JDS, BJP ಪ್ರಚಾರ ಸ್ಟಾರ್ಟ್, ಕಾಂಗ್ರೆಸ್‌ಗೆ ಅಭ್ಯರ್ಥಿ ಆಯ್ಕೆಯಲ್ಲೇ ಗೊಂದಲ

By Web DeskFirst Published Nov 16, 2019, 2:38 PM IST
Highlights

ಉಪಚುನಾವಣೆ ಸಮೀಪಿಸುತ್ತಿದ್ದು, ಕೆ. ಆರ್. ಪೇಟೆಯಲ್ಲಿ ಅಭ್ಯರ್ಥಿಗಳನ್ನು ಫೈನಲ್‌ಗೊಳಿಸಿ ಬಿಜೆಪಿ ಹಾಗೂ ಜೆಡಿಎಸ್ ಈಗಾಗಲೇ ಪ್ರಚಾರ ಪ್ರಾರಂಭಿಸಿದ್ದರೆ, ಕಾಂಗ್ರೆಸ್ ಮಾತ್ರ ಅಭ್ಯರ್ಥಿ ಆಯ್ಕೆಯನ್ನೇ ಅಂತಿಮಗೊಳಿಸಿಲ್ಲ.

ಮಂಡ್ಯ(ನ.16): ಉಪಚುನಾವಣೆ ಸಮೀಪಿಸುತ್ತಿದ್ದು, ಕೆ. ಆರ್. ಪೇಟೆಯಲ್ಲಿ ಅಭ್ಯರ್ಥಿಗಳನ್ನು ಫೈನಲ್‌ಗೊಳಿಸಿ ಬಿಜೆಪಿ ಹಾಗೂ ಜೆಡಿಎಸ್ ಈಗಾಗಲೇ ಪ್ರಚಾರ ಪ್ರಾರಂಭಿಸಿದ್ದರೆ, ಕಾಂಗ್ರೆಸ್ ಮಾತ್ರ ಅಭ್ಯರ್ಥಿ ಆಯ್ಕೆಯನ್ನೇ ಅಂತಿಮಗೊಳಿಸಿಲ್ಲ.

ಕೆಆರ್‌ಪೇಟೆ ಉಪಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಶ್ನೆಯಾಗಿಯೇ ಉಳಿದಿದೆ. ಕಾಂಗ್ರೆಸ್‌ ಇನ್ನೂ ಯಾರಿಗೆ ಕಾಂಗ್ರೆಸ್ ಟಿಕೆಟ್ ನೀಡೋದು ಎಂಬ ಗೊಂದಲದಿಂದ ಹೊರಬಂದಿಲ್ಲ. ಜೆಡಿಎಸ್, ಬಿಜೆಪಿ ಈಗಾಗಲೇ ಅಭ್ಯರ್ಥಿ ಆಯ್ಕೆ ಮಾಡಿ ಪ್ರಚಾರಕ್ಕೆ ಧುಮುಕಿದ್ದು, ಕಾಂಗ್ರೆಸ್ ಇನ್ನೂ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲದಲ್ಲಿದೆ.

ಕೆ. ಆರ್‌. ಪೇಟೆ: ಕಾಂಗ್ರೆಸ್‌ನಿಂದ ಬೈ ಎಲೆಕ್ಷನ್ ಸ್ಪೆಷಲಿಸ್ಟ್ ಕಣಕ್ಕೆ..!

ಮಾಜಿ ಶಾಸಕರುಗಳಾದ ಕೆ.ಬಿ.ಚಂದ್ರಶೇಖರ್ ಮತ್ತು ಬಿ.ಪ್ರಕಾಶ್ ಅವರು ಕೆ. ಆರ್.ಪೇಟೆ ಕಾಂಗ್ರೆಸ್ ಟಿಕೆಟ್ ರೇಸ್‌ನಲ್ಲಿದ್ದಾರೆ. ಕಾಂಗ್ರೆಸ್ ವರಿಷ್ಠರು ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡೋದು ಎಂಬ ಗೊಂದಲ್ಲಿದ್ದಾರೆ.

ಇಂದು ಅಭ್ಯರ್ಥಿ ಫೈನಲ್:

ಇಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಟಿಕೆಟ್ ಫೈನಲ್ ಆಗಲಿದ್ದು, ಸಂಜೆ ಮೈಸೂರಿನಲ್ಲಿ ನಡೆಯುವ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಪಕ್ಕಾ ಆಗಲಿದೆ. ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ನಾನು ಯಾರಿಗೆ ಟಿಕೆಟ್ ಕೊಟ್ರು ಕೆಲಸ ಮಾಡ್ತೀನಿ ಎಂದಿದ್ದಾರೆ.

ಕೆ. ಆರ್‌. ಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಅವರು, ಈ ಬಾರಿ ಕೆ. ಆರ್‌. ಪೇಟೆ ಇತಿಹಾಸದಲ್ಲಿ ಹೊಸ ಫಲಿತಾಂಶ ಬರಲಿದೆ. ನಮ್ಮ ಅಭ್ಯರ್ಥಿ ಪರ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

'ವಿಶ್ವನಾಥ್‌ ಶಾಸಕನಾಗಿ ಮಸಿ ಬಳಿದಿದ್ದು ಸಾಕು, ಮಂತ್ರಿಯಾಗೋದು ಜಿಲ್ಲೆ ಮಾರೋದಕ್ಕಾ'..?

click me!