ಉಪಚುನಾವಣೆಗೆ ಸುಮಲತಾ ಬೆಂಬಲ ಯಾರಿಗೆ ? : ಸಂಸದೆ ಮಾಸ್ಟರ್ ಪ್ಲಾನ್

By Web Desk  |  First Published Nov 2, 2019, 11:53 AM IST

ಶೀಘ್ರದಲ್ಲೇ ಜೆಡಿಎಸ್ ಭದ್ರಕೋಟೆ ಮಂಡ್ಯದ ಕೆ ಆರ್ ಪೇಟೆಯಲ್ಲಿ ಉಪ ಚುನಾವಣೆ ನಡೆಯಲಿದ್ದು, ಈ ವೇಳೆ ಸಂಸದೆ ಸುಮಲತಾ ಬೆಂಬಲ ಯಾರಿಗೆ ಎನ್ನುವ ಕುತೂಹಲ ಮನೆ ಮಾಡಿದೆ. 


ಮಂಡ್ಯ [ನ.02] : ರಾಜ್ಯದಲ್ಲಿ ಶೀಘ್ರವೇ ಉಪ ಚುನಾವಣೆ ನಡೆಯಲಿದ್ದು, ಹಲವು ಪಕ್ಷಗಳಲ್ಲಿ ಚುನಾವಣೆ ಸಿದ್ಧತೆಗಳೂ ಜೋರಾಗಿವೆ. 

ಜೆಡಿಎಸ್ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಮಂಡ್ಯದ ಕೆ ಆರ್ ಪೇಟೆ ಬೈ ಎಲೆಕ್ಷನ್ ನಲ್ಲಿ ಸುಮಲತಾ ಬೆಂಬಲ ಯಾರಿಗೆ ಎನ್ನುವ ಕುತೂಹಲ ಇದೀಗ ಮನೆ ಮಾಡಿದೆ. 

Latest Videos

ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳೂ ಕೂಡ ಮಂಡ್ಯ ಕ್ಷೇತ್ರದ ಸಂಸದೇ ಸುಮಲತಾ ಬೆಂಬಲದ ನಿರೀಕ್ಷೆಯಲ್ಲಿದ್ದು, ಒಂದಕ್ಕೆ ಬೆಂಬಲ ನೀಡಿದರೆ ಮತ್ತೊಂದು ಪಕ್ಷದಿಂದ ವಿರೋಧ ಕಟ್ಟಿಕೊಳ್ಳುವ ಆತಂಕ ಎದುರಾಗಿದೆ. 

ಸುಮಲತಾಗಾಗಿ ಮುಂದೆ ಬಂದ ಟ್ರೈನ್: ನಾನ್ ಮಾಡಿದ್ದು ತಪ್ಪಲ್ಲ ಎಂದ ಸಂಸದೆ...

ಆದರೆ ಎರಡೂ ಪಕ್ಷವನ್ನು ಸಮತೋಲನವಾಗಿ ಬೆಂಬಲಿಸಲು ಸುಮಲತಾ ಮಾಸ್ಟರ್ ಪ್ಲಾನ್ ಮಾಡಿದ್ದು, ಲೋಕಸಭಾ ಚುನಾವಣೆಯ ರೀತಿಯಲ್ಲೇ ಜಾಣ್ಮೆಯಿಂದ ಹೆಜ್ಜೆ ಇಡಲು ನಿರ್ಧಾರ ಮಾಡಿದ್ದಾರೆ. 

ತಮ್ಮ ಬೆಂಬಲದ ಬಗ್ಗೆ ಜನಾಭಿಪ್ರಾಯ ಕೇಳುವತ್ತ ಸಮಲತಾ ಚಿತ್ತ ಹರಿಸಿದ್ದು, ನನ್ನನ್ನು ಇನ್ನೂ ಯಾರೂ ಭೇಟಿ ಮಾಡಿಲ್ಲ. ಜನರ ತೀರ್ಮಾನವೇ ನನ್ನ ತೀರ್ಮಾನ ಎಂದು ಹೇಳಿದ್ದಾರೆ. 

ರೈತರ ಸಂಕಷ್ಟಕ್ಕೆ ಸ್ಪಂದಿಸದ ಸುಮಲತಾ : ಪರಿತಪಿಸುತ್ತಿದ್ದಾರೆ ಮಂಡ್ಯದ ಜನ...

ನಾನು ಪಕ್ಷೇತರಳಾಗಿದ್ದು,  ಬೆಂಬಲ ಕೊಡಲೇಬೇಕು ಎಂದು ಬಲವಂತವಿಲ್ಲ. ನಾನು ತಟಸ್ಥ ನಿರ್ಧಾರವನ್ನೂ ಕೈಗೊಳ್ಳಬಹುದು ಎಂದು ಹೇಳಿದ್ದು, ಈ ಮೂಲಕ ಎರಡೂ ಪಕ್ಷಗಳ ವಿಶ್ವಾಸ ಉಳಿಸಿಕೊಳ್ಳುವ ಯತ್ನದಲ್ಲಿದ್ದಾರೆ. 

ಸದ್ಯ ಡಿಸೆಂಬರ್ 5ಕ್ಕೆ ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ಫಿಕ್ಸ್ ಆಗಿದ್ದು, ಮಂಡ್ಯದ ಕೆ ಆರ್ ಪೇಟೆ ಕ್ಷೇತ್ರವು ನಾರಾಯಣ ಗೌಡ ಅನರ್ಹತೆಯಿಂದ ತೆರವಾಗಿದ್ದು, ಇಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಾಗಿವೆ. ಜೆಡಿಎಸ್ ನಿಂದ ಸ್ಥಳೀಯ ಅಭ್ಯರ್ಥಿಗೆ ಮಣೆ ಹಾಕುವ ನಿರ್ಧಾರ ಮಾಡಿದ್ದರೆ, ಬಿಜೆಪಿಯಿಂದ ಅನರ್ಹ ಶಾಸಕ ನಾರಾಯಣ ಗೌಡ ಅವರೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಇನ್ನಷ್ಟೇ ನಿರ್ಧಾರವಾಗಬೇಕಿದೆ.

click me!