ನನ್ನ ಕ್ಷೇತ್ರಕ್ಕೆ ಕಾಲಿಟ್ಟರೆ ಸರಿ ಇರಲ್ಲ: ಡಿ.ಕೆ.ಸುರೇಶ್ ಗೆ ಎಚ್ಚರಿಸಿದ JDS ಶಾಸಕ

Published : Oct 21, 2019, 09:30 AM IST
ನನ್ನ ಕ್ಷೇತ್ರಕ್ಕೆ ಕಾಲಿಟ್ಟರೆ ಸರಿ ಇರಲ್ಲ: ಡಿ.ಕೆ.ಸುರೇಶ್ ಗೆ ಎಚ್ಚರಿಸಿದ JDS ಶಾಸಕ

ಸಾರಾಂಶ

ನನ್ನ ಕ್ಷೇತ್ರಕ್ಕೆ ಕಾಲಿಟ್ಟರೆ ಸರಿ ಇರಲ್ಲ ಎಂದು ಡಿಕೆ ಸುರೇಶ್ ಅವರಿಗೆ ಜೆಡಿಎಸ್ ಶಾಸಕರೋರ್ವರು ಎಚ್ಚರಿಕೆ ನೀಡಿದ್ದಾರೆ. 

ಮಂಡ್ಯ [ಅ.21]: ತೊಂದರೆ ಕೊಡುವ ಉದ್ದೇಶದಿಂದ ನನ್ನ ಕ್ಷೇತ್ರಕ್ಕೇನಾದರೂ ಕಾಲಿಟ್ಟರೆ ಸರಿ ಇರಲ್ಲ!

ಮಾರ್ಕೋನಹಳ್ಳಿ ಕುಡಿಯುವ ನೀರು ಯೋಜನೆ ವಿಚಾರದಲ್ಲಿ ಕುಣಿಗಲ್‌ನ ಕಾಂಗ್ರೆಸ್‌ ಶಾಸಕ ಡಾ.ರಂಗನಾಥ್‌ ಮತ್ತು ಸಂಸದ ಡಿ.ಕೆ. ಸುರೇಶ್‌ ಅವರಿಗೆ ನಾಗಮಂಗಲದ ಜೆಡಿಎಸ್‌ ಶಾಸಕ ಸುರೇಶ್‌ ಗೌಡ ಎಚ್ಚರಿಕೆ ನೀಡಿದ್ದು ಹೀಗೆ.

ತುಮಕೂರು ಕೆಡಿಪಿ ಸಭೆಯಲ್ಲಿ ಶಾಸಕ ರಂಗನಾಥ್‌ ಮಾರ್ಕೊಕನಹಳ್ಳಿ ಯೋಜನೆ ಕಾಮಗಾರಿಗೆ ಅಡ್ಡಿ ಮಾಡಿದ್ದಾರೆ ಎಂದಿರುವ ಸುರೇಶ್‌, ಕ್ಷೇತ್ರಕ್ಕೆ ತೊಂದರೆ ಕೊಡಬೇಕು, ನಾಗಮಂಗಲದಲ್ಲಿ ಯಾರಿಗೋ ಸಹಕಾರ ಮಾಡಬೇಕು ಎನ್ನುವ ಉದ್ದೇಶದಿಂದ ಅವರು ಹೀಗೆ ಇಲ್ಲಸಲ್ಲದ ಕಿತಾಪತಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಯಾರಿಗೋ ಸಹಕಾರ ಮಾಡಲು ನನ್ನ ಕ್ಷೇತ್ರದ ಕಾಮಗಾರಿಗೆ ಅಡ್ಡಿಪಡಿಸಲು ಬಂದರೆ ಸುಮ್ಮನಿರಲ್ಲ. ನಮ್ಮ ನೀರು, ನಮ್ಮ ನಮ್ಮ ಜಾಗದಲ್ಲಿ ಜಾಕ್ವೆಲ್‌ ಮಾಡಬಾರದು ಎನ್ನಲು ಇವರಾರ‍ಯರು ಎಂದು ಕಿಡಿಕಾರಿದ್ದಾರೆ.

PREV
click me!

Recommended Stories

ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ