Mandya: ಸರ್ಕಾರಿ ‌ಸ್ಮಶಾನ ಮುಸ್ಲಿಂರ ಮಕಾನ್ ಆಗಿ ಖಾತೆ ಬದಲಾವಣೆ, ಗ್ರಾಮಸ್ಥರಿಂದ ವಿರೋಧ

By Suvarna News  |  First Published Mar 25, 2022, 5:59 PM IST
  • 1976 ರಿಂದ 2017ರ ವರೆಗೆ ಸರ್ಕಾರಿ ಸ್ಮಶಾನ, 2017ರ ಬಳಿ‌ಕ ಮುಸ್ಲಿಂ ಮಕಾನ್
  • 1 ಎಕರೆ 13 ಗುಂಟೆ ಜಮೀನು ವಕ್ಫ್ ಮಂಡಳಿ ಹೆಸರಿಗೆ ಖಾತೆ
  • ಅಂದಿನ ಮಂಡ್ಯ ಡಿಸಿ ಆಗಿದ್ದ ಜಿಯಾವುಲ್ಲಾ ವಿರುದ್ಧ ಗ್ರಾಮಸ್ಥರ ಆರೋಪ

ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಡ್ಯ(ಮಾ.25): ಹಿಜಾಬ್ ಗಲಾಟೆಯಿಂದ ಆರಂಭಗೊಂಡ ಧರ್ಮ ಸಂಘರ್ಷ ರಾಜ್ಯದಲ್ಲಿ ಬೇರೆ ಬೇರೆ ಸ್ವರೂಪ ಪಡೆದುಕೊಳ್ತಿದೆ. ಹಿಜಾಬ್ ತೀರ್ಪು ವಿರೋಧಿಸಿ ಕೆಲ ಮುಸ್ಲಿಂ ಸಂಘಟನೆಗಳು ಬಂದ್ ಮಾಡಿದ ಬಳಿಕ ಕರಾವಳಿ, ಮಲೆನಾಡು ಭಾಗದ ಹಬ್ಬ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಲಾಗಿದ್ದು, ಬೇರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸುತ್ತಿದೆ. ಆದ್ರೆ ಸಕ್ಕರೆ ನಾಡು ಮಂಡ್ಯಕ್ಕೆ ಸ್ಮಶಾನ ರೂಪದಲ್ಲಿ ಧರ್ಮಯುದ್ಧ ಎಂಟ್ರಿ ಆಯ್ತ ಎಂಬ ಅನುಮಾನ ಹುಟ್ಟಿ ಕೊಂಡಿದೆ. ಯಾಕೆಂದರೆ ಮುಸ್ಲಿಂ ಸಮುದಾಯದ ಮಕಾನ್ ಜಾಗ ಸರ್ಕಾರಿ ಸ್ಮಶಾನ ಅಂತ ಗ್ರಾಮಸ್ಥರು ಹೋರಾಟ ಆರಂಭಿಸಿದ್ದಾರೆ.

Tap to resize

Latest Videos

2017ರ ವರೆಗೂ ಸರ್ಕಾರಿ ಸ್ಮಶಾನ, ಬಳಿಕ ಮುಸ್ಲಿಂರ ಮಕಾನ್: ಮಂಡ್ಯ ತಾಲೂಕಿನ ಬೆಂಗಳೂರು - ಮೈಸೂರು ಹೆದ್ದಾರಿ ಪಕ್ಕದ ಹೊಸ ಬೂದನೂರು ಗ್ರಾಮದ ಸರ್ವೇ 313 ರಲ್ಲಿ 1 ಎಕರೆ 13 ಗುಂಟೆ ಜಾಗವಿದೆ. ಈ ಜಾಗವನ್ನ ದಶಕಗಳ ಹಿಂದೆಯೆ ಸರ್ಕಾರಿ ಸ್ಮಶಾನ ಜಾಗವಾಗಿ ಗುರಿತಿಸಲಾಗಿತ್ತು. ಆದ್ರೆ 2017ರಲ್ಲಿ ಮುಸ್ಲಿಂರ ಮಕಾನ್‌ಗಾಗಿ ವಕ್ಫ್ ಮಂಡಳಿಗೆ ಖಾತೆ ಬದಲಾವಣೆ ಮಾಡಿಕೊಡಲಾಗಿದೆ. ಆಗಿನ ಮಂಡ್ಯ ಡಿಸಿ ಆಗಿದ್ದ ಜಿಯಾವುಲ್ಲಾ ಮುಸ್ಲಿಂ ಸಮುದಾಯಕ್ಕೆ ಜಾಗ ನೀಡಿದ್ದು. ಹೊಸ ಬೂದನೂರು ಗ್ರಾಮ ಸೇರಿದಂತೆ ಸುತ್ತ 15 ಹಳ್ಳಿಗಳಲ್ಲಿ ಒಂದೇ ಒಂದು ಮುಸ್ಲಿಂ ಸಮುದಾಯದ ಕುಟುಂಬ ವಾಸಿಸದೆ ಇದ್ರು ಸ್ಮಶಾನ ಜಾಗವನ್ನ ಮಕಾನ್ ಆಗಿ ಬದಲಾವಣೆ ಮಾಡಿ ಕೊಟ್ಟಿದ್ದು ಯಾಕೆ ಅಂತ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಠಾಧೀಶರ ಉಡುಪಿನ ಬಗ್ಗೆ ಮಾತನಾಡಿ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ

ಹೊಸ ಬೂದನೂರು ಗ್ರಾಮ ಒಂದರಲ್ಲೇ ಬೇರೆ ಬೇರೆ ಜನಾಂಗದ 5 ಸಾವಿರ ಮಂದಿ ವಾಸವಿದ್ದು ಯಾರೇ ಮೃತಪಟ್ಟರು, ಈ ಸ್ಮಶಾನದಲ್ಲಿಯೇ ಅಂತ್ಯಕ್ರಿಯೆ ನಡೆಸುತ್ತಾ ಬಂದಿದ್ದೇವೆ. ಆದ್ರೆ ಏಕಾಏಕಿ ಯಾರ ಅಭಿಪ್ರಾಯ ಕೇಳದೆ ಯಾರ ಗಮನಕ್ಕೂ ತರದೆ ಅಧಿಕಾರಿಗಳು ಸ್ಮಶಾನ ಜಾಗವನ್ನ ವಕ್ಫ್ ಮಂಡಳಿಗೆ ನೀಡಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ರು.

ಸ್ಮಶಾನ ಜಾಗ ವಾಪಾಸ್ ನೀಡದಿದ್ರೆ ಉಗ್ರ ಹೋರಾಟದ ಎಚ್ಚರಿಕೆ: 1976 ರಿಂದ 2017ರ ವರೆಗೂ ಸ್ಮಶಾನ ಜಾಗ ಇದ್ದ ಬಗ್ಗೆ ದಾಖಲೆಗಳನ್ನು ಒದಗಿಸುವ ಗ್ರಾಮಸ್ಥರು. ಊರಿಗೆ ಇರುವುದು ಒಂದೇ ಸ್ಮಶಾನ ಅದನ್ನು ಮುಸ್ಲಿಂರ ಮಕಾನ್‌ಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕಳೆದ 2 ವರ್ಷಗಳಿಂದ ಡಿಸಿ, ಎಸಿ, ಸಿಇಓಗಳಿಗೆ ಪತ್ರ ಬರೆದು ಮನವಿ ಸಲ್ಲಿಸಿರುವ ಗ್ರಾಮಸ್ಥರು. ಯಾವುದೇ ಪ್ರಯೋಜನ ಆಗದೆ ಇದ್ದಾಗ ರಸ್ತೆಗಿಳಿದಿದ್ದಾರೆ.

Chikkamagaluru: ತಾನು ಓದಿದ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ ಐಎಎಸ್ ಅಧಿಕಾರಿ

ಹೊಸ ಬೂದನೂರು ಗ್ರಾಮದಿಂದ ಮಂಡ್ಯದ ಡಿಸಿ ಕಚೇರಿವರೆಗೂ ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಮನವಿಗೆ ಸ್ಪಂದಿಸಿದಿದ್ರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

click me!