ಮಂಡ್ಯ ಜಿಲ್ಲೆಯ ಶ್ರೀ ರಂಗಪಟ್ಟಣ ತಾಲೂಕಿನ DYSP ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ದೊರಕಿದೆ. ಏನದು ಇಲ್ಲಿದೆ ಮಾಹಿತಿ.
ಮಂಡ್ಯ [ಅ.14]: ಶ್ರೀರಂಗಪಟ್ಟಣದ dysp ಯೋಗೇಂದ್ರನಾಥ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ.
ನಾನು ಆತ್ಮಹತ್ಯೆಗೆ ಯತ್ನಿಸಿಲ್ಲ, ನಾನು ಚೆನ್ನಾಗಿ ಇದ್ದೇನೆ. ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಈ ಪ್ರಕರಣವನ್ನು ಬೇರೆ ರೀತಿ ತಿರುಗಿಸಿದ್ದಾರೆ ಎಂದು ಮೈಸೂರಿನಲ್ಲಿಂದು ಯೋಗೇಂದ್ರನಾಥ್ ಹೇಳಿದರು.
undefined
ಬೆಳಗ್ಗೆ ಎದ್ದು ಟಾಯ್ಲೆಟ್ ಗೆ ಹೋಗಿದ್ದಾಗ ತಲೆಸುತ್ತು ಬಂದಿತ್ತು. ಈ ವೇಳೆ ಕಮೋಡ್ ಗೆ ಗ್ಲಾಸ್ ಒಡೆದು ಕಾಲಿಗೆ ಮತ್ತು ಕೈಗೆ ಪೆಟ್ಟಾಗಿದೆ. ನಾನು ಚೆನ್ನಾಗಿದ್ದೆನೆ. ಯಾವುದೇ ಊಹಾಪೋಹಕ್ಕೆ ಕಿವಿಗೊಡಬೇಡಿ ಎಂದರು.
ಶ್ರೀರಂಗಪಟ್ಟಣ DYSP ಯೋಗಾನಂದ್ ಆತ್ಮಹತ್ಯೆ ಯತ್ನ...
ನನಗೆ ಬಿಪಿ ಮತ್ತು ಷುಗರ್ ಇರುವ ಕಾರಣದಿಂದ ಮರೆಗುಳಿಯೂ ಸ್ವಲ್ಪ ಪ್ರಮಾಣದಲ್ಲಿ ಇದೆ. ನಾನು ಈಗಲೂ ಚೆನ್ನಾಗಿಯೇ ಇದ್ದೇನೆ. ಸ್ವಲ್ಪ ಮಟ್ಟಿನ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಯಾರು ಇಂತಹ ಮಾತುಗಳಿಗೆಲ್ಲಾ ಕಿವಿಗೊಡಬೇಡಿ ಎಂದು ಮೈಸೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ dysp ಯೋಗೇಂದ್ರನಾಥ್ ಸ್ಪಷ್ಟನೆ ನೀಡಿದರು.
ಅಕ್ಟೋಬರ್ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: