
Vivo X500 ಹೊಸ ಮೊಬೈಲ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಈ ಸರಣಿಯಲ್ಲಿ Vivo X500 ಮತ್ತು Vivo X500 Pro ಎಂಬ ಎರಡು ಸ್ಮಾರ್ಟ್‌ಫೋನ್‌ಗಳು ಇರಲಿವೆ. ಎರಡೂ ಫೋನ್‌ಗಳು ನಾಳೆ ನಾಡಿದ್ದು ಸೆಪ್ಟೆಂಬರ್ 21 2026ರಂದು ಬಿಡುಗಡೆಯಾಗಲಿವೆ. ಸದ್ಯಕ್ಕೆ ಈ ಬಿಡುಗಡೆ ಚೀನಾದಲ್ಲಿ ಮಾತ್ರ ನಡೆಯಲಿದೆ. ಇತರ ಮಾರುಕಟ್ಟೆಗಳಲ್ಲಿ Vivo ಈ ಸರಣಿಯ ಫೋನ್‌ಗಳನ್ನು ನಂತರ ಬಿಡುಗಡೆ ಮಾಡಲಿದೆ.
Vivo X500 ಮತ್ತು Vivo X500 Pro ಎರಡೂ ಫೋನ್‌ಗಳಲ್ಲಿ ಇತ್ತೀಚೆಗೆ ಘೋಷಿಸಲಾದ MediaTek ನ ಹೊಸ ಚಿಪ್‌ಸೆಟ್ ಇರಲಿದೆ ಎಂಬುದು ಖಚಿತವಾಗಿದೆ. ಈ ಸರಣಿಯನ್ನು ಭಾರತದಲ್ಲೂ ಏಕಕಾಲಕ್ಕೆ Vivo ಬಿಡುಗಡೆ ಮಾಡಲಿದೆಯೇ ಎಂಬುದು ಸದ್ಯ ಕುತೂಹಲ ಮೂಡಿಸಿದೆ.
Vivo X500 ಮತ್ತು Vivo X500 Pro 5G ಸ್ಮಾರ್ಟ್‌ಫೋನ್‌ಗಳು MediaTek Dimensity 9600 Pro SoC ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿವೆ. MediaTek ಇತ್ತೀಚೆಗಷ್ಟೇ ಈ ಹೊಸ ಚಿಪ್‌ಸೆಟ್ ಅನ್ನು ಘೋಷಿಸಿತ್ತು. ಇದೀಗ Vivo ಕೂಡ ತನ್ನ ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಚಿಪ್ ಬಳಸುವುದನ್ನು ಖಚಿತಪಡಿಸಿದೆ. ವಿವೋ ಜೊತೆಗೆ OPPO ಕೂಡ ತನ್ನ Find X10 ಸರಣಿಯ ಫೋನ್‌ನಲ್ಲಿ ಇದೇ ಚಿಪ್‌ಸೆಟ್ ಬಳಸುವುದಾಗಿ ತಿಳಿಸಿದೆ. Vivo X500 Proನಲ್ಲಿ 10-bit Log ಜೊತೆಗೆ ಪ್ರತಿ ಸೆಕೆಂಡ್‌ಗೆ 120 ಫ್ರೇಮ್‌ಗಳ ವೇಗದಲ್ಲಿ 4K ವಿಡಿಯೋ ರೆಕಾರ್ಡಿಂಗ್ ಸಪೋರ್ಟ್ ಸಿಗುವ ಸಾಧ್ಯತೆಯಿದೆ.
MediaTek Dimensity 9600 Pro SoC ಚಿಪ್‌ಸೆಟ್ 2nm ತಂತ್ರಜ್ಞಾನವನ್ನು ಆಧರಿಸಿರಲಿದೆ ಎಂಬುದು ವಿಶೇಷ. ಇದರಲ್ಲಿ ಆಕ್ಟಾ-ಕೋರ್ ಪ್ರೊಸೆಸರ್ ಇರಲಿದ್ದು, ಮೂರು Efficiency ಕೋರ್‌ಗಳು 3.10 GHz ವೇಗದಲ್ಲಿ, ಮೂರು Performance ಕೋರ್‌ಗಳು 4.35 GHz ವೇಗದಲ್ಲಿ ಮತ್ತು ಎರಡು Prime ಕೋರ್‌ಗಳು 4.55 GHz ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ಇದರೊಂದಿಗೆ OPPO ಕೂಡ ಇದೇ ಚಿಪ್‌ಸೆಟ್‌ನೊಂದಿಗೆ OPPO Find X10 Pro Max ಅನ್ನು ಚೀನಾದಲ್ಲಿ ಬಿಡುಗಡೆ ಮಾಡಲಿದೆ. OPPO Find X10 Pro Max ಬಿಡುಗಡೆ ಸೆಪ್ಟೆಂಬರ್ 22ರಂದು ನಡೆಯಲಿದೆ. ಇದಕ್ಕೂ ಒಂದು ದಿನ ಮುಂಚಿತವಾಗಿ, ಅಂದರೆ ಸೆಪ್ಟೆಂಬರ್ 21, 2026ರಂದು Vivo X500 ಸರಣಿ ಬಿಡುಗಡೆಯಾಗಲಿದೆ. ಹೀಗಾಗಿ ಮುಂದಿನ ವಾರ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕುತೂಹಲ ಮೂಡಿಸುವ ವಾರವಾಗಲಿದೆ. Vivo ಮತ್ತು OPPO ಎರಡೂ ಹೊಸ ಹಾಗೂ ಶಕ್ತಿಶಾಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿವೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.