ಬಿಜೆಪಿ ಜೊತೆ ಕೈ ಜೋಡಿಸಲು ದಳಪತಿಗಳ ನಿರ್ಧಾರ?

Published : Oct 19, 2019, 09:35 AM IST
ಬಿಜೆಪಿ ಜೊತೆ ಕೈ ಜೋಡಿಸಲು ದಳಪತಿಗಳ ನಿರ್ಧಾರ?

ಸಾರಾಂಶ

ರಾಜ್ಯದಲ್ಲಿ ಶೀಘ್ರ ಉಪ ಚುನಾವಣೆ ನಡೆಯುತ್ತಿದ್ದು, ದಳಪತಿಗಳು ಬಿಜಪಿಗೆ ಸಹಾಯ ಮಾಡಲು ನಿರ್ಧರಿಸಿದ್ದಾರ..? ಹೀಗೊಂದು ಅನುಮಾನ ಶಾಸಕರೋರ್ವರ ಹೇಳಿಕೆಯಿಂದ ವ್ಯಕ್ತವಾಗಿದೆ. 

ಮಂಡ್ಯ [ಅ.19]: ಶೀಘ್ರ ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, ಈ ವೇಳೆ ಬಿಜೆಪಿ ಜೊತೆಗೆ ಕೈ ಜೋಡಿಸಲು ದಳಪತಿಗಳು ನಿರ್ಧರಿಸಿದ್ದಾರಾ..?

ಇಂತಹದ್ದೊಂದು ಸುಳಿವನ್ನು ಮಂಡ್ಯದ ನಾಗಮಂಗಲದ ಜೆಡಿಎಸ್ ಶಾಸಕ ಸುರೇಶ್ ಗೌಡ ಹೇಳಿಕೆಯೊಂದು ನೀಡಿದೆ. ಉಪ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಿಜೆಪಿ ಗೆಲ್ಲುವುದು ಅನುಮಾನವಾಗಿದ್ದು, ಎರಡನೇ ಹಂತದ ಆಪರೇಷನ್ ಕಮಲ ಮಾಡುವ ಸಾಧ್ಯತೆ ಇದೆ ಎನ್ನುವ ಶಂಕೆ ಮೂಡಿತ್ತು. 

ಈ ನಿಟ್ಟಿನಲ್ಲಿ ಗೌರವವಾಗಿ ನಮ್ಮನ್ನು ನಡೆಸಿಕೊಂಡರೆ ಸಪೋರ್ಟ್ ಮಾಡೋಣ ಎಂದು ತೀರ್ಮಾನಿಸಿದ್ದು, ಓಪನ್ ಸಪೋರ್ಟ್ ಮಾಡಿದಾಗ ಆಪರೇಷನ್ ಏಕೆ ಬೇಕಿತ್ತು ಎಂದು ಬಿಜೆಪಿಗೆ ಬೆಂಬಲ ನೀಡುವ ಆಫರ್ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ. 

ಬಿಜೆಪಿ ಬೆಂಬಲಿಸುವ ಬಗ್ಗೆ ಕುಮಾರಸ್ವಾಮಿ ಅವರು ಸೇರಿದಂತೆ ಜೆಡಿಎಸ್ ಶಾಸಕರು ಚರ್ಚೆ ಮಾಡಿದ್ದು, ಗೌರವವಾಗಿ ನಡೆಸಿಕೊಂಡರೆ ಬೆಂಬಲ ನೀಡೋಣ ಎಂದು ಕುಮಾರಣ್ಣನೂ ಹೇಳಿದ್ದು ನಿಜ ಎಂದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಸದ್ಯದ ಸ್ಥಿತಿಯಲ್ಲಿ ಬಿಜೆಪಿಯವರು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಬೆಂಬಲ ನೀಡುರವುದು ಅನುಮಾನವಾಗಿದ್ದು, 2017-18ರಲ್ಲಿ ಬಿಡುಗಡೆ ಮಾಡಿದ್ದ ಅನುದಾನ ಕಿತ್ತುಕೊಳ್ಳುತ್ತಾರೆ. ಯಾವ ರೀತಿಯ ರಾಜಕಾರಣ ಮಾಡುತ್ತಿದ್ದಾರೆಂದು ಅರ್ಥವಾಗಿಲ್ಲ.ಇದನ್ನೆಲ್ಲಾ ನೋಡಿದರೆ ಅಧಿಕಾರ ಬೇಕು, ಆದರೆ ಜನಗಳ ಕಷ್ಟ ಸುಖಕ್ಕೆ ಸ್ಪಂದಿಸಲು ಮಾರ್ತ ಅವರಿಗೆ ಆಗುವುದಿಲ್ಲ ಎನ್ನುವು ಅರ್ಥವಾಗುತ್ತಿದೆ ಎಂದರು. 

ನೋಡೋಣ ಎಷ್ಟು ದಿನ ನಡೆಯುತ್ತೆ. ಪರಿಸ್ಥಿತಿ ಫೇಸ್ ಮಾಡೋಣ. ನಮ್ಮ ಪಕ್ಷದಿಂದ ಯಾವ ಶಾಸಕರು ಬಿಜೆಪಿಗೆ ಹೋಗುವುದಿಲ್ಲ. ನನಗೆ 2018ರಿಂದಲೂ ಆಮಿಷ ಬರುತ್ತಿದೆ. ಜನರು ನೀಡಿರುವ ಅಧಿಕಾರವನ್ನ ವ್ಯಾಪಾರಕ್ಕೆ ಇಡುವುದಿಲ್ಲ ಎಂದು   ಜೆಡಿಎಸ್ ಶಾಸಕ ಕೆ.ಸುರೇಶ್ ಗೌಡ ಹೇಳಿದ್ದಾರೆ.

PREV
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ