ರಸ್ತೆ ದುರಸ್ತಿ ಮಾಡದಿದ್ದರೆ ಮನೆ ಮುಂದೆ ಪ್ರತಿಭಟನೆ: ಶಾಸಕ ಪುಟ್ಟರಾಜು ಎಚ್ಚರಿಕೆ

By Sathish Kumar KHFirst Published Nov 19, 2022, 5:59 PM IST
Highlights

ಬೆಂಗಳೂರು ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ರಸ್ತೆ ಕಾಮಾರಿಯಿಂದ ಮೇಲುಕೋಟೆಯ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇನ್ನೊಂದು ವಾರದಲ್ಲಿ ಹಾಳಾದ ರಸ್ತೆ ದುರಸ್ತಿ ಮಾಡಿಸದಿದ್ದರೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಮನೆ ಮುಂದೆ ಧರಣಿ ಮಾಡುತ್ತೇನೆ ಎಂದು  ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಎಚ್ಚರಿಕೆ ನೀಡಿದ್ದಾರೆ.

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಡ್ಯ (ನ.19):  ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಅಂತಿಮ ಘಟ್ಟ ತಲುಪಿದೆ. ಇನ್ನೇನು ಕೆಲವೇ ತಿಂಗಳುಗಳಲ್ಲಿ ಬಹುನಿರೀಕ್ಷಿತ ಯೋಜನೆ ಸಂಪೂರ್ಣವಾಗಿ ಜನರ ಅನುಕೂಲಕ್ಕೆ ಸಿಗಲಿದೆ. ಈ ನಡುವೆ ಪ್ರತಾಪ್‌ ಸಿಂಹ ಮಂಡ್ಯ ಶಾಸಕರ ಕೆಂಗಣ್ಣಿಗೆ ಗುರಿಯಾಗಿದ್ದು, ಮೇಲುಕೋಟೆ ಶಾಸಕ ಸಿಎಸ್ ಪುಟ್ಟರಾಜು ಸಂಸದ ಪ್ರತಾಪ್ ಸಿಂಹ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಶಪಥ ಹೆದ್ದಾರಿ ಕಾಮಗಾರಿಗೆ ಬಳಸಿಕೊಳ್ಳಲು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೈಸರ್ಗಿಕವಾಗಿ (Natural) ಸಿಗುವ ಕಲ್ಲು, ಮಣ್ಣು ಸೇರಿದಂತೆ ಇತರೆ ಕಚ್ಚಾ ಸಾಮಾಗ್ರಿ (Raw Metirials)ಗಳನ್ನು ತೆಗೆದುಕೊಳ್ಳಲಾಗಿದೆ. ಈ ಕಚ್ಚಾ ವಸ್ತುಗಳನ್ನು ಸಾಗಿಸುವ ವೇಳೆ ಅಲ್ಲಿನ ಸ್ಥಳೀಯ ರಸ್ತೆಗಳು (Local roads) ಹದಗೆಟ್ಟಿದ್ದು, ದುರಸ್ತಿ (Repair) ಮಾಡಿಸಿಕೊಡುವುದಾಗಿ ಮಾತು ಕೊಟ್ಟಿದ್ದ ಪ್ರತಾಪ್ ಸಿಂಹ ತಮ್ಮ ಮಾತಿನಂತೆ ನಡೆದುಕೊಳ್ಳದೆ ಇರುವುದು ಶಾಸಕ ಪುಟ್ಟರಾಜು ಅಸಮಾಧಾನಕ್ಕೆ ಕಾರಣವಾಗಿದೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ: ನವೆಂಬರ್ ಅಂತ್ಯಕ್ಕೆ ಮದ್ದೂರು, ಶ್ರೀರಂಗಪಟ್ಟಣ ಬೈಪಾಸ್ ಓಪನ್

ಈ ಕುರಿತು ಮಾತನಾಡಿರುವ ಶಾಸಕ ಸಿ.ಎಸ್. ಪುಟ್ಟರಾಜು ಬೆಂ-ಮೈ ಹೆದ್ದಾರಿ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ (Unscintific)ವಾಗಿದೆ. ನಿಜಕ್ಕೂ ಆ ರಸ್ತೆ ನೋಡಿದರೆ ನನಗೆ ಅಸಹ್ಯವಾಗುತ್ತದೆ. ಈ ಹೆದ್ದಾರಿ ಕಾಮಗಾರಿಯಿಂದ ಮೇಲುಕೋಟೆ ಕ್ಷೇತ್ರದ ರಸ್ತೆಗಳು ಹಾಳಾಗಿದೆ. ದಶಪಥ ಹೆದ್ದಾರಿ ನಿರ್ಮಾಣಕ್ಕೆ ನನ್ನ ವಿರೋಧವಿಲ್ಲ. ನಾನು ಸಂಸದನಾಗಿದ್ದಾಗ ಈ ಯೋಜನೆಗೆ ಒತ್ತಾಯಿಸಿದ್ದೆನು. ಕಾಮಗಾರಿ ಪ್ರಾರಂಭ ವೇಳೆ ಹಾಳಾದ ರಸ್ತೆ ದುರಸ್ತಿ ಮಾಡುವುದಾಗಿ ಮಾತು ನೀಡಿದ್ದರು. ಆದರೆ ಪ್ರತಾಪ್‌ ಸಿಂಹ ಒಂದು ತಿಂಗಳಿನಿಂದ ಫೋನ್ ಸಂಪರ್ಕಕ್ಕೆ  (Phone contact) ಸಿಗುತ್ತಿಲ್ಲ ಎಂದು ಕಿಡಿಕಾರಿದರು.

ಮಂಡ್ಯ: ಮನೆ ತೆರವು ಕಾರ್ಯಾಚರಣೆ ವೇಳೆ ಹೈ ಡ್ರಾಮ, ಕಲ್ಲಲ್ಲಿ ಹೊಡೆಯುವುದಾಗಿ ಎಚ್ಚರಿಕೆ

ಮನೆ ಮುಂದೆ ಪ್ರತಿಭಟನೆ: ಒಂದು ವಾರದಲ್ಲಿ ಮೇಲುಕೋಟೆ ರಸ್ತೆ ದುರಸ್ತಿ ಮಾಡದಿದ್ದರೆ ಸಂಸದ ಪ್ರತಾಪಸಿಂಹ ಅವರ ಮನೆ ಮುಂದೆ ಪ್ರತಿಭಟನೆ (Protest) ಮಾಡುತ್ತೇನೆ. ಈ ದಶಪಥ ಹೆದ್ದಾರಿಯಿಂದ ಜನರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದಂತಾಗಿದೆ. ಈ ರಸ್ತೆಯಿಂದ ಸಾರ್ವಜನಿಕರಿಗೆ ಇಷ್ಟು ತೊಂದರೆಯಾಗುತ್ತದೆ ಎಂದು ಊಹಿಸಿರಲಿಲ್ಲ. ಗುಣಮಟ್ಟದ ಕಾಮಗಾರಿ (Quality work) ನಡೆದೆ ಇಲ್ಲ, ಬಹಳಷ್ಟು ಕಳಪೆ ಕೆಲಸ ನಡೆದಿದೆ. ಹೆದ್ದಾರಿ ಕಾಮಗಾರಿ ನನಗೆ ಸಮಾಧಾನ (satisfaction) ತಂದಿಲ್ಲ.‌ ಲೋಪಗಳನ್ನ ಸರಿಪಡಿಸದಿದ್ದರೆ ಪ್ರತಾಪ್ ಸಿಂಹಗೆ ತಕ್ಕ ಶಾಸ್ತಿ ಮಾಡುತ್ತೇವೆ. ಅವನನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಪುಟ್ಟರಾಜು ಗುಡುಗಿದ್ದಾರೆ.

 

ಕುಮಾರಣ್ಣ ಸಿಎಂ ಆಗುತ್ತಾರೆ: ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಅತಂತ್ರ (indecisiveness) ಸ್ಥಿತಿ ಬರುವುದಿಲ್ಲ. ನೂರಕ್ಕೆ ನೂರರಷ್ಟು ಕುಮಾರಸ್ವಾಮಿ (Kumaraswami) ಮುಖ್ಯಮಂತ್ರಿ ಆಗುತ್ತಾರೆ. ಜೆಡಿಎಸ್ (JDS)ಬಿಟ್ಟು ಹೋದವರೆಲ್ಲಾ ಮತ್ತೆ ವಾಪಾಸ್ ಬರುತ್ತಿದ್ದಾರೆ. ಕಳೆದ ಬಾರಿ ಕೆ.ಆರ್. ಪೇಟೆಯಲ್ಲಿ (KR Pete) ದುಡ್ಡಿನ ಪ್ರಭಾವಿದಿಂದ ಸೋಲು ಉಂಟಾಗಿತ್ತು. ಆದರೆ, ಈ ಬಾರಿ ಸಮರ್ಥ ಅಭ್ಯರ್ಥಿಗಳಿದ್ದಾರೆ. ಭಾರಿ ಅಂತರದಿಂದ ನಾವು ಗೆಲ್ಲುತ್ತೇವೆ. ಮಂಡ್ಯದಲ್ಲಿ ಈ ಬಾರಿಯೂ 7 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಗೆಲ್ಲಲಿದೆ ಎಂದು ಹೇಳಿದರು.

click me!