ಶನೇಶ್ವರ ದೇವರ ಗುಡಿಗೆ ನುಗ್ಗಿ ಮೂರ್ತಿಗೆ ಪ್ರದಕ್ಷಿಣೆ ಹಾಕಿದ ಕಾಗೆ..!

By Web DeskFirst Published Oct 20, 2019, 11:50 AM IST
Highlights

ಕಾಗೆ ಶನಿದೇವರ ವಾಹನ ಎನ್ನುವುದು ಗೊತ್ತಿರುವ ಸಂಗತಿ. ಮಂಡ್ಯದ ಮದ್ದೂರಿನಲ್ಲಿ ಭಾನುವಾರ ಅಚ್ಚರಿಯ ಘಟನೆಯೊಂದು ನಡೆದಿದೆ. ಹೊರಗಿದ್ದ ಕಾಗೆ ಶನೇಶ್ವರ ದೇವರ ಗರ್ಭಗುಡಿಗೆ ನುಗ್ಗಿ ಮೂರ್ತಿಗೆ ಪ್ರದಶಕ್ಷಿಣೆ ಹಾಕಿದೆ. ಮಂಗಳಾರತಿಯಾಗುತ್ತಿದ್ದರೂ ಹೊರಗೆ ಬಾರದ ಕಾಗೆ ಅಲ್ಲಿಯೇ ಕುಳಿತಿತ್ತು.

ಮಂಡ್ಯ(ಅ.20): ಕಾಗೆ ಶನಿದೇವರ ವಾಹನ ಎನ್ನುವುದು ಗೊತ್ತಿರುವ ಸಂಗತಿ. ಮಂಡ್ಯದ ಮದ್ದೂರಿನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಹೊರಗಿದ್ದ ಕಾಗೆ ಶನೇಶ್ವರ ದೇವರ ಗರ್ಭಗುಡಿಗೆ ನುಗ್ಗಿ ಮೂರ್ತಿಗೆ ಪ್ರದಶಕ್ಷಿಣೆ ಹಾಕಿದೆ. ಮಂಗಳಾರತಿಯಾಗುತ್ತಿದ್ದರೂ ಹೊರಗೆ ಬಾರದ ಕಾಗೆ ಅಲ್ಲಿಯೇ ಕುಳಿತಿತ್ತು. 

ಶನಿವಾರ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದ ಶನೇಶ್ವರ ದೇವಾಲಯದ ಗರ್ಭಗುಡಿಗೆ ಕಾಗೆಯೊಂದು ಪ್ರವೇಶಿಸಿದೆ. ನಂತರ ಶನಿದೇವರ ಪಾದದ ಬಳಿ ಕುಳಿತು ನೆರೆದವರ ಅಚ್ಚರಿಗೆ ಕಾರಣವಾಯಿತು.

ಪೂಜೆ ಮಾಡಿ ನೈವೇದ್ಯ ಕೊಟ್ಟ ಅರ್ಚಕ:

ಕಾಗೆ ಶನಿ ದೇವರ ಗರ್ಭಗುಡಿಗೆ ಪ್ರವೇಶ ಮಾಡಿದ ಸುದ್ದಿ ತಿಳಿದು ಗರ್ಭಗುಡಿಯಲ್ಲಿದ್ದ ಕಾಗೆಯ ದರ್ಶನ ಪಡೆಯಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಗ್ರಾಮದ ಹಿರಿಯರ ಸಲಹೆ ಮೇರೆಗೆ ಕಾಗೆಗೂ ಪೂಜೆ ಸಲ್ಲಿಸಿ ಅರ್ಚಕರು ನೈವೇದ್ಯ ನೀಡಿದ್ದಾರೆ. 

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

ತನಗೆ ಮಂಗಳಾರತಿ ಮಾಡುತ್ತಿದ್ದರೂ ಅತ್ತ ಇತ್ತ ಹೋಗದ ಕಾಗೆ, ಗರ್ಭಗುಡಿಯ ನಂತರ ದೇವಾಲಯದ ಮುಂಭಾಗದಲ್ಲಿರೊ ಅರಳಿಮರವನ್ನೂ ಪ್ರದಕ್ಷಿಣೆ ಹಾಕಿದೆ. ಬೆಳಗ್ಗೆಯಿಂದ ದೇವಾಲಯದಲ್ಲಿದ್ದು ಪೂಜೆ ನೈವೇದ್ಯ ಸ್ವೀಕರಿಸಿ ಸಂಜೆ ವೇಳೆಗೆ ಹಾರಿ ಹೋಗಿದೆ.

ದೇವಾಲಯದಲ್ಲಿ ನಡೆದ ಘಟನೆಯಿಂದ ಜನ ಅಚ್ಚರಿಗೊಳಗಾಗಿದ್ದಾರೆ. ಇದೆಲ್ಲಾ ಶನಿದೇವರ ಮಹಾತ್ಮೆ ಎಂದು ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ.

ಕೊಡಗಿನಲ್ಲಿ 24ರ ವರೆಗೆ ಆರೆಂಜ್‌ ಅಲರ್ಟ್‌

click me!