Honor Play 6T ಮತ್ತು Honor Play 6T Pro ಚೀನಾದಲ್ಲಿ ಬಿಡುಗಡೆಯಾಗಿವೆ. ಭಾರತ ಹಾಗೂ ಜಾಗತಿಕ ಬಿಡುಗಡೆಯ ಬಗ್ಗೆ ಪ್ರಸ್ತುತ ಯಾವುದೇ ಮಾಹಿತಿ ಲಭ್ಯವಿಲ್ಲ.
Honor Play 6T ಮತ್ತು Honor Play 6T Pro ಕಂಪನಿ ಹೋಸ್ಟ್ ಮಾಡಿದ ಲೈವ್ ಈವೆಂಟ್‌ನಲ್ಲಿ ಗುರುವಾರ ಚೀನಾದಲ್ಲಿ ಬಿಡುಗಡೆಯಾಗಿವೆ. ಹೊಸ ಆನರ್ ಸ್ಮಾರ್ಟ್‌ಫೋನ್‌ಗಳು TFT LCD ಡಿಸ್‌ಪ್ಲೇಗಳನ್ನು 90Hz ರಿಫ್ರೆಶ್ ದರದೊಂದಿಗೆ ಹೊಂದಿದೆ. ಎರಡೂ ಮಾದರಿಗಳು 5G ಬೆಂಬಲ ಹೊಂದಿದ್ದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ ಚಿಪ್‌ಸೆಟ್‌ಗಳಿಂದ ಚಾಲಿತವಾಗಿವೆ. Honor Play 6T 13-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. Honor Play 6T Pro 48-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪನ್ನು ಹೊಂದಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು 8GB RAM ಮತ್ತು 256GB ವರೆಗೆ ಆನ್‌ಬೋರ್ಡ್ ಸಂಗ್ರಹಣೆಯನ್ನು ನೀಡುತ್ತವೆ.
Honor Play 6T ಮತ್ತು Honor Play 6T Pro ಬೆಲೆ, ಲಭ್ಯತೆ: Honor Play 6T ಬೇಸ್ 8GB +128GB ಸ್ಟೋರೇಜ್ ರೂಪಾಂತರಕ್ಕೆ CNY 1,199 (ಸುಮಾರು ರೂ. 14,200) ಬೆಲೆ ನಿಗದಿಪಡಿಸಲಾಗಿದೆ. ಫೋನ್ 8GB + 256GB ಸ್ಟೋರೇಜ್ ಮಾದರಿಯಲ್ಲಿ ಬರುತ್ತದೆ, ಇದರ ಬೆಲೆ CNY 1,399 (ಸುಮಾರು ರೂ. 16,600)ಗೆ ನಿಗದಿಪಡಿಸಲಾಗಿದೆ.
undefined
ಮತ್ತೊಂದೆಡೆ, Honor Play 6T Pro 8GB + 256GB ರೂಪಾಂತರಕ್ಕಾಗಿ CNY 1,599 (ಸುಮಾರು ರೂ. 19,000) ವೆಚ್ಚವಾಗುತ್ತದೆ. 8GB + 128GB ಶೇಖರಣಾ ಮಾದರಿಯ ಬೆಲೆಯನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿಲ್ಲ.
ಇದನ್ನೂ ಓದಿ: ಕ್ವಾಡ್ ರಿಯರ್ ಕ್ಯಾಮೆರಾ, 5,000mAh ಬ್ಯಾಟರಿ: ಅತೀ ಅಗ್ಗದ Moto G22 ಭಾರತದಲ್ಲಿ ಲಾಂಚ್!
Honor Play 6T ಟೈಟಾನಿಯಂ ಎಂಪ್ಟಿ ಸಿಲ್ವರ್, ಮ್ಯಾಜಿಕ್ ನೈಟ್ ಬ್ಲಾಕ್ ಮತ್ತು ರೋಸ್ ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. Honor Play 6T Pro ಟೈಟಾನಿಯಂ ಎಂಪ್ಟಿ ಸಿಲ್ವರ್, ಮ್ಯಾಜಿಕ್ ನೈಟ್ ಬ್ಲಾಕ್ ಮತ್ತು ಚಾರ್ಮ್ ಸೀ ಬ್ಲೂ ಶೇಡ್‌ಗಳಲ್ಲಿ ನೀಡಲಾಗುತ್ತದೆ.
ಹಾನರ್ ಮಾಲ್ ವೆಬ್‌ಸೈಟ್ ಮೂಲಕ ಚೀನಾದಲ್ಲಿ ಪೂರ್ವ ಕಾಯ್ದಿರಿಸುವಿಕೆಗಾಗಿ ಎರಡೂ ಹಾನರ್ ಸಾಧನಗಳು ಪ್ರಸ್ತುತ ಲಭ್ಯವಿದೆ. ಇದು ಈ ತಿಂಗಳ ಕೊನೆಯಲ್ಲಿ ಮಾರಾಟವಾಗಲಿದೆ. ಭಾರತ ಹಾಗೂ ಜಾಗತಿಕ ಬಿಡುಗಡೆಯ ಬಗ್ಗೆ ಪ್ರಸ್ತುತ ಯಾವುದೇ ಮಾಹಿತಿ ಲಭ್ಯವಿಲ್ಲ.
Honor Play 6T ಫೀಚರ್ಸ್: ಡ್ಯುಯಲ್-ಸಿಮ್ (ನ್ಯಾನೋ) Honor Play 6T ಆಂಡ್ರಾಯ್ಡ್ 11-ಆಧಾರಿತ ಮ್ಯಾಜಿಕ್ UI 5.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹೊಸ Honor ಫೋನ್ 1,600x720 ಪಿಕ್ಸೆಲ್‌ಗಳ ರೆಸಲ್ಯೂಶನ್ ಹಾಗೂ 90Hz ರಿಫ್ರೆಶ್ ದರದೊಂದಿಗೆ 6.74-ಇಂಚಿನ TFT LCD ಡಿಸ್ಪ್ಲೇಯನ್ನು ಹೊಂದಿದೆ. Honor Play 6T ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC, ಜೊತೆಗೆ Mali-G57 GPU ಮತ್ತು 8GB ವರೆಗಿನ RAM ನಿಂದ ಚಾಲಿತವಾಗಿದೆ.
ಕ್ಯಾಮರಾ ಹೇಗಿದೆ?: Honor Play 6T ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪನ್ನು ಒಳಗೊಂಡಿದೆ, f/1.8 ಅಪರ್ಚರ್‌ನೊಂದಿಗೆ 13-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, f/2.4 ಅಪರ್ಚರ್‌ನೊಂದಿಗೆ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಮತ್ತು f/2.4 ಅಪರ್ಚರ್‌ನೊಂದಿಗೆ 2-ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ಹೊಂದಿದೆ. ಸೆಲ್ಫಿಗಳಿಗಾಗಿ, ಹಾನರ್ 5-ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು f/2.2 ಅಪರ್ಚರ್‌ನೊಂದಿಗೆ ಒದಗಿಸಿದೆ.
ಹಿಂಭಾಗದ ಕ್ಯಾಮರಾ ಪೋಟ್ರೇಟ್ ಮೋಡ್ ಮತ್ತು ನೈಟ್ ವೀವ್ ಮೋಡ್, ಸೂಪರ್ ಮ್ಯಾಕ್ರೋ ಮೋಡ್, ಪನೋರಮಾ, HDR, ಫಿಲ್ಟರ್, ಸ್ಮೈಲ್ ಕ್ಯಾಪ್ಚರ್, ವಾಯ್ಸ್-ಆಕ್ಟಿವೇಟೆಡ್ ಫೋಟೋ, ಟೈಮಡ್ ಫೋಟೋ ಮತ್ತು AI ಛಾಯಾಗ್ರಹಣ ಸೇರಿದಂತೆ ಇತರ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಹ್ಯಾಂಡ್‌ಸೆಟ್ 256GB ವರೆಗೆ ಆನ್‌ಬೋರ್ಡ್ ಸಂಗ್ರಹಣೆಯನ್ನು ನೀಡುತ್ತದೆ ಮತ್ತು ಮೈಕ್ರೋ SD ಕಾರ್ಡ್ ಮೂಲಕ ಸಂಗ್ರಹಣೆಯನ್ನು ವಿಸ್ತರಿಸಬಹುದು.
ಇದನ್ನೂ ಓದಿ: Samsung Galaxy A73 5G ಭಾರತದಲ್ಲಿ ಇಂದು ಮೊದಲ ಸೇಲ್: ಬೆಲೆ ಎಷ್ಟು? ಲಾಂಚ್ ಆಫರ್ಸ್‌ಗಳೇನು?
ದೃಢೀಕರಣಕ್ಕಾಗಿ ಸ್ಮಾರ್ಟಫೋನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ. ಫೋನ್ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಇದು 22.5W ವೇಗದ ಚಾರ್ಜಿಂಗನ್ನು ಬೆಂಬಲಿಸುತ್ತದೆ.
Honor Play 6T Pro ಫೀಚರ್ಸ್: ಬೇಸ್ ಮಾದರಿಯಂತೆ, ಡ್ಯುಯಲ್-ಸಿಮ್ (ನ್ಯಾನೋ) ಹಾನರ್ ಪ್ಲೇ 6T ಪ್ರೊ ಕೂಡ ಮ್ಯಾಜಿಕ್ UI 5.0 ಆಧಾರಿತ Android 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.7-ಇಂಚಿನ TFT LCD (2,388x1,080 ಪಿಕ್ಸೆಲ್‌ಗಳು) ಡಿಸ್ಪ್ಲೇಯೊಂದಿಗೆ ಬರುತ್ತದೆ. ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 ಪ್ರೊಸೆಸರನ್ನು Mali-G57 GPU ಮತ್ತು 8 ಜಿಬಿ RAM ನೊಂದಿಗೆ ಜೋಡಿಸಲಾಗಿದೆ.
ಕ್ಯಾಮರಾ ಹೇಗಿದೆ?: Honor Play 6T Pro f/1.8 ಅಪರ್ಚರ್‌ನೊಂದಿಗೆ 48-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದ್ದು ಡ್ಯುಯಲ್ ಹಿಂಬದಿಯ ಕ್ಯಾಮೆರಾ ಸೆಟಪನ್ನು ಹೊಂದಿದೆ. ಕ್ಯಾಮೆರಾ ಘಟಕವು f/2.4 ಅಪರ್ಚರ್‌ನೊಂದಿಗೆ 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರನ್ನು ಸಹ ಒಳಗೊಂಡಿದೆ. ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ, ಫೋನ್ f/2.0 ಅಪರ್ಚರ್‌ನೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.
ಹಿಂಬದಿಯ ಕ್ಯಾಮರಾ AI ಛಾಯಾಗ್ರಹಣ, ಟೈಮ್-ಲ್ಯಾಪ್ಸ್ ಛಾಯಾಗ್ರಹಣ, ಡ್ಯುಯಲ್-ವೀಡಿಯೋ, ನೈಟ್ ವೀವ್ ಮೋಡ್, ಪೋರ್ಟ್ರೆಟ್ ಮೋಡ್, ಪನೋರಮಾ, ವಾಯ್ಸ-ಆಕ್ಟಿವ್ ಛಾಯಾಗ್ರಹಣ ಬೆಂಬಲಿಸುತ್ತದೆ. ಸೆಲ್ಫಿ ಕ್ಯಾಮೆರಾ 2D ಮುಖ ಗುರುತಿಸುವಿಕೆಗೆ ಬೆಂಬಲವನ್ನು ನೀಡುತ್ತದೆ. Honor Play 6T ಗರಿಷ್ಠ 256GB ಸಂಗ್ರಹಣೆಯನ್ನು ನೀಡುತ್ತದೆ.
ಸ್ಮಾರ್ಟ್‌ಫೋನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡ ಇದೆ. ಫೋನ್ 4,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಇದು 40W ವೇಗದ ಚಾರ್ಜಿಂಗನ್ನು ಬೆಂಬಲಿಸುತ್ತದೆ.