
ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಜೀವನದ ಅತ್ಯಗತ್ಯ ಭಾಗ. ಕರೆಗಳು, ಇಂಟರ್ನೆಟ್ ಬಳಕೆಯಿಂದ ಹಿಡಿದು ಬ್ಯಾಂಕಿಂಗ್ ಮತ್ತು ಮನರಂಜನೆಯವರೆಗೆ ಬಹುತೇಕ ಕೆಲಸಗಳಿಗೆ ನಾವು ಫೋನ್ ಮೇಲೆಯೇ ಅವಲಂಬಿತರಾಗಿದ್ದೇವೆ. ಇದೇ ಕಾರಣಕ್ಕೆ ಫೋನ್ ಬ್ಯಾಟರಿ ಮತ್ತು ಚಾರ್ಜಿಂಗ್ ವಿಷಯದಲ್ಲಿ ಮಾಡುವ ಸಣ್ಣ ನಿರ್ಲಕ್ಷ್ಯವೂ ದೊಡ್ಡ ಸಮಸ್ಯೆಯನ್ನು ತಂದೊಡ್ಡಬಹುದು. ಮುಖ್ಯವಾಗಿ, ಚಾರ್ಜಿಂಗ್ ಮುಗಿದ ನಂತರ ಫೋನ್ ತೆಗೆಯುವಾಗ ಜನರು ಮಾಡುವ ಒಂದು ಸಾಮಾನ್ಯ ತಪ್ಪನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ.
ಅನೇಕರು ಫೋನ್ ಚಾರ್ಜಿಂಗ್‌ನಿಂದ ತೆಗೆಯುವಾಗ ಚಾರ್ಜಿಂಗ್ ಕೇಬಲ್‌ನ ವೈರ್ (ತಂತಿ) ಹಿಡಿದು ಜೋರಾಗಿ ಎಳೆಯುತ್ತಾರೆ. ಹೀಗೆ ಮಾಡುವುದು ತಪ್ಪು ವಿಧಾನ. ಕೇಬಲ್ ಎಳೆಯುವುದರಿಂದ ಅದರ ಒಳಭಾಗದಲ್ಲಿರುವ ತಂತಿಗಳು ಮತ್ತು ಕನೆಕ್ಟರ್ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ. ಪದೇ ಪದೇ ಹೀಗೆ ಮಾಡುವುದರಿಂದ ಚಾರ್ಜಿಂಗ್ ಕೇಬಲ್ ಬೇಗನೆ ಹಾಳಾಗಬಹುದು ಮತ್ತು ಫೋನ್‌ನಲ್ಲಿ ಚಾರ್ಜಿಂಗ್ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಚಾರ್ಜಿಂಗ್ ಕೇಬಲ್ ತೆಗೆಯುವಾಗ ಅದರ ವೈರ್ ಹಿಡಿದು ಎಳೆಯುವ ಬದಲು, ಮೊಬೈಲ್‌ಗೆ ಕನೆಕ್ಟ್ ಆಗಿರುವ ಪ್ಲಾಸ್ಟಿಕ್ ಅಥವಾ ಮೆಟಲ್ ಭಾಗವನ್ನು (Connector) ಬೆರಳುಗಳಿಂದ ಗಟ್ಟಿಯಾಗಿ ಹಿಡಿದು ಹೊರತೆಗೆಯಬೇಕು. ಇದರಿಂದ ಕೇಬಲ್ ಮೇಲೆ ಒತ್ತಡ ಕಡಿಮೆಯಾಗುತ್ತದೆ ಮತ್ತು ಅದು ದೀರ್ಘಕಾಲ ಬಾಳಿಕೆ ಬರುತ್ತದೆ. ಪದೇ ಪದೇ ತಪ್ಪು ರೀತಿಯಲ್ಲಿ ಎಳೆಯುವುದರಿಂದ ಅಥವಾ ಮಡಚುವುದರಿಂದ ಚಾರ್ಜಿಂಗ್ ಕೇಬಲ್ ಒಳಗೆ ಹಾಳಾಗಿದ್ದರೆ ಅದನ್ನು ಬಳಸುತ್ತಿರುವುದು ಸರಿಯಲ್ಲ. ಕತ್ತರಿಸಿದ ಅಥವಾ ಹರಿದ ತಂತಿಗಳು ಹಾಗೂ ಲೂಸ್ ಕನೆಕ್ಟರ್‌ಗಳು ಚಾರ್ಜಿಂಗ್ ಸಮಯದಲ್ಲಿ ಫೋನ್ ಅಥವಾ ಚಾರ್ಜರ್ ಅತಿಯಾಗಿ ಬಿಸಿಯಾಗಲು ಕಾರಣವಾಗಬಹುದು. ಆದ್ದರಿಂದ ಕೇಬಲ್ ಎಲ್ಲಾದರೂ ಹಾನಿಗೊಳಗಾಗಿದ್ದರೆ ತಕ್ಷಣವೇ ಅದನ್ನು ಬದಲಾಯಿಸುವುದು ಒಳಿತು.
ಕೇವಲ ಫೋನ್‌ನಿಂದ ಕೇಬಲ್ ಬೇರ್ಪಡಿಸುವಾಗ ಮಾತ್ರವಲ್ಲ, ಕರೆಂಟ್ ಬೋರ್ಡ್ ಅಥವಾ ವಾಲ್ ಸಾಕೆಟ್‌ನಿಂದ ಚಾರ್ಜರ್ ತೆಗೆಯುವಾಗಲೂ ಜನರು ವೈರ್ ಹಿಡಿದು ಎಳೆಯುತ್ತಾರೆ. ಇದರಿಂದ ಪ್ಲಗ್ ಮತ್ತು ಕೇಬಲ್ ಜಾಯಿಂಟ್ ಮೇಲೆ ತೀವ್ರ ಒತ್ತಡ ಬೀಳುತ್ತದೆ. ಆದ್ದರಿಂದ ಚಾರ್ಜರ್ ಅಡಾಪ್ಟರ್ ಅನ್ನು ಕೈಯಿಂದ ಹಿಡಿದು ಸಾಕೆಟ್‌ನಿಂದ ಹೊರತೆಗೆಯಬೇಕು. ಚಾರ್ಜಿಂಗ್ ಕೇಬಲ್ ಅನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದರಿಂದ ಚಾರ್ಜಿಂಗ್ ಪೋರ್ಟ್ ಸುರಕ್ಷಿತವಾಗಿರುತ್ತದೆ. ಮೊಬೈಲ್ ಬ್ಯಾಟರಿಯನ್ನು ದೀರ್ಘಕಾಲದವರೆಗೆ ಉತ್ತಮ ಸ್ಥಿತಿಯಲ್ಲಿಡಲು ಫೋನ್ ಅತಿಯಾಗಿ ಬಿಸಿಯಾಗದಂತೆ ನೋಡಿಕೊಳ್ಳುವುದು ಮತ್ತು ಹಾಳಾದ ಚಾರ್ಜರ್ ಅಥವಾ ಡ್ಯಾಮೇಜ್ ಆಗಿರುವ ಕೇಬಲ್ ಬಳಸದಿರುವುದು ಅತ್ಯಂತ ಮುಖ್ಯವಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.