ಸಂಸದೆ ಸುಮಲತಾಗಾಗಿ ಟ್ರೈನ್ ಮುಂದೆ ಬಂದು ನಿಂತ ಪ್ರಸಂಗದ ಸ್ವತಃ ಸಂಸದೆಯೇ ಸ್ಪಷ್ಟನೆ ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ನಾನು ಮಾಡಿದ್ದು ತಪ್ಪಲ್ಲ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಸುಮಲತಾ ಏನ್ ಹೇಳಿದ್ರು, ಏನಾಯ್ತು..? ಇಲ್ಲಿದೆ ಹೆಚ್ಚಿನ ವಿವರ.
ಮಂಡ್ಯ(ನ.01): ಸುಮಲತಾಗಾಗಿ ಮೆಮು ಟ್ರೈನ್ ಮುಂದೆ ಬಂದ ವಿಚಾರಕ್ಕೆ ಸಂಸದೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ್ದಾರೆ. ಟ್ರೈನ್ ಮುಂದೆ ಬಂದು ನಿಂತ ವಿಚಾರವಾಗಿ ಪ್ರತಿಕ್ರಿಯಿಸಿದ ಸುಮಲತಾ ಅಂಬರೀಶ್ ಅವರು ನಾನು ಮಾಡಿದ್ದು ತಪ್ಪಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಮೆಮು ಟ್ರೈನ್ ಮುಂದೆ ಬಂದ ವಿಚಾರವಾಗಿ ನಾನು ಮಾಡಿದ್ದು ತಪ್ಪಲ್ಲ ಎಂದು ಸುಮಲತಾ ಸಮರ್ಥನೆ ಮಾಡಿಕೊಂಡಿದ್ದು, ನನ್ನ ಬಗೆಗೆ ವಿರೋಧ ಸುದ್ದಿಗಳು ಬರಬಾರದು ಎಂದು ನಾನು ಅಂದು ಕೊಂಡಿಲ್ಲ. ನಾನು ತಪ್ಪು ಮಾಡಿದ್ದನ್ನು ವಿರೋಧ ಮಾಡಿದ್ರೆ ಬೇಸರವಿಲ್ಲ ಎಂದು ಹೇಳಿದ್ದಾರೆ.
undefined
ಅಧಿಕಾರಿಗಳೇ ಹೇಳಿದ್ರು..!
ನಿನ್ನೆ ಮಹಿಳೆಯರಿಗಾಗಿ ಮೀಸಲಿದ್ದ ಪ್ರತ್ಯೇಕ ಬೋಗಿಗಳಿಗೆ ಚಾಲನೆ ನೀಡಲಾಗುತ್ತಿತ್ತು. ಚಾಲನೆ ನೀಡಲು ಸ್ಥಳ ನಿಗದಿಯಾಗಿತ್ತು. ಆ ಸ್ಥಳದಲ್ಲಿ ಲೇಡಿಸ್ ಕೋಚ್ ಅಂತಲೂ ಬರೆಯಲಾಗಿತ್ತು. ಟ್ರೈನ್ ಇಲ್ಲಿಗೆ ಬಂದಾಗ ನೀವು ಚಾಲನೆ ನೀಡಬೇಕೆಂದು ಅಧಿಕಾರಿಗಳೇ ಹೇಳಿದ್ದರು ಎಂದಿದ್ದಾರೆ.
ನಿನ್ನೆ ಮಾತ್ರವಲ್ಲ, ದಿನವೂ ಟ್ರೈನ್ ಇಲ್ಲಿಯೇ ನಿಲ್ಲುತ್ತೆ:
ನೆನ್ನೆ ಮಾತ್ರ ಅಲ್ಲ ಇನ್ಮೂಂದೆ ಟ್ರೈನ್ ಯಾವಾಗ ಬಂದರೂ ಮಹಿಳೆಯರು ಅಲ್ಲಿಯೇ ಟ್ರೈನ್ ಹತ್ತುತ್ತಾರೆ. ಆ ಪ್ರಕಾರ ನಾನು ಆ ಸ್ಥಳದಲ್ಲೇ ನಿಂತಿದ್ದೆ. ಟ್ರೈನ್ ಆಗ ತಾನೇ ಬಂದು ಪ್ರಯಾಣಿಕರ ಹಿತದೃಷ್ಟಿಯಿಂದ ಸ್ವಲ್ಪ ಹಿಂದೆ ನಿಂತಿತ್ತು. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿ ಇಳಿದ ಬಳಿಕ ಅಧಿಕಾರಿಗಳೇ ರೈಲನ್ನು ನಿಗದಿತ ಸ್ಥಳಕ್ಕೆ ಬರಲು ಹೇಳಿದ್ದರು. ಆಗ ನಾನು ಮಹಿಳೆಯರ ಪ್ರತ್ಯೇಕ ಬೋಗಿಗಳಿಗೆ ಚಾಲನೆ ನೀಡಿದೆ ಅಷ್ಟೇ. ಇಲ್ಲಿ ಯಾವುದೇ ರೀತಿಯ ತಪ್ಪಾಗಿಲ್ಲ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.
ನವೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: