ಮಂಡ್ಯದಲ್ಲಿ ಅನುಮಾನಾಸ್ಪದ ಪರೇಡ್: 15 ಶಂಕಿತ ಮುಸ್ಲಿಂ ಯುವಕರ ಬಂಧನ

By Web Desk  |  First Published Oct 27, 2019, 7:42 PM IST

ದಸರಾ ಸಮಯದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕೆಯ ಮೇರೆಗೆ ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಯ ನಾಲ್ವರು ಶಂಕಿತ ಉಗ್ರರನ್ನು ಶ್ರೀರಂಗಪಟ್ಟಣದಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಇದೀಗ ದೀಪಾವಳಿ ಹಬ್ಬದಲ್ಲಿ ಅನುಮಾನಸ್ಪದವಾಗಿ ಪರೇಡ್ ನಡೆಸುತ್ತಿದ್ದ 15 ಮುಸ್ಲಿಂ ಯುವಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಮಂಡ್ಯ, [ಅ.27]: ಮೈಸೂರು ಜಂಬೂಸವಾರಿ ಮೇಲೆ ಕಣ್ಣಿಟ್ಟು, ಸ್ಯಾಟಲೈಟ್ ಫೋನ್ ಬಳಕೆ ಮಾಡುತ್ತಿದ್ದರು ಎನ್ನವ ಆರೋಪದ ಮೇಲೆ ದಸರಾ ಸಮಯದಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಾಲ್ವರು ಶಂಕಿತ ಉಗ್ರರರನ್ನು ರಾಷ್ಟ್ರೀಯ ಭದ್ರತಾ ಪಡೆ(ಎನ್‌ಐಎ) ಬಂಧಿಸಿದ್ದರು. 

ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇಂದು [ಭಾನುವಾರ] ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಆಲಂಬಾಡಿಕಾವಲು ಗ್ರಾಮದಲ್ಲಿ 15 ಮಂದಿ ಶಂಕಿತ ಮುಸ್ಲಿಂ ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Latest Videos

undefined

ಸ್ಫೋಟಕ ಮಾಹಿತಿ: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಗ್ರರ ಕರಿ ನೆರಳು

ಆಲಂಬಾಡಿಕಾವಲು ಗ್ರಾಮದ ಹೊರವಲಯದಲ್ಲಿ ಈ ಯುವಕರ ಗುಂಪು ಅನುಮಾನಾಸ್ಪದವಾಗಿ ಪೆರೇಡ್ ಮಾಡುತ್ತಿದ್ದರು. ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ಕೆ.ಆರ್.ಪೇಟೆ ಪೊಲೀಸರು ದಾಳಿ ಮಾಡಿದ್ದು, 15 ಯುವಕರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

 ಎಸ್ ಐ ಲಕ್ಷ್ಮಣ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಎಸ್ಪಿ ಪರಶುರಾಮ್ ನೇತೃತ್ವದಲ್ಲಿ ಕೆ.ಆರ್.ಎಸ್ ಪೋಲಿಸ್ ಠಾಣೆಯಲ್ಲಿ ತೀವ್ರ ವಿಚಾರಣೆ ನಡೆದಿದೆ. 

ದೀಪಾವಳಿ ಸಂಭ್ರಮದಲ್ಲಿ ಜನ, ಟಿಪ್ಪು ಹೋರಾಟಕ್ಕೆ ವಾಟಾಳ್ ಬಣ, ಅ.27ರ ಟಾಪ್ 10 ಸುದ್ದಿ!

ಇತ್ತೀಚೆಗೆ ಕೆಆರ್ ಪೇಟೆ, ಕಿಕ್ಕೇರಿ ಭಾಗದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡಲಾಗಿತ್ತು. ಈ ಸ್ಯಾಟಲೈಟ್ ಫೋನ್ ಬಳಕೆಗೂ ಬಂಧತರಿಗೂ ಸಂಬಂಧ ಇದೆಯಾ? ಎಂಬುದನ್ನೂ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ವಿಚಾರಣೆ ಬಳಿಕ ಪೋಲಿಸರು ಜಿಲ್ಲಾಧಿಕಾರಿ ಬಳಿಗೆ ಕರೆದೊಯ್ಯಲಿದ್ದಾರೆ ಎಂದು ತಿಳಿದುಬಂದಿದೆ.

click me!