ಮಂಡ್ಯ : ಕಾಲು ಜಾರಿ ನಾಲೆಗೆ ಬಿದ್ದು ಉಪನ್ಯಾಸಕ ಸಾವು

Published : Nov 04, 2019, 01:08 PM IST
ಮಂಡ್ಯ :  ಕಾಲು ಜಾರಿ ನಾಲೆಗೆ ಬಿದ್ದು ಉಪನ್ಯಾಸಕ ಸಾವು

ಸಾರಾಂಶ

ಕಾಲೇಜು ಉಪನ್ಯಾಸಕರೋರ್ವರು ಕಾಲು ಜಾರಿ ನಾಲೆಗೆ ಬಿದ್ದು ಮೃತಪಟ್ಟಿದ್ದಾರೆ. ಮಂಡ್ಯದ ಕೆ.ಆರ್.ಪೇಟೆ ತಾಲೂಕಿನಲ್ಲಿ ಈ  ದುರ್ಘಟನೆಯಾಗಿದೆ. 

ಮಂಡ್ಯ [ನ.04]: ಕಾಲುಜಾರಿ ನಾಲೆಗೆ ಬಿದ್ದು ಉಪನ್ಯಾಸಕರೋರ್ವರು ಸಾವಿಗೀಡಾದ ಘಟನೆ ಮಂಡ್ಯದಲ್ಲಿ ನಡೆದಿದೆ. 

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಭೈರಾಪುರ ಗ್ರಾಮದಲ್ಲಿ, ಮದ್ದೂರು ತಾಲೂಕಿನ ಆನೆದೊಡ್ಡಿಯ ತುಳಸಿ ಪ್ರಸಾದ್ [32] ನಾಲೆಗೆ ಬಿದ್ದು ಸಾವಿಗೀಡಾಗಿದ್ದಾರೆ. 

ಮದ್ದೂರಿನ ಬೆಸಗರಹಳ್ಳಿಯ ಮಾನಸ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ತುಳಸಿ ಪ್ರಸಾದ್ ಕಾರ್ಯ ನಿರ್ವಹಿಸುತ್ತಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತನ್ನ ಸಹೋದರಿ ಮನೆಗೆಂದು ಭೈರಾಪುರಕ್ಕೆ ಆಗಮಿಸಿದ್ದು ಈ ವೇಳೆ  ಸಾಹುಕಾರ ಚೆನ್ನಯ್ಯ ನಾಲೆಗೆ ತೆರಳಿದ್ದು ಈ ವೇಳೆ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದರು. ಬಳಿಕ ಮೃತದೇಹವನ್ನು ನಾಲೆಯಿಂದ ಹೊರ ತೆಗೆಯಲಾಗಿದೆ.

ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಹಾಸ್ಟೆಲ್ ವಾರ್ಡನ್ನೋ ಅಥವಾ ಬಾಟಲ್ ವಾರ್ಡನ್ನೋ? ಮನೆಯನ್ನೇ ಮಿನಿಬಾರ್ ಮಾಡಿಕೊಂಡ ಸರ್ಕಾರಿ ಅಧಿಕಾರಿ!
ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನಿರಂತರವಾಗಿ ಹರಿದ ಕಾವೇರಿ, ಖಾಲಿಯಾಗುತ್ತಿರುವ ನೀರು, ಕುಡಿಯುವ ನೀರಿನ ಆತಂಕ!