ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಕೊರತೆಗಳದ್ದೆ ಸಾಮ್ರಾಜ್ಯ!

By Ravi Janekal  |  First Published Jul 18, 2023, 10:55 AM IST

 ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಕೊರತೆಗಳದ್ದೆ ಸಾಮ್ರಾಜ್ಯ. ಇಲ್ಲಿ ಮಹಿಳೆಯರಿಗೆ ಸೂಕ್ತ ಶಿಕ್ಷಣ ಸಿಗ್ತಿದೇಯಾ ಎನ್ನುವುದಕ್ಕಿಂತ ಕೊರತೆಗಳದ್ದೆ ದರ್ಬಾರು ಶುರುವಾಗಿದೆ. ಸಧ್ಯ ಸಿಬ್ಬಂದಿಗಳ ಕೊರತೆ ಮಾಡುತ್ತಿದ್ದು, ವಿವಿಯಲ್ಲಿ ಕೊರತೆ ಮ್ಯಾನೇಜ್ ಮಾಡಲು ಪರದಾಡುವಂತಾಗಿದೆ.. 


- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜುಲೈ 17) : ವಿಜಯಪುರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ರಾಜ್ಯದಲ್ಲೆ ಪ್ರಪ್ರಥಮ ಮಹಿಳಾ ವಿಶ್ವ ವಿದ್ಯಾಲಯ. ಮಹಿಳೆಯರಿಗೆ ಅನುಕೂಲವಾಗಲಿ, ಮಹಿಳೆಯರನ್ನ ಸ್ವಾವಲಂಬಿಯನ್ನಾಗಿ ಮಾಡಲು ಸರ್ಕಾರ ಪ್ರತ್ಯೇಕ ಮಹಿಳಾ ವಿವಿ ಸ್ಥಾಪಿಸಿದೆ. ಆದ್ರೆ ಇಲ್ಲಿ ಮಹಿಳೆಯರಿಗೆ ಸೂಕ್ತ ಶಿಕ್ಷಣ ಸಿಗ್ತಿದೇಯಾ ಎನ್ನುವುದಕ್ಕಿಂತ ಕೊರತೆಗಳದ್ದೆ ದರ್ಬಾರು ಶುರುವಾಗಿದೆ. ಸಧ್ಯ ಸಿಬ್ಬಂದಿಗಳ ಕೊರತೆ ಮಾಡುತ್ತಿದ್ದು, ವಿವಿಯಲ್ಲಿ ಕೊರತೆ ಮ್ಯಾನೇಜ್ ಮಾಡಲು ಪರದಾಡುವಂತಾಗಿದೆ.. 

Tap to resize

Latest Videos

undefined

ಮಹಿಳಾ ವಿವಿಗೆ ಸಿಬ್ಬಂದಿ ಕೊರತೆಯದ್ದೆ ಕಾಟ..!

ರಾಜ್ಯದ ಏಕೈಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿಗಳ ಕೊರತೆ ಮತ್ತೆ ಕಾಡುತ್ತಿದೆ. ಇದರ ಪರಿಣಾಮ ಯಾವುದೇ ಹೊಸ ಸಂಶೋಧನೆಗಳು ನಡೆಯದೇ ಹೆಸರಿಗೆ ಮಾತ್ರ ವಿಶ್ವವಿದ್ಯಾಲಯ ಇದೆ ಎನ್ನುವಂತಾಗಿದೆ. ಸದ್ಯ ವಿವಿಯಲ್ಲಿ ಬೋಧಕ ಮತ್ತು ಬೋಧಕೇತರ ಸೇರಿ 400 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಹೊಸ ಸಂಶೋಧನೆ ನಡೆಸಲು 100-150 ಸಿಬ್ಬಂದಿಗಳ ಕೊರತೆ ಎದುರಾಗಿದೆ. 

ಪ್ರತಿಷ್ಠಿತ ಅಕ್ಕಮಹಾದೇವಿ ಮಹಿಳಾ ವಿ.ವಿಯಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ!

ಆರಂಭದಿಂದಲು ಸಿಬ್ಬಂದಿ ಕೊರತೆಯದ್ದೆ ಸಮಸ್ಯೆ..!

ಮಹಿಳಾ ವಿಶ್ವವಿದ್ಯಾಲಯ ಆರಂಭವಾಗಿದ್ದರಿಂದಲೂ ಸಿಬ್ಬಂದಿಗಳ ಕೊರತೆ ವಿವಿ ಅಭಿವೃದ್ಧಿಗೆ ಮುಳುವಾಗಿದೆ.  ಕೇವಲ 67 ಸಿಬ್ಬಂದಿಗಳು ಮಾತ್ರ ಖಾಯಂ ಹುದ್ದೆಯಲ್ಲಿದ್ದಾರೆ. ಉಳಿದವರು ಅತಿಥಿ ಉಪನ್ಯಾಸಕರು,  ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಪರಿಣಾಮ ಅತಿ ದೊಡ್ಡ ವಿಶ್ವವಿದ್ಯಾಲಯವಿದ್ದರೂ ಸಹ ಯಾವುದೇ ಸಂಶೋಧನೆ ಕಾರ್ಯಗಳು ನಡೆಯುತ್ತಿಲ್ಲ. ವಿಜ್ಞಾನ ವಿಭಾಗದಲ್ಲಿ ಸಾಕಷ್ಟು ವಿದ್ಯಾರ್ಥಿನಿಯರು ಹೊಸ ಸಂಶೋಧನೆ ಮಾಡಲು ಮುಂದಾಗುತ್ತಿದ್ದರೂ ಸಹ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಯಾವ ಉಪನ್ಯಾಸಕರು ಸಹ ಇಲ್ಲ.  ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಾಕಷ್ಟು ಬಾರಿ ಮವಿವಿ ಪ್ರಸ್ತಾವನೆ ಕಳುಹಿಸಲಾಗಿದ್ದರೂ ಏನು ಪ್ರಯೋಜನವಾಗಿಲ್ಲ. 

ವಿವಿ ಅಭಿವೃದ್ಧಿಗು ಸಿಗ್ತಿಲ್ಲ ಅನುದಾನ..!

 ಇನ್ನೂ ವಿಶ್ವವಿದ್ಯಾಲಯದ ಅಭಿವೃದ್ಧಿ ಸುಧಾರಿಸಲು ಅಗತ್ಯವಿರುವ ಅನುದಾನ ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ. ನಾವು ಪ್ರತಿವರ್ಷ ಅಭಿವೃದ್ಧಿ ಅನುದಾನಕ್ಕೆ 25 ಕೋಟಿರೂ.ದಷ್ಟು ಬೇಡಿಕೆಯ  ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಅನುದಾನ ಮಾತ್ರ ಬಿಡುಗಡೆಯಾಗಿಲ್ಲ. 

ಆಂತರಿಕ ಸಂಪನ್ಮೂಲದ ಮೇಲೆಯೆ ಅವಲಂಬನೆ..!

ಮಹಿಳಾ ವಿವಿ ಆಂತರಿಕ ಸಂಪನ್ಮೂಲದ ಅನುದಾನದ ಮೇಲೆ ಅವಲಂಬಿತವಾಗಿದೆ ಎಂದು ಸ್ವತಃ ಮಹಿಳಾ ವಿವಿ ಕುಲಪತಿ ಪ್ರೋ. ತುಳಸಿಮಾಲಾ ಮಾಹಿತಿ ನೀಡಿದ್ದಾರೆ. ಉಪನ್ಯಾಸಕರ ವಿಚಾರದಲ್ಲು ಅತಿಥಿ ಉಪನ್ಯಾಸಕರ ಮೇಲೆ ಅವಲಂಬನೆ ನಡೆದಿದೆ. ಖಾಯಂ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದನ್ನು ಸರ್ಕಾರ ಕಳೆದ ಐದು ವರ್ಷಗಳಿಂದ ನಿಲ್ಲಿಸಿರುವ ಕಾರಣ ಹೊಸ ವಿಷಯಗಳ ಅಧ್ಯಯನ ಕೇಂದ್ರ ತೆರೆಯಲು ಹಿಂದೇಟು ಹಾಕಲಾಗುತ್ತಿದೆ. ಇದ್ದ ವಿಷಯಗಳ ಅಧ್ಯಯನ ಸರಿಯಾಗಿ ನಡೆದರೆ ಸಾಕು ಎನ್ನುವ ಮಟ್ಟಕ್ಕೆ ಬಂದಿದೆ.  ಇದ್ದ ವಿಷಯಗಳಿಗೂ ಸದ್ಯ ಹೆಚ್ಚಾಗಿ ಅತಿಥಿ ಉಪನ್ಯಾಸಕರ ಮೇಲೆಯೇ ಅವಲಂಬಿತವಾಗಿದೆ.  ಮತ್ತೆ ಹೊಸ ಕೋರ್ಸ್ ಆರಂಭಿಸುವ ಯಾವ ಆಸಕ್ತಿಯನ್ನು ಸಹ ಮಹಿಳಾ ವಿವಿ ಮುಖ್ಯಸ್ಥರು ಹೊಂದಿಲ್ಲ. 

ವಿಜಯಪುರ: ಮಹಿಳಾ ವಿವಿಯಲ್ಲಿ ನೌಕರಿ ಆಮಿಷ: ಮೋಸ ಹೋಗದಿರಲು, ನಾವಿ ಮನವಿ

ಸಧ್ಯ ಸಂಬಳಕ್ಕೆ ಸಮಸ್ಯೆ ಇಲ್ಲ, ಅಭಿವೃದ್ಧಿ ಆಗ್ತಿಲ್ಲ..!

ರಾಜ್ಯ ಸರ್ಕಾರ ಇರುವ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ಸಂಬಳ ನೀಡುತ್ತಿರುವ ಕಾರಣ ಏನು ತೊಂದರೆಯಾಗಿಲ್ಲ. 3 ವರ್ಷದ ಹಿಂದೆ ಖಾಯಂ ಸಿಬ್ಬಂದಿಗಳಾಗಲಿ, ಹೊರಗುತ್ತಿಗೆ ನೌಕರರಿಗಾಗಿ ಸಂಬಳ ಬಿಡುಗಡೆ ಮಾಡುತ್ತಿರಲಿಲ್ಲ. ಈಗ ಕನಿಷ್ಠ ಸಂಬಳವನ್ನಾದರೂ ಸರಿಯಾಗಿ ಸಮಯದಲ್ಲಿ ನೀಡುತ್ತಿರುವುದು ಸಮಾಧಾನದ ಸಂಗತಿಯಾಗಿದೆ. ಸರ್ಕಾರ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಲ್ಲಿ  ತಿಂಗಳಿಗೆ 2 ಸಾವಿರ ರೂ. ಹಣ ನೀಡುತ್ತಿರುವಾಗ, ವಿದ್ಯಾಭ್ಯಾಸಕ್ಕೆ ಮೀಸಲಾಗಿರುವ ಮಹಿಳಾ ವಿವಿಗೆ ಸೂಕ್ತ  ಆರ್ಥಿಕ ಅಭಿವೃದ್ಧಿ ಯೋಜನೆ ನೀಡುತ್ತಿಲ್ಲ ಎನ್ನುವುದು ಮಹಿಳಾ ವಿವಿ ಸಿಬ್ಬಂದಿಗಳ ಪ್ರಶ್ನೆಯಾಗಿದೆ.

click me!