ಸೆ.13ಕ್ಕೆ ಭಾರತದಲ್ಲಿ Motorola Edge 30 Ultra, Edge 30 Fusion ಫೋನ್ ಲಾಂಚ್

Published : Sep 11, 2022, 11:27 AM IST
ಸೆ.13ಕ್ಕೆ ಭಾರತದಲ್ಲಿ Motorola Edge 30 Ultra, Edge 30 Fusion ಫೋನ್ ಲಾಂಚ್

ಸಾರಾಂಶ

* ಭಾರತದಲ್ಲಿ ಬಿಡುಗಡೆಯಾಗಲಿರುವ ಮೊಟೊರೋಲಾ ಫೋನ್ ಈಗಾಗಲೇ ಯುರೋಪ್‌ನಲ್ಲಿ ಲಾಂಚ್ ಆಗಿವೆ * ಮೊಟೊರೋಲಾ ಎಡ್ಜ್ 30 ಅಲ್ಟ್ರಾ, ಎಡ್ಜ್ 30 ಫ್ಯೂಶನ್ ಬೆಲೆ ನಿರ್ದಿಷ್ಟವಾಗಿ ಇನ್ನೂ ಗೊತ್ತಾಗಿಲ್ಲ * ಈ ಫೋನ್‌ಗಳ ಬಿಡುಗಡೆಯನ್ನು ಟ್ವಿಟರ್‌ನಲ್ಲಿ ಮಾಹಿತಿ ಷೇರ್ ಮಾಡುವ ಮೂಲಕ ಖಚಿತಪಡಿಸಿದ ಮೊಟೊರೋಲಾ  

ಮೊಟೊರೋಲಾ ಕಂಪನಿಯು ಭಾರತದಲ್ಲಿ ಎರಡು ಹೊಸ ಫೋನ್‌ ಲಾಂಚ್ ಮಾಡಲಿದೆ. ಮೊಟೊರೋಲಾ ಎಡ್ಜ್ 30 ಅಲ್ಟ್ರಾ (Motorola Edge 30 Ultra) ಮತ್ತು  ಮೊಟೊರೋಲಾ ಎಡ್ಜ್ 30 ಫ್ಯೂಸನ್ (Motorola Edge 30 Fusion) ಎಂಬೆರಡು ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯು ಸೆಪ್ಟೆಂಬರ್ 13ರಂದು ಬಿಡುಗಡೆ ಮಾಡಲು ಹೊರಟಿದೆ. ಮೊಟೊರೋಲಾ ಕಂಪನಿಯು  ತನ್ನ ಟ್ವಿಟರ್ ಖಾತೆಯ ಮೂಲಕ ಫ್ಲಿಪ್‌ಕಾರ್ಟ್ ಮತ್ತು ರಿಟೇಲ್ ಸ್ಟೋರ್‌ಗಳಿಂದ ಖರೀದಿ ಲಭ್ಯತೆಯೊಂದಿಗೆ ಸೆಪ್ಟೆಂಬರ್ 13 ರಂದು ಭಾರತದಲ್ಲಿ ಎರಡು ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಅಂದರೆ, ಈ ಎರಡು ಫೋನ್‌ಗಳು ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆಸಿಗಲಿದೆ.

Realme C33 ಬಿಡುಗಡೆ, ನಿಮ್ಮ ಜೇಬಿಗೆ ಹೊರೆಯಾಗೋಲ್ಲ ಈ ಫೋನ್!

ಯುರೋಪಿಯನ್ ಮಾರುಕಟ್ಟೆಯಲ್ಲಿ Motorola Edge 30 Ultra ಮತ್ತು Motorola Edge 30 Fusion ಈಗಾಗಲೇ ಮಾರಾಟಕ್ಕೆ ಸಿಗುತ್ತಿವೆ. ಆದ್ದರಿಂದ, ಎಡ್ಜ್ 30 ಫ್ಯೂಷನ್ ಅನ್ನು ಯುರೋಪ್‌ನಲ್ಲಿ 600 (ಸುಮಾರು 47,850 ರೂ.) ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಯಿತು. ಕಾಸ್ಮಿಕ್ ಗ್ರೇ, ಅರೋರಾ ವೈಟ್, ಸೋಲಾರ್ ಗೋಲ್ಡ್ ಮತ್ತು ವೆಗಾನ್ ಲೆದರ್ ಫಿನಿಶ್ ಹೊಂದಿರುವ ನೆಪ್ಚೂನ್ ಬ್ಲೂ ಬಣ್ಣಗಳಲ್ಲಿ ಎಡ್ಜ್ 30 ಫ್ಯೂಷನ್‌ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಸಿಗಲಿದೆ. ಎಡ್ಜ್ 30 ಅಲ್ಟ್ರಾ ಅದೇ ರೀತಿ ಯುರೋ 899.99 (ಸುಮಾರು 72,900 ರೂ.) ಬೆಲೆಯಲ್ಲಿದೆ ಮತ್ತು ಇಂಟರ್ ಸ್ಟೆಲ್ಲರ್ ಬ್ಲ್ಯಾಕ್ ಮತ್ತು ಸ್ಟಾರ್‌ಲೈಟ್ ವೈಟ್‌ ಬಣ್ಣಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

Moto Edge 30 Ultra ನಲ್ಲಿರುವ 6.67-ಇಂಚಿನ Full-HD+ OLED ಡಿಸ್ಪ್ಲೇ 144Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ ಮತ್ತು ಕಾರ್ನಿಂಗ್ ಗೊರಿಲ್ಲಾ 5 ನಿಂದ ರಕ್ಷಿಸಲ್ಪಟ್ಟಿದೆ. Motorola Edge 30 Ultra ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿದೆ: 12 MP ಟೆಲಿಫೋಟೋ ಲೆನ್ಸ್, 50 MP ಅಲ್ಟ್ರಾ-ವೈಡ್ ಲೆನ್ಸ್, ಮತ್ತು f/1.9 ಅಪರ್ಚರ್ ಮತ್ತು OIS ಜೊತೆಗೆ 200 MP ಮುಖ್ಯ ಸಂವೇದಕವನ್ನು ಕಾಣಬಹುದು. ಮುಂಭಾಗದ ಕ್ಯಾಮೆರಾ ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನವನ್ನು ಹೊಂದಿದೆ ಮತ್ತು 60 MP ಕ್ಯಾಮೆರಾ ಆಗಿದೆ. ಈ ಸ್ಮಾರ್ಟ್ಫೋನ್  4,610 mAh ಬ್ಯಾಟರಿಯನ್ನು ಹೊಂದಿದ್ದು, ಅದು 125W ಟರ್ಬೋಪವರ್ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Motorola Edge 30 Fusion ಸ್ಮಾರ್ಟ್‌ಫೋನ್ 6.55-ಇಂಚಿನ ಡಿಸ್‌ಪ್ಲೇ 144Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಸ್ನಾಪ್‌ಡ್ರಾಗನ್ 888+ SoC ಮತ್ತು 12 GB ವರೆಗಿನ LPDDR5 RAM ಸ್ಮಾರ್ಟ್‌ಫೋನ್‌ಗೆ ಶಕ್ತಿ ನೀಡುತ್ತದೆ. ಎಡ್ಜ್ 30 ಫ್ಯೂಷನ್‌ನ ಕ್ಯಾಮೆರಾವು 50- ಮೆಗಾ ಪಿಕ್ಸೆಲ್ ಮುಖ್ಯ ಸಂವೇದಕ, 13-ಮೆಗಾ ಪಿಕ್ಸೆಲ್ ಅಲ್ಟ್ರಾವೈಡ್ ಸಂವೇದಕ ಮತ್ತು 2- ಮೆಗಾ ಪಿಕ್ಸೆಲ್ ಆಳ ಸಂವೇದಕವನ್ನು ಹೊಂದಿದೆ.

ಅಕ್ಟೋಬರ್ 6ರಂದು ಗೂಗಲ್ ಪಿಕ್ಸೆಲ್ 7 ಅನಾವರಣ; ಏನಿದರ ವಿಶೇಷತೆ

ಈ ಫೋನ್ ಫ್ರಂಟ್‌ನಲ್ಲಿ 32 - ಮೆಗಾ ಪಿಕ್ಸೆಲ್  ಕ್ಯಾಮೆರಾವನ್ನು ಕಂಪನಿಯು ಅಳವಡಿಸಿದೆ. ಎಡ್ಜ್ 30 ಅಲ್ಟ್ರಾದಲ್ಲಿ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯಲ್ಲಿ 200 - ಮೆಗಾ ಪಿಕ್ಸೆಲ್ ಪ್ರಾಥಮಿಕ ಸಂವೇದಕ, 50- ಮೆಗಾ ಪಿಕ್ಸೆಲ್ ಸೆಕೆಂಡರಿ ಸಂವೇದಕ ಮತ್ತು 12-ಮೆಗಾ ಪಿಕ್ಸೆಲ್ ಮೂರನೇ ಸಂವೇದಕವನ್ನು ಸೇರಿಸಲಾಗಿದೆ. 60 ಮೆಗಾ ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಮುಂಭಾಗದ ಕ್ಯಾಮೆರಾವನ್ನು ಸೇರಿಸಲಾಗಿದೆ. 68W ಟರ್ಬೋಪವರ್ ಕ್ಷಿಪ್ರ ಚಾರ್ಜಿಂಗ್ ಅನ್ನು ಬೆಂಬಲಿಸುವ 4,400 mAh ಬ್ಯಾಟರಿ ಮತ್ತು USB ಟೈಪ್-C ಚಾರ್ಜಿಂಗ್ ಕನೆಕ್ಟರ್ ಮೊಟೊರೊಲಾ ಎಡ್ಜ್ 30 ಫ್ಯೂಷನ್‌ಗೆ ಶಕ್ತಿ ನೀಡುತ್ತದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

75 ಸಾವಿರದ ಫೋನ್‌ ಬರೀ 37 ಸಾವಿರಕ್ಕೆ, ಇದು ಫ್ಲಿಪ್‌ಕಾರ್ಟ್‌ ಬೆಸ್ಟ್‌ ಆಫರ್‌
ಸ್ಮಾರ್ಟ್‌ಫೋನ್‌ ಬೆಲೆ ಏರಿಸಿದ ವಿವೋ, ರಿಯಲ್‌ಮೀ, ಟ್ಯಾಬ್ಲೆಟ್‌ ಬೆಲೆ ಏರಿಸಿದ ಶಿಯೋಮಿ