ಆ್ಯಂಬುಲೆನ್ಸ್‌ನಲ್ಲೇ ಹೆರಿಗೆ; ತಾಯಿ, ಮಗು ಆರೋಗ್ಯ

Published : Mar 02, 2019, 03:38 PM IST
ಆ್ಯಂಬುಲೆನ್ಸ್‌ನಲ್ಲೇ ಹೆರಿಗೆ; ತಾಯಿ, ಮಗು ಆರೋಗ್ಯ

ಸಾರಾಂಶ

ಆಸ್ಪತ್ರೆಗೆ ಹೋಗುವಾಗ ಮಾರ್ಗಮಧ್ಯೆ ಆ್ಯಂಬುಲೆನ್ಸ್‌ನಲ್ಲೇ ಹೆರಿಗೆ | ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ | ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. 

ಮಂಡ್ಯ (ಮಾ. 02): ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಆ್ಯಂಬುಲೆನ್ಸ್ ನಲ್ಲೇ ಹೆಣ್ಣುಮಗವಿಗೆ ಜನ್ಮ ನೀಡಿದ ಘಟನೆ ಇಲ್ಲಿನ ಮೊತ್ತಹಳ್ಳಿ ಬಳಿ ನಡೆದಿದೆ. 

ಗಾಮನಹಳ್ಳಿ ಗ್ರಾಮದ ಪಲ್ಲವಿ ಎಂಬುವವರಿಗೆ ಬೆಳಗಿನ ಜಾವ 5.30 ಕ್ಕೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಅವರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲು ಕರೆತರಲಾಗುತ್ತಿತ್ತು. ಆ ವೇಳೆ ಹೊಟ್ಟೆನೋವು ಹೆಚ್ಚಾಗಿ ಆ್ಯಂಬುಲೆನ್ಸ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆ್ಯಂಬುಲೆನ್ಸ್ ಸ್ಟಾಫ್ ನರ್ಸ್ ರಾಜಣ್ಣ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. 

ಸ್ಟಾಫ್ ನರ್ಸ್ ರಾಜಣ್ಣನ ಕರ್ತವ್ಯಕ್ಕೆ ಪಲ್ಲವಿ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.  ತಾಯಿ ಮಗುವಿಗೆ ಕೊತ್ತತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಹೆರಿಗೆ ಬಳಿಕ ತಾಯಿ, ಮಗು ಆರೋಗ್ಯವಾಗಿದ್ದಾರೆ. 

PREV
click me!

Recommended Stories

ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ