಲೆ ನೀಡುವ ಕೆಲವರು ಪ್ರಪಂಚದಾದ್ಯಂತ ಇದ್ದಾರೆ.
ಮೊದಲು ಬಿಡುಗಡೆಯಾದ ಐ ಫೋನ್ ಯಾವ್ದು? : ಐ ಫೋನ್ 2007 ರಲ್ಲಿ ಬಿಡುಗಡೆಯಾಯ್ತು. ಮೊದಲ ಐಫೋನ್ 2G ಈಗ ಇತಿಹಾಸದ ಭಾಗವಾಗಿದೆ. ಸೀಲ್ ಮಾಡಿದ 8GB ಘಟಕವನ್ನು ಸುಮಾರು 1.5 ಕೋಟಿಗೆ ಹರಾಜಿನಲ್ಲಿ ಮಾರಾಟ ಮಾಡಲಾಗಿದೆ. ಒಂದ್ವೇಳೆ ಐಫೋನ್ 2 ಜಿ ನಿಮ್ಮ ಬಳಿ ಒಳ್ಳೆ ಸ್ಥಿತಿಯಲ್ಲಿದ್ರೆ ಇಲ್ಲವೆ ಹಾಳಾಗಿದ್ರೂ ಅದನ್ನು ಮಾರಾಟ ಮಾಡ್ಬಹುದು. ಭಾರತದಲ್ಲಿ 50,000 ರೂಪಾಯಿಯಿಂದ 2 ಲಕ್ಷ ರೂಪಾಯಿವರೆಗೆ ಈ ಮೊಬೈಲ್ ಮಾರಾಟ ಆಗ್ತಿದೆ.
ಐಫೋನ್ 3G (2008) : ಇದು ಮೊದಲ ಐಫೋನ್ನಷ್ಟು ಅಪರೂಪವಲ್ಲದಿದ್ದರೂ, ಅದರ ಬಾಗಿದ ಹಿಂಭಾಗ ಗಮನ ಸೆಳೆದಿತ್ತು. ಅಲ್ಲದೆ ಆಪ್ ಸ್ಟೋರ್ ಪರಿಚಯ ಇದ್ರಿಂದಲೇ ಆಗಿದೆ. ನಿಮ್ಮ ಬಳಿ ಈ ಮೊಬೈಲ್ ಉತ್ತಮ ಸ್ಥಿತಿಯಲ್ಲಿ ಇದ್ದರೆ ಆಕರ್ಷಕ ಬೆಲೆಗೆ ಇದನ್ನು ಮಾರಾಟ ಮಾಡಬಹುದು. ಈ ಫೋನ್ ಮಾರಾಟ ಮಾಡಿ 50,000 ರೂಪಾಯಿವರೆಗೆ ಹಣ ಗಳಿಸಬಹುದು.
ಐಫೋನ್ 4 : ಗ್ಲಾಸ್ ಬಾಡಿ ಮತ್ತು ರೆಟಿನಾ ಡಿಸ್ಪ್ಲೇಯೊಂದಿಗೆ 2010ರಲ್ಲಿ ಬಂದ ಐಫೋನ್ 4 ಆಪಲ್ನ ವಿನ್ಯಾಸದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತ್ತು. ಈ ಮಾಡೆಲ್ ಸಾಕಷ್ಟು ಜನಪ್ರಿಯವಾಗಿತ್ತು. ಈ ಫೋನ ಅಂದಾಜು ಬೆಲೆ 15 ಸಾವಿರದಿಂದ 75 ಸಾವಿರ ರೂಪಾಯಿಗೆ ಮಾರಾಟವಾಗುವ ಸಾಧ್ಯತೆ ಇದೆ.
ಐಫೋನ್ 5: ಇನ್ನು ಸ್ಟೀವ್ ಜಾಬ್ಸ್ ವಿನ್ಯಾಸಗೊಳಿಸಿದ ಕೊನೆಯ ಐಫೋನ್ ಇದಾಗಿದೆ. 2012ರಲ್ಲಿ ಇದು ಮಾರುಕಟ್ಟೆಗೆ ಬಂದಿತ್ತು. ಅನೇಕ ಸಂಗ್ರಹಕಾರರು ಇದ್ರ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಈ ಫೋನ್ ನಿಮ್ಮ ಬಳಿ ಇದ್ರೆ ಅದನ್ನು ಮಾರಾಟ ಮಾಡಿ 15 ರಿಂದ 35 ಸಾವಿರ ರೂಪಾಯಿ ಗಳಿಸಬಹುದು.
ಐಫೋನ್ SE : ಐಫೋನ್ 5s ನಂತೆ ಕಾಣುವ ಈ ಫೋನ್ ಒಳಗಿನಿಂದ ಹೆಚ್ಚು ಬಲಿಷ್ಠವಾಗಿದೆ. ಮುಂಬರುವ ವರ್ಷಗಳಲ್ಲಿ ಅದರ ಮೌಲ್ಯ ಹೆಚ್ಚಾಗುವ ಸಾಧ್ಯತೆ ಇದೆ. ಈ ಫೋನ್ ನಿಮ್ಮ ಬಳಿ ಇದ್ರೆ ಇದನ್ನು ಕಳೆದುಕೊಳ್ಬೇಡಿ. ಸ್ವಲ್ಪ ದಿನ ನಿಮ್ಮ ಬಳಿಯೇ ಇಟ್ಕೊಳ್ಳಿ. ವರ್ಷಗಳ ನಂತ್ರ ಇದನ್ನು ದುಬಾರಿ ಬೆಲೆಗೆ ಮಾರಾಟ ಮಾಡುವ ಅವಕಾಶ ನಿಮಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.