700 ಕಾರು, 4 ಸಾವಿರ ಕೋಟಿ ಅರಮನೆ, 8 ಜೆಟ್‌: ಉಫ್​! ಈ ಶ್ರೀಮಂತ ಫ್ಯಾಮಿಲಿ ಕಥೆ ಕೇಳಿದ್ರೆ ಸುಸ್ತಾಗೋಗ್ತೀರಾ!

By Suvarna NewsFirst Published Jan 20, 2024, 2:52 PM IST
Highlights

700 ಕಾರು, 4 ಸಾವಿರ  ಕೋಟಿ ಅರಮನೆ, 8 ಜೆಟ್‌... ಇನ್ನೂ ಏನೇನೋ..  ಈ ಶ್ರೀಮಂತ ಫ್ಯಾಮಿಲಿಯ ರೋಚಕ ಸ್ಟೋರಿ ಇಲ್ಲಿದೆ ನೋಡಿ...
 

700 ಕಾರು, 4 ಸಾವಿರ  ಕೋಟಿ ಅರಮನೆ, 8 ಜೆಟ್‌,  ಫುಟ್‌ಬಾಲ್ ಕ್ಲಬ್, ಪ್ರಪಂಚದ ಶೇಕಡ ಆರರಷ್ಟು ತೈಲ ನಿಕ್ಷೇಪ... ಅಬ್ಬಬ್ಬಾ... ಜಗತ್ತಿನ ಅತಿ ಶ್ರೀಮಂತ ಎನಿಸಿರೋ ಈ ಫ್ಯಾಮಿಲಿ ಕಥೆ ಕೇಳಿದ್ರೆ ಸುಸ್ತಾಗೋದು ಗ್ಯಾರೆಂಟಿ! ಹೌದು. ಇಂಥದ್ದೊಂದು ಶ್ರೀಮಂತ ಕುಟುಂಬ ಇರುವುದು ಸೌದಿ ಅರೆಬಿಯಾದಲ್ಲಿ. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಈ ಕುಟುಂಬದ ಒಡೆಯನಾಗಿದ್ದು, ಇವರನ್ನು ಷಾರ್ಟ್​ ಆಗಿ ಎಂಬಿಝಡ್‌ ಎಂದೂ ಕರೆಯುತ್ತಾರೆ. ಇವರ ಬಳಿ ಮೂರು ಪೆಂಟಗನ್‌ಗಳ ಗಾತ್ರದ ₹ 4,078 ಕೋಟಿ ಬೆಲೆ ಬಾಳುವ ಮನೆ ಇದೆ. ಎಂಟು ಖಾಸಗಿ ಜೆಟ್‌ಗಳು ಮತ್ತು ಒಂದು ಫುಟ್‌ಬಾಲ್ ಕ್ಲಬ್ ಹೊಂದಿದ್ದಾರೆ.  ಅಲ್ ನಹ್ಯಾನ್ ರಾಜಮನೆತನ ಇದಾಗಿದ್ದು, ಸದ್ಯ ಈ ಕುಟುಂಬವನ್ನು  ವಿಶ್ವದ ಅತ್ಯಂತ ಶ್ರೀಮಂತ ಕುಟುಂಬ ಎಂದು ಹೇಳಲಾಗಿದೆ.
 
ಇನ್ನು ಇವರ ಕುತೂಹಲದ ಫ್ಯಾಮಿಲಿ ಕಥೆ ಇಷ್ಟಕ್ಕೇ ಮುಗಿಯುವುದಿಲ್ಲ. ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಕುಟುಂಬದ ಮುಖ್ಯಸ್ಥರಾಗಿದ್ದು, ಇವರ ಫ್ಯಾಮಿಲಿ ಸಿಕ್ಕಾಪಟ್ಟೆ ದೊಡ್ಡದಿದೆ.  ಇವರಿಗೆ 18 ಸಹೋದರರು ಮತ್ತು 11 ಸಹೋದರಿಯರು ಇದ್ದಾರೆ. ಎಮಿರಾಟಿ ರಾಜಮನೆತನಕ್ಕೆ ಒಂಬತ್ತು ಮಕ್ಕಳು ಮತ್ತು 18 ಮೊಮ್ಮಕ್ಕಳು ಇದ್ದಾರೆ.  ಅಂದಹಾಗೆ ಈ ಕುಟುಂಬವು   ಅಬುಧಾಬಿಯಲ್ಲಿರುವ ಗಿಲ್ಡೆಡ್ ಕಸ್ರ್ ಅಲ್-ವತನ್ ಅರಮನೆಯಲ್ಲಿ ವಾಸಿಸುತ್ತಿದೆ. ಇದು ಯುಎಇಯಲ್ಲಿರುವ ಹಲವಾರು ಅರಮನೆಗಳಲ್ಲಿ ದೊಡ್ಡದ್ದಾಗಿದೆ. ಅಬುಧಾಬಿ ರಾಜನ ಕಿರಿಯ ಸಹೋದರ ಶೇಖ್ ಹಮದ್ ಬಿನ್ ಹಮ್ದಾನ್ ಅಲ್ ನಹ್ಯಾನ್ ಅವರು ಐದು ಬುಗಾಟಿ ವೇರಾನ್‌ಗಳು, ಲಂಬೋರ್ಘಿನಿ ರೆವೆನ್‌ಟನ್, ಮರ್ಸಿಡಿಸ್-ಬೆನ್ಜ್ CLK GTR, ಫೆರಾರಿ 599XX ಮತ್ತು Mc29XX ಜೊತೆಗೆ ವಿಶ್ವದ ಅತಿದೊಡ್ಡ SUV ಸೇರಿದಂತೆ 700 ಕ್ಕೂ ಹೆಚ್ಚು ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ. ಯುಎಇಯನ್ನು ಹೊರತುಪಡಿಸಿ ದುಬೈ ರಾಜಮನೆತನದವರು ಪ್ಯಾರಿಸ್ ಮತ್ತು ಲಂಡನ್ ಸೇರಿದಂತೆ ಜಗತ್ತಿನಾದ್ಯಂತ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಬ್ರಿಟನ್​ನ ಅತ್ಯಂತ ಐಷಾರಾಮಿ ನೆರೆಹೊರೆಯಲ್ಲಿ ಅವರ ಒಡೆತನದ ವಿಶಾಲವಾದ ಆಸ್ತಿಯನ್ನು ಕುಟುಂಬದ ಮಾಜಿ ಮುಖ್ಯಸ್ಥರ ಹೆಸರಿನಲ್ಲಿ ಕರೆಯಲಾಗುತ್ತಿದೆ. 

ಮುಂದಿನ ತಿಂಗಳು ರಶ್ಮಿಕಾ ಜತೆ ನಿಶ್ಚಿತಾರ್ಥ ನಿಜನಾ? ಕೊನೆಗೂ ಮೌನ ಮುರಿದ ವಿಜಯ್ ದೇವರಕೊಂಡ!

ಇನ್ನೂ ವಿಶೇಷತೆ ಏನು ಗೊತ್ತಾ? ಈ ಕುಟುಂಬವು ವಿಶ್ವದ ತೈಲ ನಿಕ್ಷೇಪಗಳ ಸುಮಾರು ಆರು ಪ್ರತಿಶತದಷ್ಟು ಮಾಲೀಕತ್ವವನ್ನು ಹೊಂದಿದೆ. ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ ಮತ್ತು ಗಾಯಕ ರಿಹಾನ್ನಾ ಅವರ ಸೌಂದರ್ಯ ಬ್ರ್ಯಾಂಡ್ ಫೆಂಟಿಯಿಂದ ಎಲೋನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ವರೆಗೆ ಹಲವಾರು ಪ್ರಸಿದ್ಧ ಕಂಪನಿಗಳಲ್ಲಿ ಪಾಲನ್ನು ಹೊಂದಿದೆ. ಇನ್ನು ಇವರ ಅರಮನೆಯ ವಿಶೇಷತೆ ಕುರಿತು ಹೇಳುವುದಾದರೆ, ಇದು  94 ಎಕರೆಗಳನ್ನು ಹೊಂದಿದೆ. ಇದು ಗುಮ್ಮಟದ ಅರಮನೆಯಾಗಿದ್ದು,  3 ಲಕ್ಷದ 50 ಸಾವಿರ ಹರಳುಗಳಿಂದ ಮಾಡಿದ ಗೊಂಚಲು ಮತ್ತು ಅಮೂಲ್ಯವಾದ ಐತಿಹಾಸಿಕ ಕಲಾಕೃತಿಗಳನ್ನು ಹೊಂದಿದೆ.  ಎಂಬಿಝಡ್‌ ಸಹೋದರ ತಹ್ನೌನ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಕುಟುಂಬದ ಮುಖ್ಯ ಹೂಡಿಕೆ ಕಂಪೆನಿಯ ಮುಖ್ಯಸ್ಥರಾಗಿದ್ದಾರೆ. ಇವರು ಕೂಡ ಈ ಕುಟುಂಬದ ಶ್ರೀಮಂತಿಕೆಯಲ್ಲಿ ಬಹುದೊಡ್ಡ ಪಾಲು ಹೊಂದಿದ್ದಾರೆ.  ಕಳೆದ ಐದು ವರ್ಷಗಳಲ್ಲಿ ಇವರ  ಆದಾಯ ಸುಮಾರು 28 ಸಾವಿರದ  ಪ್ರತಿಶತದಷ್ಟು ಹೆಚ್ಚಾಗಿದೆ ಎಂದರೆ ಅವರ ಆದಾಯದ ಮಿತಿಯನ್ನು ನೀವು ಗಮನಿಸಬಹುದು. ಇವರ ಒಡೆತನದ ಕಂಪೆನಿಯು ಪ್ರಸ್ತುತ $235 ಶತಕೋಟಿ ಮೌಲ್ಯದ್ದಾಗಿದೆ. ಕೃಷಿ, ಶಕ್ತಿ, ಮನರಂಜನೆ ಮತ್ತು ಕಡಲ ವ್ಯವಹಾರಗಳನ್ನು ಹೊಂದಿದೆ. ಇಷ್ಟೆಲ್ಲಾ ದೊಡ್ಡ ಕಂಪೆನಿ ಹೊಂದಿದ ಮೇಲೆ ಸಹಜವಾಗಿ ಉದ್ಯೋಗದ ಪ್ರಮಾಣವೂ ಹೆಚ್ಚಾಗಿರುತ್ತದೆ ಅಲ್ಲವೆ? ಹಾಗೆಯೇ ಇವರ ಕಂಪೆನಿ ಹತ್ತು ಸಾವಿರಕ್ಕೂ ಅಧಿಕ ಮಂದಿಗೆ  ಉದ್ಯೋಗ ನೀಡುತ್ತಿದೆ.  

ಇನ್ನು, ಇವರ ಆಸ್ತಿಯನ್ನು ಬ್ರಿಟಿಷ್ ರಾಜ ಕುಟುಂಬಕ್ಕೆ ಸಮನಾಗಿ ಹೋಲಿಸಲಾಗಿದೆ. 2015 ರಲ್ಲಿ ನ್ಯೂಯಾರ್ಕ್​ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಇದಕ್ಕೂ ಮುನ್ನ ಅಂದರೆ  2008 ರಲ್ಲಿ MBZ ನ ಅಬುಧಾಬಿ ಯುನೈಟೆಡ್ ಗ್ರೂಪ್ ಯುಕೆ ಫುಟ್ಬಾಲ್ ತಂಡ ಮ್ಯಾಂಚೆಸ್ಟರ್ ಸಿಟಿಯನ್ನು ₹ 2,122 ಕೋಟಿಗೆ ಖರೀದಿಸಿದೆ. ಮ್ಯಾಂಚೆಸ್ಟರ್ ಸಿಟಿ, ಮುಂಬೈ ಸಿಟಿ, ಮೆಲ್ಬೋರ್ನ್ ಸಿಟಿ ಮತ್ತು ನ್ಯೂಯಾರ್ಕ್ ಸಿಟಿ ಫುಟ್‌ಬಾಲ್ ಕ್ಲಬ್‌ಗಳನ್ನು ನಿರ್ವಹಿಸುವ ಸಿಟಿ ಫುಟ್‌ಬಾಲ್ ಗ್ರೂಪ್‌ನ ಶೇಕಡಾ 81 ರಷ್ಟು ಷೇರು ಕಂಪನಿಯು ಸಹ ಹೊಂದಿದೆ.

ಕೈಯಲ್ಲಿ ಒಂದು ರೂಪಾಯಿನೂ ಇರ್ಲಿಲ್ಲ, ಸಾಲ ತೀರಿಸಲು ತಾಳಿ ಕೊಟ್ಟಿದ್ರು... ಪತ್ನಿ ತ್ಯಾಗ ನೆನೆದು ಪ್ರೇಮ್​ ಕಣ್ಣೀರು
 

click me!