ಅಡಿಕೆ ತೋಟದ ಜೊತೆಯಲ್ಲಿ ಮೇಕೆ ಸಾಕಾಣಿಕೆಯನ್ನು ಪ್ರವೃತಿಯಾಗಿ ಸ್ವೀಕರಿಸಿ ಯಶಸ್ಸು ಕಂಡವರು ತುಮಕೂರಿನ ಮೆಳೇಹಳ್ಳಿಯ ಪ್ರಗತಿಪರ ಕೃಷಿಕ ರಂಗಕರ್ಮಿ ಡಮರುಗ ಉಮೇಶ್. ಜಮನಾಪುರಿ ಮೇಕೆಗಳನ್ನು ಸಾಕಿ ಅಧಿಕ ಆದಾಯ ಪಡೆಯುತ್ತಿದ್ದಾರೆ.
- ಫರ್ಮಾನ್ ಕೆ
ಕಳೆದ ಕೆಲವು ವರ್ಷಗಳಿಂದ ಜಮನಾಪುರಿ ತಳಿ ಮೇಕೆ ಸಾಕುತ್ತಿರುವ ಉಮೇಶ್ ಅವರು, ತಮ್ಮ ಜಮೀನಿನ ಒಂದು ಭಾಗದಲ್ಲಿ, 4ಲಕ್ಷ ರು. ವೆಚ್ಚದಲ್ಲಿ ಆಧುನಿಕ ಮೇಕೆ ಶೆಡ್ ನಿರ್ಮಿಸಿದ್ದಾರೆ. ಇದು ನೆಲಮಟ್ಟದಿಂದ 4.5 ಅಡಿ ಎತ್ತರವಿದೆ. ಶೆಡ್ಡಿನ ಕೆಳಭಾಗದಲ್ಲಿ ಮೇಕೆ ಗೊಬ್ಬರ ಶೇಖರಣೆಗೆ ವ್ಯವಸ್ಥೆ ಮಾಡಲಾಗಿದೆ. ಶೆಡ್ಡಿನಲ್ಲಿ ಸೂಕ್ತ ಗಾಳಿ, ಬೆಳಕು, ನೀರಿಗೆ ಕೊರತೆ ಇಲ್ಲ. ಪ್ರತಿ ಮೇಕೆಗೂ ಮುಸುಕಿನ ಜೋಳ ಕೊಡುತ್ತಾರೆ. ಜೊತೆಗೆ ಒಣ ಹುಲ್ಲು, ಕಡಲೆಬಳ್ಳಿ, ಕಾಳುಗಳ ಪೌಡರ್ ಇತ್ಯಾದಿ ಆಹಾರ ನೀಡುತ್ತಾರೆ. ಜೊತೆಗೆ ಹಸಿಮೇವೂ ಇರುತ್ತದೆ. ಇವರು ತಮ್ಮಲ್ಲಿರುವ ನಾಟಿ ಮೇಕೆಗಳಿಗೆ ಜಮುನಾಪುರಿ ಮೇಕೆಗಳನ್ನು ಕ್ರಾಸ್ ಮಾಡಿಸಿ ಉತ್ತಮ ಗುಣಮಟ್ಟದ ಜಮುನಾಪುರಿ ಮೇಕೆಗಳನ್ನು ಅಭಿವೃದ್ಧಿ ಪಡಿಸಿ ಮಾರಾಟ ಮಾಡುತ್ತಾರೆ.
undefined
ಜಮೀನಿಗೆ ಜಿಪ್ಸಂ ಯಾಕೆ ಹಾಕ್ಬೇಕು, ಏನದರ ಉಪಯೋಗ?
ಉಮೇಶ್ ಅವರು ಜಮುನಾಪುರಿ ಮೇಕೆಯ ವಿಶೇಷತೆಗಳನ್ನು ವಿವರಿಸುವುದು ಹೀಗೆ-
ಪಶ್ಚಿಮ ಬಂಗಾಳದ ಜಮುನಾ ನದಿ ದಂಡೆಯ ಭಾಗ ಹಾಗೂ ಬಾಂಗ್ಲಾದೇಶ ಮೂಲದ ಮೇಕೆಗಳು ಇವಾಗಿರುವ ಕಾರಣ ಇವಕ್ಕೆ ಜಮುನಾಪುರ ಮೇಕೆ ಎಂಬ ಹೆಸರು ಬಂದಿದೆ. ಹಾಲು ಮತ್ತು ಮಾಂಸಕ್ಕಾಗಿ ಇವುಗಳನ್ನು ಸಾಕುತ್ತಾರೆ. ಬೇರೆ ತಳಿಯ ಮೇಕೆ ಮಾಂಸಕ್ಕೆ ಹೋಲಿಸಿದರೆ ಜಮನಾಪುರಿ ಮೇಕೆಯ ಮಾಂಸದಲ್ಲಿ ಕಡಿಮೆ ಕೊಬ್ಬಿನಂಶವಿರುತ್ತದೆ. ಈ ಮೇಕೆಗಳ ದೇಹ ಬಿಳಿ, ಕಪ್ಪು, ಕಂದು ಮತ್ತು ಹಳದಿ ಬಣ್ಣಗಳಿಂದ ಕೂಡಿರುತ್ತದೆ. ಉದ್ದವಾದ ಜೋಲು ಕಿವಿಗಳು ಮತ್ತು ಕೊಂಬುಗಳು ಜಮನಾಪುರಿ ಮೇಕೆಗಳ ವಿಶಿಷ್ಟಲಕ್ಷಣಗಳು.
ಅಧಿಕ ತೂಕದ ಮೇಕೆಗಳು
ಜಮನಾಪುರಿ ಮೇಕೆ ಮರಿಗಳು 3ರಿಂದ 4 ಕೆ.ಜಿ ತೂಕವಿರುತ್ತವೆ. ಮೂರು ವರ್ಷದಲ್ಲೆ ಗಂಡು ಮೇಕೆ 120ಕೆ.ಜಿ ತೂಗಿದರೆ, ಹೆಣ್ಣು 90 ಕೆ.ಜಿ ತೂಗುತ್ತದೆ. ಒಂದು ವರ್ಷದ ಜಮುನಾಪುರಿ ಮೇಕೆಗೆ ಕನಿಷ್ಠ 20-25 ಸಾವಿರ ರೂಪಾಯಿ ಬೆಲೆ ಇದೆ. ಒಂದು ಮೇಕೆ ದಿನಕ್ಕೆ ಸರಾಸರಿ 3 ಲೀಟರ್ ಹಾಲು ಕೊಡುತ್ತದೆ. ಈ ಮೇಕೆ ಹಾಲು ಆರೋಗ್ಯಕರವಾಗಿದ್ದು 5% ನಷ್ಟುಕೊಬ್ಬಿನಂಶವನ್ನು ಹೊಂದಿರುತ್ತದೆ.
ಕೃಷಿ ಸಚಿವರೇ ನಾಲಗೆ ಬಿಗಿ ಹಿಡಿದು ಮಾತನಾಡಿ: ಎಚ್‌ಡಿಕೆ
ಸಂತಾನೋತ್ಪತ್ತಿ
ಈ ಮೇಕೆ ತಳಿಗಳು ಎರಡು ವರ್ಷಕ್ಕೆ ಮೂರು ಬಾರಿ ಮರಿಗಳನ್ನು ಹಾಕುತ್ತವೆ. 90%ರಷ್ಟುಬಾರಿ ಮೂರು ಮರಿಗಳನ್ನು ಹಾಕುವ ಸಾಧ್ಯತೆ ಇದೆ. 60%ರಷ್ಟುಬಾರಿ ಎರಡು ಮರಿಗಳನ್ನು ಹಾಕುವ ಸಾಧ್ಯತೆ ಇದೆ. ಒಂದು ಮರಿ ಹಾಕುವ ಸಾಧ್ಯತೆಗಳು ತುಂಬಾ ವಿರಳ. ಹಾಗೇನಾದರು ಹಾಕಿದರೆ ಅದು ದಷ್ಟಪುಷ್ಟವಾಗಿರುತ್ತದೆ ಹುಟ್ಟಿದ ಮರಿಯೆ 5-6 ಕೆ.ಜಿ ತೂಗುತ್ತದೆ. ಹಾಗಾಗಿ ಲಾಭವು ಹೆಚ್ಚಿದೆ. ಈ ಮೇಕೆಯು ಹುಟ್ಟಿದ 8ರಿಂದ 12ತಿಂಗಳಲ್ಲಿ ಸಂತಾನೋತ್ಪತಿಗೆ ಸಿದ್ದಗೊಳ್ಳುತ್ತದೆ. ಇವುಗಳ ಜೀವಿತಾವಧಿ 18ವರ್ಷಗಳು. ಈ ಕುರಿತ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9740773802 ಸಂಪರ್ಕಿಸಿ.