ಶ್ರೀರಂಗಪಟ್ಟಣ dysp ಆತ್ಮಹತ್ಯೆ ಯತ್ನ ಪ್ರಕರಣ| ಆತ್ಮಹತ್ಯೆಗೆ ಯತ್ನಿಸಿದ Dysp ವಿರುದ್ದ ಪ್ರಕರಣ ದಾಖಲು| ಶ್ರೀರಂಗಪಟ್ಟಣದ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು| ಈ ಬಗ್ಗೆ ಮಂಡ್ಯದ ಎಸ್ಪಿ ಕೆ.ಪರಶುರಾಮ್ ಪ್ರತಿಕ್ರಿಯೆ
ಮಂಡ್ಯ, [ಅ.14]: ಆತ್ಮಹತ್ಯೆಗೆ ಯತ್ನಿಸಿದ್ದ ಶ್ರೀರಂಗಪಟ್ಟಣದ dysp ಯೋಗೇಂದ್ರನಾಥ್ ವಿರುದ್ಧವೇ ದೂರು ದಾಖಲಾಗಿದೆ.
ಶ್ರೀರಂಗಪಟ್ಟಣದ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಕೆ.ಪರಶುರಾಮ್, ನೆನ್ನೆ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬ ಮಾಹಿತಿ ಇತ್ತು. ಅವರನ್ನು ಅವರ ಸಂಬಂಧಿಕರು ಮತ್ತು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಬಳಿಕೆ ಚೇತರಿಕೆಗೊಂಡು ಯೋಗೇಂದ್ರನಾಥ್ ಹೇಳಿಕೆ ನೀಡಿದ್ದಾರೆ. ಸೂಸೈಡ್ ಅಟೆಮ್ಟ್ ಮಾಡಿಲ್ಲ ಬಿದ್ದಾಗ ಕಮೋಡ್ ತಗಲಿ ಗಾಯವಾಗಿದೆ ಎಂದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
undefined
ಮಂಡ್ಯ : DYSP ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಹೊಸ ಟ್ವಿಸ್ಟ್
ದಸರಾಗೂ ಮೊದಲು ಅವರಿಗೆ 5 ದಿನ ರಜೆ ಪಡೆದುಕೊಂಡಿದ್ದರು. ಎಲ್ಲಾ ಸಿಬ್ಬಂದಿಗೆ ಇರುವಂತೆ ಕೆಲಸದ ಒತ್ತಡ ಸಾಮಾನ್ಯವಾಗಿಯೇ ಇತ್ತು. ಮತ್ತೆ 15 ರಜೆ ಕೇಳಿದ್ದರು, ಅವರು ಗುರುವಾರ ರಜೆ ಕೇಳಿದ್ದರು. ಆದ್ರೆ ನಾನು ಶುಕ್ರವಾರ ಅವರಿಗೆ ರಜೆ ಮಂಜೂರು ಮಾಡಿದ್ದೆ. ರಜೆ ಮಂಜೂರಾದ್ರೂ ಅವರು ಬೆಂಗಳೂರಿಗೆ ಹೋಗದೆ ಇಲ್ಲೇ ಯಾಕೆ ಉಳಿದರು ಅನ್ನೋದು ಗೊತ್ತಿಲ್ಲ ಎಂದು ಹೇಳಿದರು.
ಅ.13ರಂದು ಯೋಗೇಂದ್ರನಾಥ್ ಅವರು ಕೈ ಕಾಲಿನ ನರ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿತ್ತು. ಆದ್ರೆ ಇಂದು [ಸೋಮವಾರ] ಯೋಗೇದ್ರನಾಥ್ ಖುದ್ದು ಹೇಳಿಕೆ ನೀಡಿದ್ದು, ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ, ನಾನು ಚೆನ್ನಾಗಿ ಇದ್ದೇನೆ. ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಈ ಪ್ರಕರಣವನ್ನು ಬೇರೆ ರೀತಿ ತಿರುಗಿಸಿದ್ದಾರೆ. ಯಾವುದೇ ಊಹಾಪೋಹಕ್ಕೆ ಕಿವಿಗೊಡಬೇಡಿ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟರು.
ಶ್ರೀರಂಗಪಟ್ಟಣ DYSP ಯೋಗಾನಂದ್ ಆತ್ಮಹತ್ಯೆ ಯತ್ನ
ಈ ಹಿನ್ನೆಲೆಯಲ್ಲಿ dysp ಯೋಗೇಂದ್ರನಾಥ್ ಆತ್ಮಹತ್ಯೆ ಪ್ರಕರಣ ಪೊಲೀಸರಿಗೆ ಗೊಂದಲಾಗಿದೆ. ಇದ್ರಿಂದ ದೂರು ದಾಖಲಿಸಿಕೊಂಡು ಈ ಬಗ್ಗೆ ತನಿಖೆ ಮಾಡುವುದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ dysp ಯೋಗೇಂದ್ರನಾಥ್ ನಿಜಕ್ಕೂ ಆತ್ಮಹತ್ಯೆಗೆ ಯತ್ನಿಸಿ ಬಳಿಕ ಉಲ್ಟಾ ಹೇಳಿಕೆ ನೀಡಿದ್ರಾ? ಎನ್ನುವ ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪೊಲೀಸ್ ತನಿಖೆಯಿಂದ ನಿಜಾಂಶ ಹೊರಬರಬೇಕಿದೆ.