200MP ಕ್ಯಾಮೆರಾದೊಂದಿಗೆ Nokia N73 ಲಾಂಚ್? ಐದು ಕ್ಯಾಮೆರಾ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್?

By Suvarna News  |  First Published May 9, 2022, 7:31 PM IST

ಹೊಸ Nokia N73 ಸ್ಮಾರ್ಟ್‌ಫೋನ್‌ನ ರೆಂಡರ್ ಸೋರಿಕೆಯಾಗಿದ್ದು ಫೋನ್‌ನ ವಿನ್ಯಾಸ ಬಹಿರಂಗೊಂಡಿದೆ. ಮುಂಬರುವ ನೋಕಿಯಾದ ಹೊಸ ಫೋನಿನಲ್ಲಿ 5 ರಿಯರ್ ಕ್ಯಾಮೆರಾ ಸೆನ್ಸಾರ್ ಅಳವಡಿಸಿರುವ ಸಾಧ್ಯತೆಯಿದೆ ಎಂದು ವರದಿಗಳು ಸೂಚಿಸಿವೆ


Nokia N73: 2000 ರ ದಶಕದ ಆರಂಭದಲ್ಲಿ ನೋಕಿಯಾ ಅತ್ಯುತ್ತಮ ಫೋನ್ ತಯಾರಕರಲ್ಲಿ ಒಂದಾಗಿತ್ತು.  ಆದರೆ ಟೆಕ್‌ ದೈತ್ಯ ಗೂಗಲ್‌ Android OS ಪರಿಚಯಿಸಿದ ಬಳಿಕ, ನೋಕಿಯಾ ಆಂಡ್ರಾಯ್ಡ್‌ ಫೋನ್‌ ಬಿಡುಗಡೆ ಮಾಡದಿರಲು ನಿರ್ಧರಿಸಿತು, ಇದು ಅಂತಿಮವಾಗಿ ಕಂಪನಿಯ ಅವನತಿಗೆ ಕಾರಣವಾಯಿತು. ಆದರೆ ಕಂಪನಿಯು ಪುನರಾಗಮನ ಮಾಡಿದ್ದು ಕಳೆದ ಕೆಲವು ವರ್ಷಗಳಲ್ಲಿ, ಕಂಪನಿಯು ನೋಕಿಯಾ ಬಜೆಟ್ ಫೋನ್‌ಗಳು, ಫ್ಲ್ಯಾಗ್‌ಶಿಪ್ ಫೋನ್‌ಗಳು ಮತ್ತು ಕೆಲವು ಫೀಚರ್ ಫೋನ್‌ಗಳನ್ನು ಭಾರತದಲ್ಲಿ ಮತ್ತು ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡುತ್ತಿದೆ. 

ಮುಂಬರುವ ದಿನಗಳಲ್ಲಿ ನೋಕಿಯಾ N73 ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಲು ಕಂಪನಿಯು ತಯಾರಿ ನಡೆಸುತ್ತಿದೆ ಮತ್ತು ಮುಂಬರುವ ಸ್ಮಾರ್ಟ್‌ಫೋನ್ ದೊಡ್ಡ ಕ್ಯಾಮೆರಾ ವೈಶಿಷ್ಟ್ಯದೊಂದಿಗೆ ಬರಲಿದೆ ಎಂದು ಚೀನಾದ ಹೊಸ ವರದಿಯು ಈಗ ಸುಳಿವು ನೀಡಿದೆ.  ನೋಕಿಯಾ 2006ರಲ್ಲಿ N73 ಫೋನನ್ನು ಪ್ರಾರಂಭಿಸಿತು. N73 ಸಿಂಬಿಯಾನ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಚಾಲನೆಯಲ್ಲಿರುವ ನೋಕಿಯಾದ ಜನಪ್ರಿಯ ಫೋನ್ ಆಗಿದೆ. ಆದಾಗ್ಯೂ, ಮುಂಬರುವ Nokia N73 ಸ್ಮಾರ್ಟ್‌ಫೋನಾಗಿದ್ದು, ವರದಿಗಳಲ್ಲಿ ಬಹಿರಂಗಗೊಂಡ ಡಿಟೇಲ್ಸ್‌ ಇಲ್ಲಿದೆ

Tap to resize

Latest Videos

undefined

Nokia N73ಯಲ್ಲಿ 200MP ಕ್ಯಾಮೆರಾ?: ಚೀನಾದ ಸುದ್ದಿ ಸೈಟ್, CNMO ವರದಿಯ ಪ್ರಕಾರ, ನೋಕಿಯಾ N73 ಸ್ಮಾರ್ಟ್‌ಫೋನ್ ಮೇಲೆ ಕಾರ್ಯನಿರ್ವಹಿಸುತ್ತಿದೆ ಮತ್ತು ಅದರ ರೆಂಡರನ್ನು ಕೂಡ ಸುದ್ದಿ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ರೆಂಡರ್ ಗಮನಿಸಿದಾಗ, ಮುಂಬರುವ Nokia N73 ಎರಡು LED ಫ್ಲಾಷ್‌ಗಳ ಜೊತೆಗೆ ಹಿಂಭಾಗದಲ್ಲಿ ಐದು-ಕ್ಯಾಮೆರಾ ಸೆಟಪನ್ನು ಒಳಗೊಂಡಿರುವ ಸಾಧ್ಯತೆಯಿದೆ. 

ಇದನ್ನೂ ಓದಿ: ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಈ 10 ಅಂಶಗಳನ್ನು ತಪ್ಪದೇ ಪರಿಗಣಿಸಿ

ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಪೆಂಟಾ-ಕ್ಯಾಮೆರಾವುಳ್ಳ (5 ಕ್ಯಾಮೆರಾ) ಸ್ಮಾರ್ಟ್‌ಫೋನ್‌ಗಳನ್ನು  ಚಿರಪರಿಚಿತವಾಗಿಲ್ಲ ಮತ್ತು ಇದು ಅದೇ ವೈಶಿಷ್ಟ್ಯವನ್ನು ಹೊಂದಿರುವ ಮೊದಲನೆಯ ಸ್ಮಾರ್ಟ್‌ಫೋನಾಗುವ ಸಾಧ್ಯತೆ ಇದೆ. ಸಾಧನದ ಹಿಂಭಾಗದಲ್ಲಿರುವ ಕ್ಯಾಮರಾ ಮಾಡ್ಯೂಲ್ ಆಕಾರವು ಚಾಕುವನ್ನು ಹೋಲುತ್ತದೆ ಮತ್ತು ಎಲ್ಲಾ ಐದು ಕ್ಯಾಮೆರಾ ಲೆನ್ಸ್‌ಗಳು ಅವುಗಳ ಸುತ್ತಲೂ ಕೆಂಪು ವೃತ್ತವನ್ನು ಒಳಗೊಂಡಿರುತ್ತವೆ.

ಇದಲ್ಲದೆ, N73 200MP ಸಂವೇದಕವನ್ನು ಹೊಂದಿರಬಹುದು ಎಂದು ವರದಿ ಹೇಳುತ್ತದೆ, ಇದನ್ನು ಸ್ಯಾಮ್‌ಸಂಗ್ ತಯಾರಿಸುತ್ತದೆ. ಸೆಪ್ಟೆಂಬರ್ 2021ರಲ್ಲಿ ಮತ್ತೆ ಘೋಷಿಸಲಾದ Samsung ISOCELL HP1 ಈ ಸಾಧನದಲ್ಲಿ ಅಳವಡಿಸಬಹುದು. 200MP ಕ್ಯಾಮೆರಾವನ್ನು ಹೊಂದಿರುವ ಮೊದಲ ಫೋನ್ 2022 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

2023 ರ ವೇಳೆಗೆ  ಮೊಟೊರೊಲಾ ಮತ್ತು ಸ್ಯಾಮಸಂಗ್‌ ಕೂಡ 200MP ಕ್ಯಾಮೆರಾದೊಂದಿಗೆ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. Nokia N73 ಕುರಿತು ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಳ್ಳಬೇಕಿದೆ. 

click me!