Srirangapatna Tourism: ವಿದೇಶಿ ಮಾದರಿ ಶ್ರೀರಂಗಪಟ್ಟಣ ಅಭಿವೃದ್ಧಿಗೆ ಚಿಂತನೆ

By Suvarna News  |  First Published Mar 21, 2022, 12:09 PM IST

ಶ್ರೀರಂಗಪಟ್ಟಣದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆಗಳನ್ನು ಕೈಗೊಂಡಿದ್ದು, ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಇಟಲಿಯ ವೆನಿಸ್ ಮಾದರಿಯಲ್ಲಿ ಕೋಟೆ ಸುತ್ತ ದೋಣಿ ವಿಹಾರ ನಿರ್ಮಿಸಿ ಪ್ರವಾಸಗರನ್ನ ಆಕರ್ಷಿಸುವ ಬಗ್ಗೆ ಆಶಯ ವ್ಯಕ್ತಪಡಿಸಿದ್ದಾರೆ.


ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ

ಮಂಡ್ಯ (ಮಾ.21): ಐತಿಹಾಸಿಕ ನಗರಿ ಶ್ರೀರಂಗಪಟ್ಟಣದಲ್ಲಿ (Srirangapatna ) ಪ್ರವಾಸೋದ್ಯಮ ಅಭಿವೃದ್ಧಿ (Tourism Development) ಆಗಬೇಕೆಂಬುದು ಬಹಳ ದಿನಗಳ ಬೇಡಿಕೆ. ಪ್ರವಾಸೋದ್ಯಮ ಅಭಿವೃದ್ಧಿ ಆದ್ರೆ ಉದ್ಯೋಗ (Employment) ಮತ್ತು ಆದಾಯ (Income) ಸೃಷ್ಟಿಸಲು ಅನುಕೂಲ ಎಂಬ ಅಭಿಪ್ರಾಯ ಇದೆ. ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ (Ravindra Srikantaiah) ಇಟಲಿಯ (Italy) ವೆನಿಸ್ ಮಾದರಿಯಲ್ಲಿ ಶ್ರೀರಂಗಪಟ್ಟಣ ಕೋಟೆ ಸುತ್ತ ದೋಣಿ ವಿಹಾರ ನಿರ್ಮಿಸಿ ಪ್ರವಾಸಗರನ್ನ ಆಕರ್ಷಿಸುವ ಬಗ್ಗೆ ಆಶಯ ವ್ಯಕ್ತಪಡಿಸಿದ್ದರು.

Tap to resize

Latest Videos

ಶಾಸಕರ ಸಲಹೆಯಂತೆ ಖುದ್ದು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಕೋಟೆ, ಕಂದಕ ಹಾಗೂ ಸ್ನಾನ ಘಟ್ಟ ಬಳಿ ತೆರಳಿ ಪರಿಶೀಲನೆ ನಡೆಸಿದರು. ಶ್ರೀರಂಗಪಟ್ಟಣದ ಗತವೈಭವವನ್ನು ಮರುಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

 

ವಿಧಾನಸಭೆ ಅಧಿವೇಶನದಲ್ಲಿ ಶ್ರೀರಂಗಪಟ್ಟಣದ ಮೂಲ ಸೌಕರ್ಯಗಳ ಬಗ್ಗೆ ಪ್ರಶ್ನೆ ಎದುರಾದ ಹಿನ್ನೆಲೆಯಲ್ಲಿ ಇಂದು ಸಂಜೆ ಖುದ್ದು ಐತಿಹಾಸಿಕ ಪ್ರವಾಸಿ ಸ್ಥಳ ಶ್ರೀರಂಗಪಟ್ಟಣಕ್ಕೆ ಸ್ಥಳೀಯ ಶಾಸಕರಾದ ಶ್ರೀ ರವೀಂದ್ರ ಶ್ರೀಕಂಠಯ್ಯ ಅವರೊಂದಿಗೆ ಭೇಟಿ ನೀಡಿ ಸ್ಥಳ ವೀಕ್ಷಿಸಿದೆನು. pic.twitter.com/PUrT0jA9hB

— Anand Singh (@AnandSinghBS)

ಹೆಚ್ಚಿನ ಅನುದಾನ ನೀಡುವ ಭರವಸೆ: ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಭಾನುವಾರ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವ ಆನಂದಸಿಂಗ್ (Anand Singh) ಐತಿಹಾಸಿಕ ಕೋಟೆ (Port) ಮತ್ತು ಕಂದಕದ ಬಗ್ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರಿಂದ ಮಾಹಿತಿ ಪಡೆದುಕೊಂಡರು. ಶಾಸಕರ ಬೇಡಿಕೆಯಂತೆ ಇತಿಹಾಸ ಪ್ರಸಿದ್ಧ ಕೋಟೆ ಬಳಿ ಇಟಲಿಯ ವೆನಿಸ್ ಮಾದರಿ ದೋಣಿ ವಿಹಾರ (Boating) ನಿರ್ಮಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು. ಈಗಾಗಲೇ ಸರ್ಕಾರ ಕೋಟೆ, ಸ್ನಾನ ಘಟ್ಟ ಅಭಿವೃದ್ಧಿಗೆ 16 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದೆ. 8.60 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡಲಾಗಿದೆ. ಇನ್ನು ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲು ಸರ್ಕಾರ ಸಿದ್ಧ. ಹಂಪಿ (Hampi) ರೀತಿಯಲ್ಲಿ ಶ್ರೀರಂಗಪಟ್ಟಣದ ಸ್ಮಾರಕಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.

NCEE SURVEY: ಲಾಕ್‌ಡೌನ್‌ ನಂತರ ಮೂಲಭೂತ ಕೌಶಲ್ಯ ಕಳೆದುಕೊಂಡ ಮಕ್ಕಳು!

ಗಿಡ ಕೀಳಲು 3 ಕೋಟಿ ಖರ್ಚು : ಶಾಸಕ ರವೀಂದ್ರ ಅಸಮಾಧಾನ
ಶ್ರೀರಂಗಪಟ್ಟಣ ಕೋಟೆ ಸುತ್ತ ದೋಣಿ ವಿಹಾರ, ವಾಕಿಂಗ್ ಪಾತ್ ನಿರ್ಮಾಣಕ್ಕಾಗಿ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ 13 ಕೋಟಿ ಬಿಡುಗಡೆ ಮಾಡಿದ್ದರು. ಆದರೆ ಪುರಾತತ್ವ ಇಲಾಖೆ ಅಧಿಕಾರಿಗಳು ಕೋಟೆ ಸುತ್ತ ಬೆಳೆದಿದ್ದ ಗಿಡಗಂಟೆಗಳ ತೆರವಿಗೆ 3 ಕೋಟಿ ಖರ್ಚು ಮಾಡಿದ್ದಾರೆ. ಕೊರೊನಾ ಕಾರಣ ಅನುದಾನ ಬಳಸದ ಹಿನ್ನಲೆ ಉಳಿದ 10 ಕೋಟಿ ವಾಪಾಸ್ ಹೋಗಿದೆ. ನನ್ನ ಗಮನಕ್ಕೆ ತರದೆ ಅಧಿಕಾರಿಗಳು ಕಾಮಗಾರಿ ಮಾರ್ಪಾಡು ಮಾಡಿಕೊಂಡು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಆರೋಪಿಸಿದ್ದಾರೆ. ಈ ಬಗ್ಗೆ ವಿಧಾನಸಭೆಯಲ್ಲೂ ಚರ್ಚಿಸಿದ್ದರು.

NIMHANS Recruitment 2022: ಪ್ರಾಜೆಕ್ಟ್ ವಿಜ್ಞಾನಿ ಹುದ್ದೆಗೆ ನಿಮ್ಹಾನ್ಸ್ ಅರ್ಜಿ ಆಹ್ವಾನ

ಶಾಸಕರ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಆನಂದ್ ಸಿಂಗ್ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಈ ಸಂಧರ್ಭದಲ್ಲಿ ರಾಜ್ತ ಪುರಾತತ್ವ ಇಲಾಖೆ ಆಯುಕ್ತರಾದ ಪೂರ್ಣಿಮಾ, ಉಪ ವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ, ಪುರಸಭೆ ಅಧ್ಯಕ್ಷೆ ಪಿ.ನಿರ್ಮಲಾ ಜತೆಗಿದ್ದರು.

click me!