ಗೂಗಲ್‌ನ ಮೊದಲ ಫೋಲ್ಡಬಲ್ ಪಿಕ್ಸೆಲ್ ಫೋನ್ 2023ರಲ್ಲಿ ಬಿಡುಗಡೆ: ವರದಿ

By Suvarna News  |  First Published May 26, 2022, 8:33 PM IST

ಟ್ವಿಟರ್‌ನಲ್ಲಿ ಸಪ್ಲೈ ಚೇನ್ ವಿಶ್ಲೇಷಕರೊಬ್ಬರು ಗೂಗಲ್ ತನ್ನ ಮಡಚಬಹುದಾದ ಪಿಕ್ಸೆಲ್ ಫೋನನ್ನು ಮುಂದಿನ ವರ್ಷ ಬಿಡುಗಡೆ ಮಾಡಬಹುದು ಎಂದು ವರದಿ ಮಾಡಿದ್ದಾರೆ 


Google Foldable Pixel Phone: ಫೋಲ್ಡಬಲ್ ಪಿಕ್ಸೆಲ್ ಫೋನ್ ಬಿಡಗಡೆ ಬಗ್ಗೆ ಕೆಲ ಸಮಯದಿಂದ ಹಲವು ವರದಿಗಳು ಪ್ರಕಟವವಾಗಿವೆ ಆದರೆ ಸ್ಮಾರ್ಟ್‌ಪೋನ್ ಸದ್ಯಕ್ಕೆ ಬಿಡುಗಡೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ ಎಂದು ಹೇಳಲಾಗುತ್ತಿದೆ. ಸರ್ಚ್‌ ದೈತ್ಯ ಗೂಗಲ್ ತನ್ನ ಇತ್ತೀಚಿನ Google I/O ಡೆವಲಪರ್ ಕಾನ್ಫರೆನ್ಸ್‌ನಲ್ಲಿ ಮಡಿಸಬಹುದಾದ ಫೋನ್ ಬಗ್ಗೆ ಮಾಹಿತಿ ನೀಡಿರಲಿಲ್ಲ. ಗೂಗಲ್ ಬಹು ನಿರೀಕ್ಷಿತ ಪಿಕ್ಸೆಲ್ ವಾಚ್ ಅಸ್ತಿತ್ವದ ಬಗ್ಗೆ ದೃಢೀಕರಣವನ್ನು ನೀಡಿತ್ತು, ಆದರೆ ಅದು ತನ್ನ ಮೊದಲ ಮಡಚಬಹುದಾದ ಫೋನ ಬಿಡುಗಡೆ ಬಗ್ಗೆ ಬಹಿರಂಗಪಡಿಸಲಿಲ್ಲ.

ಮೊದಲಿಗೆ, ಗೂಗಲ್ 2021ರಲ್ಲಿ ಈ ಸ್ಮಾರ್ಟ್‌ಫೋನ್ ಘೋಷಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಅದು ಸಂಭವಿಸಲಿಲ್ಲ. ನಂತರ, ಫೋಲ್ಡಬಲ್ ಪಿಕ್ಸೆಲ್ ಫೋನ್ 2022 ರ ಅಂತ್ಯದ ವೇಳೆಗೆ ಬರಲಿದೆ ಎಂದು ವರದಿಯಾಗಿತ್ತು. ಈಗ, ಕೊರಿಯನ್ ವೆಬ್‌ಸೈಟ್ ದಿ ಎಲೆಕ್‌ನ ವರದಿಯು ಉತ್ಪನ್ನವು ಇನ್ನೂ ಪೂರ್ಣಗೊಂಡಿಲ್ಲದ ಕಾರಣ ಬಿಡುಗಡೆ ವಿಳಂಬವಾಗಿದೆ ಎಂದು ತಿಳಿಸಿದೆ. ಟ್ವಿಟರ್‌ನಲ್ಲಿ ಸಪ್ಲೈ ಚೇನ್ ವಿಶ್ಲೇಷಕರೊಬ್ಬರು ಗೂಗಲ್ ತನ್ನ ಮಡಚಬಹುದಾದ ಪಿಕ್ಸೆಲ್ ಫೋನನ್ನು ಮುಂದಿನ ವರ್ಷ ಬಿಡುಗಡೆ ಮಾಡಬಹುದು ಎಂದು ವರದಿ ಮಾಡಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: YouTube New Feature: ಮೋಸ್ಟ್‌ ರಿಪ್ಲೇಯ್ಡ್‌ ಟೂಲ್‌, ಏನಿದರ ವಿಶೇಷತೆ?

ಜನರು ಈ ವರ್ಷ ಮಡಚಬಹುದಾದ ಫೋನನ್ನು ನೋಡಲು ಸಾಧ್ಯವಾಗದಿದ್ದರೂ, ಅವರು ಕನಿಷ್ಟ ಗೂಗಲ್‌ನ ಮೊದಲ ಸ್ಮಾರ್ಟ್ ವಾಚ್  ಅನುಭವಿಸಲು ಸಾಧ್ಯವಾಗುತ್ತದೆ. ಆಪಲ್ ವಾಚ್‌ಗಳಂತೆಯೇ ಧರಿಸಬಹುದಾದ ರೌಂಡ್ ಡಯಲ್ ಮತ್ತು ನ್ಯಾವಿಗೇಷನ್‌ಗಾಗಿ ಕ್ರೌನನ್ನು ಹೊಂದಿದೆ ಎಂದು ಟೀಸರ್‌ಗಳು ಬಹಿರಂಗಪಡಿಸಿವೆ. ಇದು Fitbit ಏಕೀಕರಣದೊಂದಿಗೆ ಬರುತ್ತದೆ. ಈ ವರ್ಷದ ನಂತರ, ನಾವು ಪ್ರಮುಖ Pixel 7 ಮತ್ತು Pixel 7 Pro ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯನ್ನು ಸಹ ನೋಡುತ್ತೇವೆ. ಸಾಧನಗಳು ಮುಂದಿನ ಪೀಳಿಗೆಯ ಗೂಗಲ್ ಟೆನ್ಸರ್ ಚಿಪ್‌ಸೆಟ್‌ನಿಂದ ಚಾಲಿತವಾಗುತ್ತವೆ ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಪ್ಯಾಕ್ ಮಾಡುತ್ತವೆ.

ಕಂಪನಿಯು ಆಂಡ್ರಾಯ್ಡ್ ಟ್ಯಾಬ್ಲೆಟ್‌ನಲ್ಲಿಯೂ ಕಾರ್ಯನಿರ್ವಹಿಸುತ್ತಿದೆ, ಅದು ಮುಂದಿನ ವರ್ಷ ಬರಲಿದೆ. ಇತ್ತೀಚಿನ ಡೆವಲಪರ್ ಸಮ್ಮೇಳನದಲ್ಲಿ ಗೂಗಲ್ ತನ್ನ ಮೊದಲ ಟ್ಯಾಬ್ಲೆಟ್‌ ಸ್ನೀಕ್ ಪೀಕ್ ನೀಡಿತ್ತು. ಸಾಧನವು ಗೂಗಲ್‌ನ ಹೋಮ್ ಬ್ರೂಡ್ ಟೆನ್ಸರ್ ಚಿಪ್‌ಸೆಟ್‌ನಿಂದ ಚಾಲಿತವಾಗುತ್ತದೆ. ಟೀಸರ್‌ಗಳು ಇದು ಇತರ ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳಲ್ಲಿ ನೋಡಬಹುದಾದ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ ಎಂದು ಹೇಳಿದ್ದಾರೆ.  ಗೂಗಲ್‌ ಇದರಲ್ಲಿ ಸಮಂಜಸವಾದ ಬೆಜೆಲ್‌ಗಳು ಮತ್ತು ಮುಂಭಾಗದಲ್ಲಿ ಕ್ಯಾಮೆರಾವನ್ನು ನೀಡಲಿದೆ. ಹೆಚ್ಚಿನ ವಿವರಗಳನ್ನು ಗೂಗಲ್ ಈ ವರ್ಷದ ಕೊನೆಯಲ್ಲಿ ಅಥವಾ 2023 ರಲ್ಲಿ ಬಹಿರಂಗಪಡಿಸಬಹುದು. 

click me!