ಸತತ ಮೂರನೇ ತ್ರೈಮಾಸಿಕದಲ್ಲಿ ಭಾರತದ ಸ್ಮಾರ್ಟ್‌ಫೋನ್ ಮಾರಾಟ ಕುಸಿತ: ಅಗ್ರಸ್ಥಾನ ಕಾಯ್ದುಕೊಂಡ ಶಾಓಮಿ

By Suvarna News  |  First Published May 9, 2022, 8:55 PM IST

ಐಡಿಸಿ ವರದಿಯ ಪ್ರಕಾರ  ಶಾಓಮಿ, ಸ್ಯಾಮಸಂಗ್, ವಿವೋ, ಮತ್ತು ಓಪ್ಪೋ  2022ರ ಮೊದಲ ತ್ರೈಮಾಸಿಕದಲ್ಲಿ ತಮ್ಮ ಸಾಗಣೆಯಲ್ಲಿ ಕುಸಿತ ಕಂಡಿವೆ.


India Smartphone Shipments: ಭಾರತದ ಸ್ಮಾರ್ಟ್‌ಫೋನ್ ಸಾಗಣೆಗಳು ಸತತ ಮೂರನೇ ತ್ರೈಮಾಸಿಕದಲ್ಲಿ ಕುಸಿದಿದ್ದು, 2022ರ ಮೊದಲ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಐದು ಪ್ರತಿಶತದಷ್ಟು ಇಳಿಕೆಯಾಗಿದೆ ಎಂದು ಐಡಸಿ ವರದಿ ತಿಳಿಸಿದೆ. ಶಾಓಮಿ ಮಾರುಕಟ್ಟೆಯಲ್ಲಿ ತನ್ನ ನಾಯಕತ್ವವನ್ನು ಉಳಿಸಿಕೊಂಡಿದ್ದರೂ, ರಿಯಲ್‌ಮಿ ಹೊರತುಪಡಿಸಿ ಎಲ್ಲಾ ಅಗ್ರ-ಐದು ಮಾರಾಟಗಾರರು ತ್ರೈಮಾಸಿಕದಲ್ಲಿ ತಮ್ಮ ಸಾಗಣೆಯಲ್ಲಿ ಕುಸಿತವನ್ನು ಕಂಡಿದ್ದಾರೆ. 

ಕೋವಿಡ್ 19ರ ಮೂರನೇ ಅಲೆ ಪ್ರಭಾವ, ವಿಶೇಷವಾಗಿ ಕಡಿಮೆ ಬೆಲೆಯ ವಿಭಾಗಗಳಿಗೆ ಪೂರೈಕೆ ನಿರ್ಬಂಧಗಳು ಮತ್ತು ಏರುತ್ತಿರುವ ಹಣದುಬ್ಬರವು ಸ್ಮಾರ್ಟ್‌ಫೋನ್ ಮಾರಾಟ ಕುಸಿತಕ್ಕೆ ಪ್ರಮುಖ ಕಾರಣವಾಗಿರುವ ಸಾಧ್ಯತೆಗಳಿವೆ. 

Tap to resize

Latest Videos

undefined

ಮಾರುಕಟ್ಟೆ ಸಂಶೋಧನಾ ಸಂಸ್ಥೆ ಇಂಟರ್‌ನ್ಯಾಶನಲ್ ಡಾಟಾ ಕಾರ್ಪೊರೇಷನ್ (IDC) ಇತ್ತೀಚಿನ ವರದಿಯ ಪ್ರಕಾರ, ದೇಶದಲ್ಲಿ ಸ್ಮಾರ್ಟ್‌ಫೋನ್ ಸಾಗಣೆಗಳು ಮೊದಲ ತ್ರೈಮಾಸಿಕದಲ್ಲಿ 37 ಮಿಲಿಯನ್ ಯುನಿಟ್‌ಗಳಿಗೆ ಇಳಿದಿದೆ. 

ಅಗ್ರಸ್ಥಾನ ಉಳಿಸಿಕೊಂಡ ಶಾಓಮಿ: ಸ್ಮಾರ್ಟ್‌ಫೋನ್ ಮಾರಾಟ ಕುಸಿತದ ನಡುವೆಯೂ ಶಾಓಮಿ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ, ಆದರೂ ಅದರ ಪಾಲು ಮತ್ತು ಸಾಗಣೆಗಳು ಕಳೆದ ವರ್ಷ ಇದೇ ತ್ರೈಮಾಸಿಕ್ಕೆ ಹೋಲಿಸದರೆ ಈ ತ್ರೈಮಾಸಿಕದಲ್ಲಿ ಕುಸಿತ ಕಂಡಿದೆ. 

ಐಡಿಸಿ ವರದಿ ಪ್ರಕಾರ 2022 ರ ಮೊದಲ ತ್ರೈಮಾಸಿಕದಲ್ಲಿ ಕಂಪನಿಯ ಸಾಗಣೆಗಳು ವರ್ಷದಿಂದ ವರ್ಷಕ್ಕೆ 18 ಪ್ರತಿಶತದಷ್ಟು ಕಡಿಮೆಯಾಗಿದೆ. ಆದಾಗ್ಯೂ, ಶಾಓಮಿ ಆನ್‌ಲೈನ್ ಚಾನೆಲ್‌ನಲ್ಲಿ 32 ಶೇಕಡಾ ಪಾಲನ್ನು ಪಡೆದು (ಪೊಕೊ ಸೇರಿದಂತೆ) ಪ್ರಾಬಲ್ಯವನ್ನು ಮುಂದುವರೆಸಿದೆ.\

ಇದನ್ನೂ ಓದಿ: 200MP ಕ್ಯಾಮೆರಾದೊಂದಿಗೆ Nokia N73 ಲಾಂಚ್? ಐದು ಕ್ಯಾಮೆರಾ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್?

5G ವಿಭಾಗದಲ್ಲಿ, ಶಾಓಮಿ ಎರಡನೇ ಸ್ಥಾನದಲ್ಲಿದೆ ಎಂದು ಐಡಿಸಿ ವರದಿ ಮಾಡಿದೆ. Mi 11i ಮತ್ತು Redmi Note 11Tಗಳು ಚೈನೀಸ್ ಕಂಪನಿಯ ಹೆಚ್ಚು ಮಾರಾಟವಾಗುವ ಕೆಲವು ಪ್ರಮುಖ ಸ್ಮಾರ್ಟ್‌ಫೋನ್‌ಗಳಾಗಿವೆ. 

ಸ್ಯಾಂಮಸಂಗ್ ನಂ. 2:  ಶಾಓಮಿ ನಂತರ,  ಮೊದಲ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಐದು ಶೇಕಡಾ ಕುಸಿತದೊಂದಿಗೆ ಸ್ಯಾಮಸಂಗ್ ಎರಡನೇ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಕೊರಿಯಾದ ದೈತ್ಯ ತನ್ನ Galaxy S22 ಸರಣಿಯ ಬೇಡಿಕೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. 

ಇದು 29 ಶೇಕಡಾ ಪಾಲನ್ನು ಹೊಂದಿರುವ 5G ವಿಭಾಗವನ್ನು ಮುನ್ನಡೆಸಿದೆ.  ಐಡಿಸಿ ವರದಿ ಪ್ರಕಾರ, ವಿಭಾಗದಲ್ಲಿನ ಪ್ರಮುಖ ಮಾದರಿಗಳು Galaxy M32 5G ಮತ್ತು Galaxy A22 5Gಗಳಾಗಿವೆ

ರಿಯಲ್‌ಮಿಗೇ ಮೂರನೇ ಸ್ಥಾನ: ಚೀನಾ ಮೂಲದ  ಬಿಬಿಕೆ (BBK)ಎಲೆಕ್ಟ್ರಾನಿಕ್ಸ್‌ನ ಲೇಟೆಸ್ಟ್  ಬ್ರ್ಯಾಂಡ್‌ಗಳಲ್ಲಿ ಒಂದಾದ ರಿಯಲ್‌ಮಿ ಮಾರುಕಟ್ಟೆಯಲ್ಲಿ ಮೂರನೇ ಅತಿದೊಡ್ಡ ಮಾರಾಟಗಾರನಾಗಿ ಹೊರಹೊಮ್ಮಿದೆ. ಇದು ವರ್ಷದಿಂದ ವರ್ಷಕ್ಕೆ 46 ಶೇಕಡಾ ಬೆಳವಣಿಗೆಯನ್ನು ಗುರುತಿಸಿದೆ. ಕಂಪನಿಯು ಸರಾಸರಿ ಮಾರಾಟ ಬೆಲೆ $142 (ಸುಮಾರು ರೂ. 11,000) ಹೊಂದಿದೆ.

ಹೆಚ್ಚುವರಿಯಾಗಿ, ಶಾಓಮಿ ನಂತರ ಆನ್‌ಲೈನ್ ಜಾಗದಲ್ಲಿ ರಿಯಲ್‌ಮಿ ತನ್ನ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ ಅಲ್ಲದೇ ಮೊದಲ ತ್ರೈಮಾಸಿಕದಲ್ಲಿ 23 ಶೇಕಡಾ ಪಾಲನ್ನು ಹೊಂದಿದೆ ಎಂದು ಐಡಿಸಿ ಹೇಳಿದೆ. ಮಾರುಕಟ್ಟೆಯಲ್ಲಿನ ಎಲ್ಲಾ ಪ್ರಮುಖ ಆಟಗಾರರಿಗೆ ವಿಭಿನ್ನವಾಗಿ, ರಿಯಲ್‌ಮಿ ಮೊದಲ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 46.3 ಶೇಕಡಾ ಬೆಳವಣಿಗೆಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿ ತೋರಿಸುತ್ತದೆ.

ವಿವೋ ನಂ. 4:  ಇನ್ನು ವಿವೋ, ರಿಯಲ್‌ಮಿನ  ಮತ್ತು ಬಿಬಿಕೆ ಎಲೆಕ್ಟ್ರಾನಿಕ್ಸ್‌ನ ಮತ್ತೊಂದು ಬ್ರ್ಯಾಂಡ್, ನಾಲ್ಕನೇ ಸ್ಥಾನದಲ್ಲಿದೆ, ಅದರ ಸಾಗಣೆಗಳು ವರ್ಷದಿಂದ ವರ್ಷಕ್ಕೆ 17 ಪ್ರತಿಶತದಷ್ಟು ಕಡಿಮೆಯಾಗಿದೆ. ಮೊದಲ ತ್ರೈಮಾಸಿಕದಲ್ಲಿ ಚೀನೀ ಕಂಪನಿಯು ಆಫ್‌ಲೈನ್ ಚಾನೆಲನ್ನು 24 ಪ್ರತಿಶತದಷ್ಟು ಪಾಲನ್ನು ಪಡೆದಿದೆ, ಆದರೂ ಅದರ ಹೊಸ T-ಸರಣಿ ಮತ್ತು iQoo ಫೋನ್‌ಗಳನ್ನು ಬಿಡುಗಡೆ ಮಾಡುವುದರೊಂದಿಗೆ, ಅದರ ಆನ್‌ಲೈನ್ ಸಾಗಣೆಗಳಲ್ಲಿ ಸ್ವಲ್ಪ ಬೆಳವಣಿಗೆಯನ್ನು ಕಾಣುವ ಸಾಧ್ಯತೆಯಿದೆ.

ಇದನ್ನೂ ಓದಿ: ಕೋವಿಡ್‌ನಿಂದಾಗಿ ಐಫೋನ್ 12ರಂತೆ iPhone 14 ಲಾಂಚ್ ವಿಳಂಬ ಸಾಧ್ಯತೆ

ಇನ್ನು ಬಿಬಿಕೆ ಎಲೆಕ್ಟ್ರಾನಿಕ್ಸ್‌ನ ಅತಿದೊಡ್ಡ ಅಂಗಸಂಸ್ಥೆ ಮತ್ತು ರಿಯಲ್‌ ಮಿ ಮೂಲ ಸಂಸ್ಥೆಯಾಗಿದ್ದ ಓಪ್ಪೋ  ಐಡಿಸಿಯ ವರದಿಯ ಪ್ರಕಾರ ಮೊದಲ ತ್ರೈಮಾಸಿಕದಲ್ಲಿ 25 ಪ್ರತಿಶತದಷ್ಟು ಕುಸಿದಿದೆ.

ಕೋವಿಡ್‌ 19 ಪ್ರಭಾವ: ಮಾರಾಟಗಾರರ-ವಾರು ಸಾಗಣೆಗಳ ಹೊರತಾಗಿ, ಐಡಿಸಿ ತನ್ನ ವರದಿಯಲ್ಲಿ ಕೆಲವು ಆಸಕ್ತಿದಾಯಕ ಒಳನೋಟಗಳನ್ನು ಉಲ್ಲೇಖಿಸಿದೆ. ಕಳೆದ ಎರಡು ವರ್ಷಗಳಲ್ಲಿ ಇ-ಕಾಮರ್ಸ್ ಷೇರುಗಳು ಸಾಂಕ್ರಾಮಿಕ ರೋಗದ ಉಲ್ಬಣದಿಂದಾಗಿ ಮೊದಲ ತ್ರೈಮಾಸಿಕದಲ್ಲಿ 49 ಪ್ರತಿಶತಕ್ಕೆ ಕನಿಷ್ಠ ಕುಸಿತದೊಂದಿಗೆ ಕಡಿಮೆಯಾಗಿದೆ ಎಂದು ಅದು ಹೇಳಿದೆ. 

ಅದೇನೇ ಇದ್ದರೂ, ಆನ್‌ಲೈನ್ ಚಾನೆಲ್‌ಗಳ ಮೂಲಕ ಸಾಗಣೆಗಳು ವರ್ಷದಿಂದ ವರ್ಷಕ್ಕೆ ಏಳು ಶೇಕಡಾ ದರದಲ್ಲಿ ಬೆಳೆಯುತ್ತಲೇ ಇದೆ, ಆದರೆ ಆಫ್‌ಲೈನ್ ಚಾನಲ್ ಸಾಗಣೆಗಳು ವರ್ಷದಿಂದ ವರ್ಷಕ್ಕೆ 13 ಪ್ರತಿಶತದಷ್ಟು ಕಡಿಮೆಯಾಗಿದೆ. 

click me!