ಕೈಗೆಟುವ ದರದ ಲಾವಾ ಬ್ಲೇಜ್ NXT ಫೋನ್ ಲಾಂಚ್, ಇದು ಬಜೆಟ್ ಫ್ರೆಂಡ್ಲಿ ಸ್ಮಾರ್ಟ್‌ಫೋನ್!

By Suvarna News  |  First Published Nov 25, 2022, 7:19 PM IST

ಲಾವಾ ಇದೀಗ ಹೊಸದಾಗಿ ಬ್ಲೇಜ್ NXT ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಹೈಟೆಕ್ ಸ್ಮಾರ್ಟ್‌ಫೋನ್ ಇದಾಗಿದ್ದು, ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ನೂತನ ಫೋನ್ ಬೆಲೆ ಹಾಗೂ ಫೀಚರ್ಸ್ ಇಲ್ಲಿದೆ.
 


ನವದೆಹಲಿ(ನ.25):  ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ʼ, ಇಂದು ಬ್ಲೇಜ್ NXT ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.  9,299 ರೂ  ಬೆಲೆಯ ʻಬ್ಲೇಜ್  NXT ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಮೂಲ ʻಬ್ಲೇಜ್ʼ ಸ್ಮಾರ್ಟ್‌ಫೋನ್  ಮಾದರಿಯಾಗಿದೆ. ಗ್ರಾಹಕರ ಪ್ರತಿಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ʻಬ್ಲೇಜ್ ಎನ್ಎಕ್ಸ್ಟಿʼಯನ್ನು ಪ್ರಾರಂಭಿಸಲಾಗಿದೆ ಮತ್ತು ಕೈಗೆಟುಕುವ ಬೆಲೆಯಲ್ಲಿ ಹೈಟೆಕ್ ಸ್ಮಾರ್ಟ್‌ಫೋನ್  ಪರಿಚಯಿಸುವ ಲಾವಾ ಸಂಸ್ಥೆಯ ಆಶಯಕ್ಕೆ ಇದು ಅನುಗುಣವಾಗಿದೆ. ಸಮಂಜಸವಾದ ಬೆಲೆಯ ಮತ್ತು ಉತ್ತಮ ವಿನ್ಯಾಸ, ಕ್ಯಾಮೆರಾ ಮತ್ತು ಬಳಕೆದಾರರ ಅನುಭವವನ್ನು ಹೊಂದಿರುವ ಹೊಸ ಸ್ಮಾರ್ಟ್‌ಫೋನ್, ನಮ್ಮ ಗ್ರಾಹಕರ ಒಟ್ಟಾರೆ ಅನುಭವವನ್ನು ಸುಧಾರಿಸಲು ವಿಶ್ವಾಸದಲ್ಲಿದ್ದೇವೆ.  ʻಬ್ಲೇಜ್ ಎನ್ಎಕ್ಸ್ಟಿʼ ಸ್ಮಾರ್ಟ್‌ಫೋನ್,  ಗ್ಲಾಸ್ ಬ್ಯಾಕ್‌ ಜೊತೆಗೆ ಬರುತ್ತದೆ.  ಮುಂದಿನ ಪೀಳಿಗೆಯ ಗ್ರಾಹಕರ ಬೇಡಿಕೆಗಳನ್ನು ಪೂರೈಸುವ ಅತ್ಯುತ್ತಮ ಆರಂಭಿಕ ಶ್ರೇಣಿಯ ಸ್ಮಾರ್ಟ್‌ಫೋನ್ ಇದಾಗಿದೆ ಎಂದು ಲಾವಾ ಇಂಟರ್ನ್ಯಾಷನಲ್ ಲಿಮಿಟೆಡ್ ಮುಖ್ಯಸ್ಥರಾದ ತೇಜಿಂದರ್ ಸಿಂಗ್ ಹೇಳಿದ್ದಾರೆ.

ಬ್ಲೇಜ್ ಎನ್ಎಕ್ಸ್ಟಿʼ ಸ್ಮಾರ್ಟ್ಫೋನ್, 16.55 ಸೆಂ.ಮೀ (6.5 ಇಂಚು) ಡಿಸ್ಪ್ಲೇ, ಆಕ್ಟಾ-ಕೋರ್ ʻಮೀಡಿಯಾಟೆಕ್ ಹೆಲಿಯೋ ಜಿ37ʼ ಚಿಪಿಸೆಟ್, 2.3 ghz ವರೆಗೆ ಗರಿಷ್ಠ ವೇಗವನ್ನು ಹೊಂದಿದೆ. ಇದು 4GB RAM ಒಳಗೊಂಡಿದ್ದು, ಹೆಚ್ಚುವರಿಯಾಗಿ 3GB ವಿಸ್ತರಣೆಗೆ ಅವಕಾಶವಿದೆ. ಇದರಿಂದ ಬಳಕೆದಾರರಿಗೆ ಮಲ್ಟಿ-ಟಾಸ್ಕಿಂಗ್ ಅನ್ನು ತಡೆರಹಿತವಾಗಿ ನಿರ್ವಹಿಸಲು ಅನುವಾಗಲಿದೆ. ಈ ಕಡಿಮೆ ಬೆಲೆಯ ಫೋನ್, 4GB RAM ಎಂದು  ತೇಜಿಂದರ್ ಸಿಂಗ್ ಹೇಳಿದ್ದಾರೆ. 

Tap to resize

Latest Videos

undefined

Lava Blaze 5G, ಇದು ದೇಶದ ಅತ್ಯಂತ ಅಗ್ಗದ 5ಜಿ ಫೋನ್!

ಅನ್ನು ಹೆಚ್ಚುವರಿಯಾಗಿ 3 GB ವರೆಗೆ ವಿಸ್ತರಿಸುವ ಅವಕಾಶ ನೀಡುವ ಜೊತೆಗೆ, 64GB ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.ʻಬ್ಲೇಜ್ ಎನ್ಎಕ್ಸ್ಟಿʼ, 13 ಮೆಗಾಪಿಕ್ಸೆಲ್ ಎಐ ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು ಸೆಲ್ಫಿಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.  ಕ್ಯಾಮೆರಾವು ಬಳಕೆದಾರರಿಗೆ  ಅಸಂಖ್ಯಾತ ನೆನಪುಗಳನ್ನು ಸೃಷ್ಟಿಸಲು ಮತ್ತು ʻಟೈಮ್ ಲ್ಯಾಪ್ಸ್ʼ, ʻಸ್ಲೋ ಮೋಷನ್ʼ ವೀಡಿಯೊಗಳು, ʻಜಿಫ್ʼಗಳು ಮತ್ತು ದಾಖಲೆ ಇಂಟಲಿಜೆಂಟ್ ಸ್ಕ್ಯಾನಿಂಗ್ ಸೇರಿದಂತೆ ಹೊಸ ರೀತಿಯಲ್ಲಿ ಜಗತ್ತನ್ನು ಅನ್ವೇಷಿಸಲು ಅನುವು ಮಾಡಿಕೊಡುವ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 

ಈ ಸ್ಮಾರ್ಟ್ಫೋನ್, ʻಬ್ಯೂಟಿ ಮೋಡ್ʼ ವೈಶಿಷ್ಟ್ಯಗಳಾದ ʻಸ್ಮೂಥನಿಂಗ್, ʻಸ್ಲಿಮ್ಮಿಂಗ್, ʻವೈಟೆನಿಂಗ್ʼ ಮತ್ತು ʻಐ ಎನ್ಲಾರ್ಜರ್ʼ ಮುಂತಾದವನ್ನು ಒಳಗೊಂಡಿದೆ. ಉತ್ಕೃಷ್ಟ ಮಾರಾಟ-ನಂತರದ ಗ್ರಾಹಕರ ಅನುಭವಕ್ಕಾಗಿ, ಗ್ರಾಹಕರಿಗೆ 'ಮನೆಯಲ್ಲೇ ಉಚಿತ ಸೇವೆ'ಯನ್ನು ಸಹ ಒದಗಿಸಲಾಗುವುದು, ಇದರಲ್ಲಿ ಗ್ರಾಹಕರು ವಾರಂಟಿ ಅವಧಿಯಲ್ಲಿ ತಮ್ಮ ಮನೆ ಬಾಗಿಲಲ್ಲೇ ಸೇವೆಯನ್ನು ಪಡೆಯಬಹುದು.ಈ ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ಇದು ಮೂರು ಬಣ್ಣಗಳಲ್ಲಿ ಲಭ್ಯವಿದೆ, ಅವುಗಳೆಂದರೆ: ಗ್ಲಾಸ್ ಬ್ಲ್ಯೂ, ಗ್ಲಾಸ್ ರೆಡ್ ಮತ್ತು ಗ್ಲಾಸ್ ಜಿರೀನ್.  ಗ್ಲಾಸ್ ಬ್ಯಾಕ್ ಮತ್ತು ಹಿಂಬದಿಯ ಫಿಂಗರ್ಪ್ರಿಂಟ್ ಸೆನ್ಸಾರ್ನೊಂದಿಗೆ ಪ್ರೀಮಿಯಂ ನೋಟವನ್ನು ಇದು ಹೊಂದಿದೆ.  

ಈ ಮೊಬೈಲ್, ಅನಾಮಧೇಯ ಕರೆ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ.ಇಂದಿನಿಂದ ʻಲಾವಾʼದ ರಿಟೇಲ್ ಜಾಲದಲ್ಲಿ ʻಬ್ಲೇಜ್ NXT ʼ ಲಭ್ಯವಿರುತ್ತದೆ. 

click me!