ಪುಟ್ಟ ಕೋತಿ ಮರಿಯೂ ಸ್ಮಾರ್ಟ್ ಫೋನ್‌ಗೆ ಬೆರಗಾಗಿ ಅದನ್ನು ಎಳೆದಾಡುತ್ತಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯ ಕಾಮೆಂಟ್ ಮಾಡಿದ್ದಾರೆ.
ಸ್ಮಾರ್ಟ್ ಫೋನ್ ಎಂಬ ಮ್ಯಾಗ್ನೆಟ್ ಇಂದು ಪುಟ್ಟ ಮಕ್ಕಳು, ಯುವ ಸಮುದಾಯ ಇನ್ನು ನಗರ ಪ್ರದೇಶಗಳಲ್ಲಿ ವೃದ್ಧರೂ ಸೇರಿದಂತೆ ಎಲ್ಲರಿಗೂ ಬಿಡಲಾರದ ಗೀಳಾಗಿ ಕಾಡುತ್ತಿದೆ. ಕೆಲವರಂತೂ ಸ್ಮಾರ್ಟ್ ಫೋನ್‌ಗೆ ಎಷ್ಟು ಆಡಿಕ್ಟ್ ಆಗಿದ್ದಾರೆ ಎಂದರೆ ಸ್ಲಾರ್ಟ್ ಫೋನ್ ಕೈಯಲ್ಲಿ ಇಲ್ಲದಿದ್ದರೆ ಹುಚ್ಚರಂತಾಗುತ್ತಾರೆ. ಅವರಿಗೆ ನಿಂತಲ್ಲಿ ನಿಲ್ಲಲಾಗದು ಕೂತಲ್ಲಿ ಕೂರಲಾಗದು ಎಣ್ಣೆಯ ನಶೆಗೆ ಶರಣಾದ ಕುಡುಕನಿಗೆ ಶರಾಬು ಸಿಗದಿದ್ದರೆ ಹೇಗೆ ಚಡಪಡಿಸುತ್ತಾರೋ ಅಂತಹದ್ದೇ ಪರಿಸ್ಥಿತಿ ಸ್ಮಾರ್ಟ್ ಫೋನ್ ಗೀಳಿಗೆ ಬಲಿಯಾದವರಾದಾಗಿದೆ. ಇದೆಲ್ಲಾ ಈಗ್ಯಾಕೆ ಅಂತ ಕೇಳ್ತಿದ್ದೀರಾ ಇಲ್ಲೊಂದು ಕಡೆ ಪುಟ್ಟ ಕೋತಿ ಮರಿಯೂ ಸ್ಮಾರ್ಟ್ ಫೋನ್‌ಗೆ ಬೆರಗಾಗಿ ಅದನ್ನು ಎಳೆದಾಡುತ್ತಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯ ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋ ನೋಡಿದರೆ ಮನುಷ್ಯರ ಯುವ ಪೀಳಿಗೆ ಮಾತ್ರವಲ್ಲ ಸ್ಮಾರ್ಟ್‌ಫೋನ್‌ಗೆ ಶರಣಾಗಿರುವುದು, ಕೋತಿಗಳ ಯುವ ಪೀಳಿಗೆಯೂ ಸ್ಮಾರ್ಟ್ ಫೋನ್‌ಗೆ ಆಸೆ ಪಡುತ್ತಿದೆ ಎಂದು ಹೇಳುವಂತಿದೆ. ಈ ವಿಡಿಯೋ ತಾಯಿಯ ಜೊತೆ ಇರುವ ಪುಟ್ಟ ಕೋತಿಯೊಂದು ಸ್ಮಾರ್ಟ್ಫೋನ್ ನೋಡಿದೊಡನೆ ಒಂದೇ ಸಮನೆ ಫೋನ್ ಅನ್ನು ವ್ಯಕ್ತಿಯ ಕೈಯಿಂದ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಇದನ್ನು ನೋಡಿದ ತಾಯಿ ಕೋತಿ ತನ್ನ ಮರಿಯನ್ನು ಫೋನ್ ಸಮೀಪದಿಂದ ಎಳೆದು ತನ್ನ ಪಕ್ಕಕ್ಕೆ ಕೂರಿಸಿಕೊಳ್ಳುತ್ತಿದೆ. ಆದರೆ ಸ್ಮಾರ್ಟ್ ಫೋನ್ ಮೋಹಕ್ಕೆ ಒಳಗಾಗಿರುವ ಕೋತಿ ಮರಿ ಮತ್ತೆ ವ್ಯಕ್ತಿಯ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಅನ್ನು ಎಳೆಯಲು ಪ್ರಯತ್ನಿಸುತ್ತದೆ. ಇತ್ತ ತಾಯಿಯೂ ಮತ್ತೆ ತನ್ನ ಮಗುವನ್ನು ಪಕ್ಕಕ್ಕೆ ಎಳೆದುಕೊಳ್ಳುತ್ತದೆ.
Young generation is mad with smart phones ☺️ pic.twitter.com/hFg8SH9VyZ
— Susanta Nanda IFS (@susantananda3)undefined
ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಫೋಸ್ಟ್ ಮಾಡಿದ್ದು, ಯುವ ಪೀಳಿಗೆ ಸ್ಮಾರ್ಟ್ ಫೋನ್‌ಗೆ ದಾಸರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ನೋಡಿ ಅನೇಕರು, ಇದು ಪ್ರತಿ ಮನೆಯ ಕತೆ ಎಂದು ಕಾಮೆಂಟ್ ಮಾಡಿದ್ದಾರೆ. ಇಲ್ಲೂ ಅಮ್ಮನ ಸ್ಥಿತಿ ಹಾಗೆಯೇ ಇದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಉಸಿರಾಡಲು ಕಷ್ಟಪಡುತ್ತಿದ್ದ ಕೋತಿ ಮರಿಯ ಜೀವ ಉಳಿಸಿದ ತಾಯಿ
ಈ ವಿಡಿಯೋ ನೋಡಿದರೆ ಸ್ಮಾರ್ಟ್‌ಫೋನ್ ಮೋಹಕ್ಕೆ ಒಳಗಾಗಿರುವ ಪುಟ್ಟ ಮಕ್ಕಳನ್ನು ತಾಯಂದಿರು ಫೋನ್‌ನಿಂದ ದೂರ ಸರಿಸುತ್ತಿರುವ ದೃಶ್ಯ ನೆನಪಾಗುತ್ತದೆ. ಇಂದು ಶಾಲೆಗೆ ಹೋಗುವ ಪುಟ್ಟ ಪುಟ್ಟ ಮಕ್ಕಳು ಕೂಡ ಮೊಬೈಲ್‌ಗೆ ದಾಸರಾಗಿದ್ದಾರೆ. ಅಪ್ಪ ಅಮ್ಮ ಬೇರೆನೋ ಕೆಲಸದಲ್ಲಿ ಮುಳುಗಿದ್ದರೆ, ಮಕ್ಕಳು ಪೋಷಕರ ಫೋನ್ ತೆಗೆದುಕೊಂಡು ವಿಡಿಯೋ ಫೋಟೋ ತೆಗೆದುಕೊಂಡು, ಜೊತೆಗೆ ಗೇಮ್ ಆಡುವುದಲ್ಲದೇ ಆನ್ಲೈನ್‌ನಲ್ಲಿ ಬುಕ್ಕಿಂಗ್ ಸೇರಿದಂತೆ ಏನೇನೋ ಕಿತಾಪತಿಗಳನ್ನು ಮಾಡಿ ಪೋಷಕರಿಗೆ ತಲೆನೋವು ತರಿಸುತ್ತಿರುತ್ತಾರೆ. ಸ್ಮಾರ್ಟ್ ಫೋನ್ ಗೀಳಿನಿಂದ ಮಕ್ಕಳನ್ನು ಹೊರತರಲು ಪೋಷಕರೂ ಕೂಡ ಸಾಕಷ್ಟು ಹೆಣಗಾಡುತ್ತಾರೆ. ಈ ಗೀಳು ಎಷ್ಟು ಅಪಾಯಕಾರಿ ಎಂದರೆ ಮಕ್ಕಳು ತಮ್ಮ ಪಠ್ಯದ ಕೆಲಸಗಳನ್ನು ಮರೆಯುವುದರ ಜೊತೆಗೆ ಇಹದ ಪ್ರಜ್ಞೆಯೇ ಇಲ್ಲದೇ ಸ್ಮಾರ್ಟ್‌ಫೋನ್ ಒಳಗೆ ಮುಳುಗಿರುತ್ತಾರೆ.
ಸುಮ್ಮನಿರಲಾರದೇ ಕೋತಿ ಜೊತೆ ಚೆಲ್ಲಾಟ: ಮುಂದೇನಾಯ್ತು ನೋಡಿ viral video
ಮಕ್ಕಳು ಹೀಗೆ ಆಡಲು ಪೋಷಕರು ಕೂಡ ಮುಖ್ಯ ಕಾರಣರಾಗುತ್ತಾರೆ. ಮಗು ಅಳುತ್ತದೆ, ಕಿರಿಕಿರಿ ಮಾಡುತ್ತದೆ, ಮೊಬೈಲ್ ಕೊಟ್ಟರೆ ಸುಮ್ಮನಿರುತ್ತದೆ ಎಂದು ಮೊಬೈಲ್ ತೋರಿಸುತ್ತಲೇ ಊಟ ತಿನ್ನಿಸುವ ಪೋಷಕರು, ನಂತರ ಮಕ್ಕಳ ಕೈಗೆ ಮೊಬೈಲ್ ಕೊಟ್ಟು, ತಲೆನೋವು ತಪ್ಪಿತ್ತು ಎಂದು ತಮ್ಮ ಪಾಡಿಗೆ ತಾವು ಬೇರೆಯದೇ ಕೆಲಸದಲ್ಲಿ ತೊಡಗುತ್ತಾರೆ. ಇದು ಮಕ್ಕಳು ದಾರಿ ತಪ್ಪಲು ಕಾರಣವಾಗುತ್ತದೆ. ಮಕ್ಕಳನ್ನು ಮೊಬೈಲ್‌ನ ಹೊರತಾಗಿ ಹತ್ತು ಹಲವು ಇತರ ದೈಹಿಕ ಚಟುವಟಿಕೆ ನೀಡುವ ಮೂಲಕ ಪೋಷಕರು ಸರಿ ದಾರಿಗೆ ತರಬೇಕಾಗಿದೆ.