ಲಂಚ ಕೇಳುವ ಅಧಿಕಾರಿಗಳನ್ನು ಶಾಸಕರ ಎದುರೆ ಮಂಡ್ಯ ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕರು ಸಹ ಜನರ ಪರವಾಗಿ ನಿಂತು ಮಾತನಾಡಿದ್ದಾರೆ.
ಮಂಡ್ಯ (ಜು. 03] ನಿಮಗೇನು ಮಾನ ಮರ್ಯಾದೆ ಇಲ್ವಾ... ರೈತರ ಸಮಸ್ಯೆ ಬಗೆಹರಿಸಿ ಎಂದರೆ ಲಂಚ ಕೇಳ್ತೀರಾ..? ಲಂಚ ತಗೊಂಡು ಕೆಲಸ ಮಾಡಿಕೊಡದೆ ಸತಾಯಿಸುತ್ತೀರಾ? ಎಂದು ಶಾಸಕರ ಎದುರೇ ಚೆಸ್ಕಾಂ [Chamundeshwari Electricity Supply Corporation] ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಶಾಸಕ ಸುರೇಶ್‌ಗೌಡ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಚೆಸ್ಕಾಂ ಕುಂದು ಕೊರತೆ ಸಭೆ ಜನಾಕ್ರೋಶದ ವೇದಿಕೆಯಾಗಿ ಬದಲಾಯಿತು. ಚೆಸ್ಕಾಂ ಎಂಡಿ ಗೋಪಾಲಕೃಷ್ಣ, ಮೈಸೂರು ಮುಖ್ಯ ಅಭಿಯಂತರ ಶ್ರೀನಿವಾಸ ಮೂರ್ತಿ ಸೇರಿದಂತೆ ನಾಗಮಂಗಲ ತಾಲ್ಲೂಕಿನ ಚೆಸ್ಕಾಂ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದ ಸಭೆಯಲ್ಲಿ ಜನರು ತಮ್ಮ ಸಂಕಟ ಹೊರಹಾಕಿದರು.
ಮಂಡ್ಯ ಸಂಸದೆ ಸುಮಲತಾ ಸಂಸತ್ ನಲ್ಲಿ ಮೊದಲ ಭಾಷಣ
ಸಭೆ ಮಧ್ಯೆ ನಿಮಗೇನು ಮಾನ ಮರ್ಯಾದೆ ಇಲ್ವಾ.ನಿಮ್ಮಿಂದ ಶಾಸಕರ ಮರ್ಯಾದೇನೂ ಕಳೀತೀರ. ಸರಿಯಾಗಿ ಕೆಲಸ ಮಾಡಲು ಆಗದಿದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ರೈತರು ಹೇಳಿದಾಗ ಪರಿಸ್ಥಿತಿ ಬಿಗಡಾಯಿಸಿತ್ತು.
ಸಮಸ್ಯೆ ಕೂಡಲೇ ಬಗೆಹರಿಸುವುದಾಗಿ ಶಾಸಕರು ಮತ್ತು ಅಧಿಕಾರಿಗಳು ಭರವಸೆ ನೀಡಿದ ನಂತರ ಪರಿಸ್ಥಿತಿ ತಹಬದಿಗೆ ಬಂತು.