ವನ್ ಪ್ಲಸ್ 10 ಟಿ ಫೋನ್‌ಗೆ ಬಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ವನ್ ಪ್ಲಸ್ ಎಲ್ಲ ವೇರಿಯಂಟ್‌ಗಳ ಟಿ ವರ್ಷನ್ನನ್ನು ವನ್‌ಪ್ಲಸ್ ಮೊದಲಿನಿಂದಲೂ ಬಿಡುಗಡೆ ಮಾಡುತ್ತಲೇ ಬಂದಿದೆ. ಇದೀಗ ನೂತನ 10 ಟಿ ವೇರಿಯೆಂಟ್ ಫೀಚರ್ಸ್, ವಿಶೇಷತೆ ಹಾಗೂ ಬೆಲೆ ವಿವರ ಇಲ್ಲಿವೆ.
ಬೆಂಗಳೂರು(ಸೆ.06) ಒಂದು ಫೋನ್ ಕೊಂಡುಕೊಂಡು ಅದರ ಎಲ್ಲಾ ಫೀಚರ್‌ಗಳನ್ನು ಕರಗತ ಮಾಡಿಕೊಳ್ಳುವ ಮೊದಲೇ ಮತ್ತೊಂದು ಫೋನನ್ನು ಮಾರುಕಟ್ಟೆಗೆ ಬಿಡುವುದನ್ನು ವನ್‌ಪ್ಲಸ್ ಕರಗತ ಮಾಡಿಕೊಂಡಿದೆ. ವನ್ ಪ್ಲಸ್ 10 ಬಂದ ಬೆನ್ನಿಗೇ ವನ್‌ಪ್ಲಸ್ 10 ಪ್ರೋ ಬಂತು. ಅದರ ಹಿಂದೆಯೇ ವನ್‌ಪ್ಲಸ್ 10 ಆರ್ ಬಂತು. ಈಗ ಮಧ್ಯಂತರದಲ್ಲಿ 10 ಟಿ ಬಂದಿದೆ. ಬಹುತೇಕ ಎಲ್ಲ ವೇರಿಯಂಟ್‌ಗಳ ಟಿ ವರ್ಷನ್ನನ್ನು ವನ್‌ಪ್ಲಸ್ ಮೊದಲಿನಿಂದಲೂ ಬಿಡುಗಡೆ ಮಾಡುತ್ತಲೇ ಬಂದಿದೆ ಮತ್ತು ಅದರ ಬಗ್ಗೆ ಗ್ರಾಹಕರಿಗೆ ವಿಶೇಷ ಆಸಕ್ತಿಯೂ ಇರುವಂತಿದೆ. ವನ್‌ಪ್ಲಸ್ 10ಟಿಯ ಮೂರು ವರ್ಷನ್‌ಗಳು ಲಭ್ಯ. ಇದರ ಆರಂಭಿಕ ಬೆಲೆ .49,999. ಈ ಬೆಲೆಗೆ 8ಜಿಬಿ ರಾರಯಮ್ ಮತ್ತು 128 ಜಿಬಿ ಸ್ಟೋರೇಜ್ ಬರುತ್ತದೆ. .54,999 ಕೊಟ್ಟರೆ 12ಜಿಬಿ ರಾರಯಮ್ ಮತ್ತು 256 ಜಿಬಿ ಸ್ಟೋರೇಜ್, ಮತ್ತೂ ಐದು ಸಾವಿರ ಜಾಸ್ತಿ ಅಂದರೆ .55,999 ಕೊಟ್ಟರೆ 16ಜಿಬಿ ರಾರಯಮ್ ಮತ್ತು 256 ಜಿಬಿ ಸ್ಟೋರೇಜ್ ಲಭ್ಯ. ವನ್‌ಪ್ಲಸ್ 10 ಟಿ ಚಂದದ ಸ್ಟಾಂಡರ್ಡ್ ಸೈಜ್ ಬಾಕ್ಸಲ್ಲಿ ಬರುತ್ತದೆ. ಹಳೆಯ ಷೋಕಿಯನ್ನೆಲ್ಲ ಬಿಟ್ಟು, ಫೋನಿಗೆ ಎಷ್ಟುಬೇಕೋ ಆ ಸೈಜಿನ ಬಾಕ್ಸ್ ನೀಡುವುದಕ್ಕೆ ವನ್‌ಪ್ಲಸ್ ಆರಂಭಿಸಿದೆ. ಬಾಕ್ಸಿನೊಳಗೆ ಎಂದಿನಂತೆ ರೆಡ್‌ಕೇಬಲ್ ಕ್ಲಬ್ ಕಾರ್ಡು, ಸ್ಟಿಕರುಗಳು, 160 ವ್ಯಾಟ್ ಚಾರ್ಜರ್ ಮತ್ತು ಟೈಪ್ ಸಿ ಕೇಬಲ್ ಇರುತ್ತದೆ. ಜೊತೆಗೆ ಒಂದಷ್ಟುಯಾರಿಗೂ ಉಪಯೋಗಕ್ಕೆ ಬರದ ವಸ್ತುಗಳನ್ನೂ ಕಾಣಬಹುದು.
ಫೋನಿನ(One Plus 10T) ಹಿಂಭಾಗ ಮೇಲ್ನೋಟಕ್ಕೆ 10 ಪ್ರೋ ಥರ ಕಾಣಿಸುತ್ತೆ ನಿಜ. ಆದರೆ ಈಗೊಂದಷ್ಟುಸಕಾರಾತ್ಮಕ ಬದಲಾವಣೆಯೂ ಆಗಿದೆ. ಅಲರ್ಚ್ ಸ್ಲೈಡರ್ ಮಾಯವಾಗಿದೆ. ಮೈಕ್ ಫೋನಿನ(Smartphone) ಮೇಲ್ಭಾಗದಲ್ಲಿದೆ. ಪ್ರೈಮರಿ ಸ್ಪೀಕರ್ ಕೆಳಗಿದೆ. ಒಂದು ಕಡೆ ವಾಲ್ಯೂಮ್ ಮತ್ತೊಂದು ಕಡೆ ಸ್ವಿಚಾನ್ ಬಟನ್ ಇರುವ ಈ ಡಿಸೈನನ್ನು ವನ್‌ಪ್ಲಸ್ ಕಿರಿಕಿರಿಯಿಲ್ಲದ ವಿನ್ಯಾಸ ಎಂದೂ ಕರೆದುಕೊಂಡಿದೆ.
undefined
OnePlus Nord 20 SE: ಅಗ್ಗದ ಫೋನ್ ಬಿಡುಗಡೆ ಮಾಡಿದ ಒನ್‌ಪ್ಲಸ್!
ಎಂದೂ ಬಿಸಿಯಾಗದು. 5ಜಿ ಕಂಪ್ಯಾಟಬಿಲಿಟಿ ಇದೆ. ಕ್ಯಾಮರಾ(Camera) ಅಚ್ಚುಕಟ್ಟು, ಸ್ಟೋರೇಜ್ ಸಮಸ್ಯೆಯಿಲ್ಲ. ಬೆಲೆ ಹೆಚ್ಚೂ ಕಮ್ಮಿ ಐ ಫೋನಿನ ಸಮಕ್ಕಿದೆ. ಗುಣಮಟ್ಟವೂ ಹೆಚ್ಚಾಗಿದೆ. ಹೀಗಾಗಿ ಈ ಫೋನನ್ನು ಕೊಳ್ಳುವುದಕ್ಕೆ ಅಂಥ ಅಡ್ಡಿಯೇನೂ ಕಾಣಿಸದು.
ಆದರೆ ಮುಂದೇನು ಬರುತ್ತದೆ ಎಂಬುದು ಮಾತ್ರ ಸದ್ಯಕ್ಕೆ ನಿಗೂಢ. ಮುಂಬರಲಿರುವ ಫೋನುಗಳನ್ನು(Phone) ಮತ್ತಷ್ಟುಸೊಫಿಸ್ಟಿಕೇಟೆಡ್ ಮತ್ತು ಬ್ರಿಲಿಯಂಟ್ ಮಾಡುವುದು ಹೇಗೆ ಎಂಬುದು ಎಲ್ಲ ಫೋನ್ ಕಂಪೆನಿಗಳ ಪ್ರಶ್ನೆ. ಅದು ತಂತ್ರಜ್ಞಾನದ ಪ್ರಶ್ನೆ ಕೂಡ. ಬಹುಶಃ ಅದಕ್ಕೆ ಉತ್ತರಿಸಲಿಕ್ಕೆ 5ಜಿ ಬರಬೇಕೋ ಏನೋ?
Nord CE 5G: ಫೋನ್ ಇಷ್ಟು ಲೈಟಾದರೆ ಹೇಗೆ?
ವನ್ ಪ್ಲಸ್ ಟೆನ್ ಪ್ರೋ 5ಜಿ
ಮಾರುಕಟ್ಟೆಗೆ ಬಂದ ವನ್‌ಪ್ಲಸ್ 10 ಪ್ರೋ 5ಜಿ, ವನ್‌ಪ್ಲಸ್ ಕಂಪೆನಿಯ ಬಹುನಿರೀಕ್ಷಿತ ಫೋನ್ ಎನ್ನಬಹುದು. ವನ್‌ಪ್ಲಸ್ 9ಪ್ರೋ ಬಂದ ನಂತರ ನಾರ್ಡ್ ವರ್ಷನ್‌ಗಳನ್ನೇ ಬಿಡುಗಡೆ ಮಾಡುತ್ತಿದ್ದ ವನ್‌ಪ್ಲಸ್ ಕೊನೆಗೂ ವನ್‌ಪ್ಲಸ್ 10 ಪ್ರೋ ಎಂಬ ಆಕರ್ಷಕ ತಳಿಯನ್ನು ಭಾರತದಲ್ಲೂ ಬಿಡುಗಡೆ ಮಾಡಿದೆ. ಇದರಲ್ಲೇನಿದೆ ಅಂತ ಥಟ್ಟನೆ ಕೇಳಿದರೆ, ವನ್‌ಪ್ಲಸ್ 9ಪ್ರೋ ನೋಡಿ ಅಂತ ಹೇಳಿಬಿಡಬಹುದು. ಒಳಗಿನ ಹೂರಣ ಅದೇ. ಆದರೂ ಸಣ್ಣಪುಟ್ಟಬದಲಾವಣೆಗಳೂ ಅಭಿವೃದ್ಧಿಗಳೂ ನಡೆದಿವೆ. ಎರಡು ಕ್ಯಾಮರಾ ಇದ್ದ ಜಾಗಕ್ಕೆ ಮೂರು ಕ್ಯಾಮರಾ ಬಂದಿದೆ. ಬ್ಯಾಟರಿಯ ಪವರ್ ಹೆಚ್ಚಾಗಿದೆ. ಹೊರಮೈ ಚಂದವಾಗಿದೆ. ಬೆಲೆಯೂ ಹೆಚ್ಚಾಗಿದೆ.