ಶೃಂಗೇರಿ ಮಠಕ್ಕೆ ಚಿನ್ನದ ಕಳಸ ಕೊಟ್ಟ ಟಿಪ್ಪು ಹೇಗೆ ಮತಾಂದನಾಗುತ್ತಾನೆ?

By Web DeskFirst Published Oct 31, 2019, 3:25 PM IST
Highlights

ಮರಾಠರ ವಿರುದ್ಧ ಹೋರಾಟ ಮಾಡಿ  ಶೃಂಗೇರಿ ಮಠಕ್ಕೆ ಮತ್ತೆ ಚಿನ್ನದ ಕಳಸ ಕೊಟ್ಟಿದ್ದ ಟಿಪ್ಪು| ಮೊದಲ ಬಾರಿಗೆ ಲ್ಯಾಂಡ್ ರಿಫನ್ ಫ್ಯಾಕ್ಟರಿಯನ್ನು ತಂದವನು  ಟಿಪ್ಪು ಸುಲ್ತಾನ್|ದೇಶದ ಸ್ವಾತಂತ್ರ್ಯ ಸೇನಾನಿ, ಒಬ್ಬ ಶ್ರೀಮಂತನಿಗೂ ಟಿಪ್ಪು ಜಮೀನು ಕೊಟ್ಟಿರಲಿಲ್ಲ| ದೇವದಾಸಿ ಪದ್ಧತಿನ್ನು ಅಳಿಸಿ ಹಾಕಿದ್ದು ಟಿಪ್ಪು ಸುಲ್ತಾನ್|

ಮಂಡ್ಯ[ಅ. 31]:ಮರಾಠರ ವಿರುದ್ಧ ಹೋರಾಟ ಮಾಡಿ ಚಿನ್ನದ ಕಳಸವನ್ನು ಮತ್ತೆ ಶೃಂಗೇರಿ ಮಠಕ್ಕೆ ಕೊಟ್ಟ ಟಿಪ್ಪು ಸುಲ್ತಾನ್ ಹೇಗೆ ಮತಾಂದನಾಗುತ್ತಾನೆ ಎಂದು  ಮಾಜಿ ಸಚಿವ ಎಸ್.ಸಿ.ಮಹದೇವಪ್ಪ ಅವರು ಹೇಳಿದ್ದಾರೆ. 

ಗುರುವಾರ ಮಂಡ್ಯದಲ್ಲಿ‌ ಮಾತನಾಡಿದ ಅವರು, ಮೊದಲ ಬಾರಿಗೆ ಲ್ಯಾಂಡ್ ರಿಫನ್ ಫ್ಯಾಕ್ಟರಿಯನ್ನು ತಂದವನು  ಟಿಪ್ಪು ಸುಲ್ತಾನ್, ದೇಶದ ಸ್ವಾತಂತ್ರ್ಯ ಸೇನಾನಿ, ಒಬ್ಬ ಶ್ರೀಮಂತನಿಗೂ ಟಿಪ್ಪು ಜಮೀನು ಕೊಟ್ಟಿರಲಿಲ್ಲ, ದೇವದಾಸಿ ಪದ್ಧತಿನ್ನು ಅಳಿಸಿ ಹಾಕಿದ್ದು, ರೇಷ್ಮೆ ಕೃಷಿಯನ್ನು ಪರಿಚಯಿಸಿದ ವಾಣಿಜ್ಯ ವೈವಾಟಿಗಾಗಿ ಹರಿಹರ ಗುಬ್ಬಿಯನ್ನು ಕೇಂದ್ರವನ್ನಾಗಿ ಮಾಡಿಕೊಂಡಿದ್ದ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಿಂದೂ ಮತಾಂದರು ಈಗ ಮತಾಂದ ಕೆಲಸಕ್ಕೆ ಕೈ ಹಾಕಿದ್ದಾರೆ. ಟಿಪ್ಪು ಅಂತಹ ಚಾರಿತ್ರಿಕ ಪುರಷನನ್ನು ಚರಿತ್ರೆಯಿಂದ ಹೋಗಲಾಡಿಸಲು ಮುಂದಾಗಿದ್ದಾರೆ ಮೋದಿ. ಅವರಿಗೆ ಅಮೇರಿಕಾದಲ್ಲಿ ಬುದ್ಧ ಬೇಕು ಇಂಡಿಯಾದಲ್ಲಿ ಯುದ್ಧ ಬೇಕು. ಈ ಹಿನ್ನೆಯಲ್ಲಿ ರಾಜ್ಯ ಸರ್ಕಾರ ಭೌದ್ಧಿಕ ದಿವಾಳಿಯಿಂದ ಟಿಪ್ಪುವನ್ನು ಪಠ್ಯದಿಂದ ತೆಗೆಯಲು‌ ಮುಂದಾಗಿದೆ ಎಂದು ತಿಳಿಸಿದ್ದಾರೆ. 

click me!