ಬೂಟುಗಾಲಿನಿಂದ ಒದ್ದು ದೌರ್ಜನ್ಯ ತೋರಿದ ಸಿಪಿಐ

By Kannadaprabha NewsFirst Published Oct 19, 2019, 4:04 PM IST
Highlights

ಮಳವಳ್ಳಿ ಪಟ್ಟಣದ ಟೌನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಸಿ.ಎನ್.ರಮೇಶ್ ಗೂಂಡಾವರ್ತನೆ ಹೆಚ್ಚಾಗಿದೆ. ಮೂವರು ಅಮಾಯಕರ ಮೇಲೆ ಹಲ್ಲೆ ನಡೆಸಿ ಭೀಕರವಾಗಿ ಗಾಯಗೊಳಿಸಿದ್ದಾರೆಂದು ಕರ್ನಾಟಕ ಪ್ರಾಂತ ರೈತಸಂಘದ ಅಧ್ಯಕ್ಷ ಎನ್.ಎಲ್.ಭರತ್‌ರಾಜ್ ಶುಕ್ರವಾರ ಆರೋಪಿಸಿದ್ದಾರೆ.

ಮಂಡ್ಯ(ಅ.19): ಮಳವಳ್ಳಿ ಪಟ್ಟಣದ ಟೌನ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಸಿ.ಎನ್.ರಮೇಶ್ ಗೂಂಡಾವರ್ತನೆ ಹೆಚ್ಚಾಗಿದೆ. ಮೂವರು ಅಮಾಯಕರ ಮೇಲೆ ಹಲ್ಲೆ ನಡೆಸಿ ಭೀಕರವಾಗಿ ಗಾಯಗೊಳಿಸಿದ್ದಾರೆಂದು ಕರ್ನಾಟಕ ಪ್ರಾಂತ ರೈತಸಂಘದ ಅಧ್ಯಕ್ಷ ಎನ್.ಎಲ್.ಭರತ್‌ರಾಜ್ ಶುಕ್ರವಾರ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಭರತ್ ರಾಜ್, ಅ.16ರಂದು ರಾತ್ರಿ 12.30ರ ಸಮಯದಲ್ಲಿ ಪಟ್ಟಣದ ನಿವಾಸಿಗಳಾದ ಸಿದ್ದಪ್ಪಾಜಿ ಆಲಿಯಾಸ್ ಮಯೂರ, ಸಿದ್ದಯ್ಯ ಹಾಗೂ ಎಂ.ಬಿ.ಶಿವಕುಮಾರ್ ಅವರ ಮೇಲೆ ಯಾವುದೇ ಕಾರಣ ಇಲ್ಲದೆ ಏಕಾಏಕಿ ಹಲ್ಲೆ ನಡೆಸಿ ತೀವ್ರ ಗಾಯಗೊಳಿಸಿದ್ದಾರೆ ಎಂದು ದೂರಿದ್ದಾರೆ.

'ಗುಂಡೂರಾವ್ KPCC ಅಧ್ಯಕ್ಷರಾದ ದಿನವೇ ಕಾಂಗ್ರೆಸ್ ಸತ್ತೋಯ್ತು'..!

ಸಿದ್ದಪ್ಪಾಜಿ ಆಲಿಯಾಸ್ ಮಯೂರ ಅವರಿಗೆ ಮೂಳೆ ಮುರಿದಿದ್ದು, ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ತಮಿಳುನಾಡಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ಬರುವಾಗ ರಾತ್ರಿ 12.30 ಆಗಿತ್ತು. ಪಟ್ಟಣದ ತಮ್ಮ ಮನೆ ಮುಂದೆ ಕಾರಿನಲ್ಲಿ ಇಳಿಯುವಾಗ ಏಕಾಏಕಿ ಬಂದ ಇನ್ಸ್‌ಪೆಕ್ಟರ್ ಸಿ. ಎನ್.ರಮೇಶ್ ಅವರು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಲಾಠಿಯಿಂದ ಮೂವರ ಮೇಲೂ ಹಲ್ಲೆ ಮಾಡಿದ್ದಾರೆ.

ಮೊದಲೇ ಮೂಳೆ ಮುರಿದಿದ್ದ ಸಿದ್ದಪ್ಪಾಜಿ ತಾವು ಚಿಕಿತ್ಸೆ ಪಡೆದ ಔಷಧಗಳನ್ನು ಹಾಗೂ ಗಾಯಗೊಂಡಿರುವುದನ್ನು ತೋರಿಸಿದರೂ ಬಿಡದೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ ಎಂದು ದೂರಿದರು. ಎಂ.ಬಿ.ಶಿವಕುಮಾರ್ ಅವರ ಮೇಲೆ ತೀವ್ರ ಹಲ್ಲೆ ನಡೆಸಿ, ಬೂಟು ಕಾಲಿನಿಂದ ಒದ್ದ ಪರಿಣಾಮ ಸೊಂಟಕ್ಕೆ ಗಂಭೀರ ಗಾಯವಾಗಿದೆ.

'ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ ಹೊರಗೆ ಬಂದರೂ ಆಶ್ಚರ್ಯ ಇಲ್ಲ'

ಇದಕ್ಕೂ ಸುಮ್ಮನಾಗದ ಸಿ.ಎನ್.ರಮೇಶ್, ಇವರ ಮೇಲೆಯೇ ಕೊಲೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಸುಳ್ಳು ದೂರು ದಾಖಲಿಸಿಕೊಂಡು ಎಫ್‌ಐಆರ್ ಹಾಕಿರುವುದು ಖಂಡನೀಯ ಎಂದಿದ್ದಾರೆ.

ಪ್ರತಿಭಟನೆ ಎಚ್ಚರಿಕೆ:

ಸಿ.ಎನ್.ರಮೇಶ್ ಪಟ್ಟಣಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಬಂದ 8 ದಿನಕ್ಕೆ ಇವರ ಗುಂಡಾ ವರ್ತನೆ ಮಿತಿ ಮೀರಿದೆ. ಹಲವಾರು ಬಾರಿ ಇವರ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಯಾವುದೇ ಕಾರಣವಿಲ್ಲದೆ, ಸುಮ್ಮನೆ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಪೊಲೀಸ್ ಠಾಣೆಯ ಸಿಬ್ಬಂದಿಗೂ ಇವರ ಕಿರುಕುಳ ಜೋರಾಗಿದೆ. ಆದ್ದರಿಂದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಈತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅಮಾನತು ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿದ್ಯಾರ್ಥಿಗಳ ಮಾರಾಮಾರಿ, ರಣ ರಣ ಬಿಸಿಲಲ್ಲೇ ಹೊಡಿ ಬಡಿ..!

ಸುದ್ದಿಗೋಷ್ಠಿಯಲ್ಲಿ ಗಾಯಗೊಂಡ ಎಂ.ಬಿ.ಶಿವಕುಮಾರ್, ಸಿದ್ದಪ್ಪಾಜಿ ಹಾಗೂ ಸಿದ್ದಯ್ಯನಡೆದ ಘಟನೆಯನ್ನು ವಿವರಿಸಿದರು. ಸರ್ಕಲ್ ಇನ್ಸ್‌ಪೆಕ್ಟರ್ ಸಿ.ಎನ್.ರಮೇಶ್ ಅವರ ಗುಂಡಾ ವರ್ತನೆಯನ್ನು ಬಿಡಿಸಿಟ್ಟರು. ಗೋಷ್ಠಿಯಲ್ಲಿ ಯಜಮಾನ ಚಿಕ್ಕಮೊಗಣ್ಣ, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ರವಿ ಇದ್ದರು.

click me!