ಮಗನನ್ನು ಬೆನ್ನಮೇಲೆ ಎತ್ತಿಕೊಂಡೆ ಲೈವ್ ವರದಿ ಮಾಡಿದ ನಿರೂಪಕಿ

Published : Oct 13, 2018, 05:51 PM IST
ಮಗನನ್ನು ಬೆನ್ನಮೇಲೆ ಎತ್ತಿಕೊಂಡೆ ಲೈವ್ ವರದಿ ಮಾಡಿದ ನಿರೂಪಕಿ

ಸಾರಾಂಶ

ಅಮೆರಿಕಾದ ಖಾಸಗಿ ಸುದ್ದಿ ವಾಹಿನಿಯೊಂದರ ಹವಾಮಾನ ನಿರೂಪಕಿ ಸುಸೈ ಮಾರ್ಟಿನ್ ಎಂಬುವವರು ಇತ್ತೀಚಿಗೆ ಲೈವ್ ನಲ್ಲಿ ಹವಾಮಾನ ವರದಿ ಮಾಡುವಾಗ ಮಲಗಿರುವ ತನ್ನ ಮೂರು ವರ್ಷದ ಕಂದಮ್ಮನನ್ನು ಎತ್ತಿಕೊಂಡು ತಾಯಿ ಜವಾಬ್ದಾರಿಯ ಜೊತೆ ನಿರೂಪಕಿಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾಳೆ.

ಮಿನ್ನೆಸೊಟಾ[ಅ.13]: ಟಿವಿಯಲ್ಲಿ ನಿರೂಪಣೆ ಮಾಡುವಾಗ ಯಾವ ವಿಷಯದ ಕಡೆಗೂ ಗಮನ ನೀಡಬಾರದೆಂಬುದು ಗೊತ್ತಿರುವ ಸಂಗತಿ. ಮನಸ್ಸು ಬೇರೆ ಕಡೆ ವಾಲಿದರೂ ಪ್ರಸ್ತುತ ಪಡಿಸುವ ವಿಷಯ ಬದಲಾಗುವ ಸಾಧ್ಯತೆಯಿದ್ದು ವೀಕ್ಷಕರಿಂದ ನಗೆಪಾಟಲಿಗೀಡಬೇಕಾದ ಸಂಭವವಿರುತ್ತದೆ

ಆದರೆ ಇಲ್ಲೊಬ್ಬಳು ನಿರೂಪಣಾಗಾರ್ತಿ ಟಿವಿಯಲ್ಲಿ ವರದಿ ಮಂಡಿಸುವಾಗ ತನ್ನ ಪುಟ್ಟ ಕಂದಮ್ಮನನ್ನು ಬೆನ್ನ ಮೇಲೆ ಎತ್ತಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕಾದ ಖಾಸಗಿ ಸುದ್ದಿ ವಾಹಿನಿಯೊಂದರ ಹವಾಮಾನ ನಿರೂಪಕಿ ಸುಸೈ ಮಾರ್ಟಿನ್ ಎಂಬುವವರು ಇತ್ತೀಚಿಗೆ ಲೈವ್ ನಲ್ಲಿ ಹವಾಮಾನ ವರದಿ ಮಾಡುವಾಗ ಮಲಗಿರುವ ತನ್ನ ಮೂರು ವರ್ಷದ ಕಂದಮ್ಮನನ್ನು ಎತ್ತಿಕೊಂಡು ತಾಯಿ ಜವಾಬ್ದಾರಿಯ ಜೊತೆ ನಿರೂಪಕಿಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಈ ದೃಶ್ಯವನ್ನು ಈಗಾಗಲೇ ಫೇಸ್'ಬುಕ್ ನಲ್ಲಿ 16 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಪ್ರಸ್ತುತ ಸಮಯದಲ್ಲಿ ನನ್ನ ಮಗನಿಗೆ ತಾಯಿಯ ಪೋಷಣೆ ಅತೀ ಮುಖ್ಯವಾಗಿ ಬೇಕಾಗಿದ್ದು, ಇದು ಆತನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾಳೆ. ಕ್ಯಾಮರಾ ರೋಲ್ ಆದ ಸಮಯಲ್ಲಿ ನನ್ನ ಮಗ ಗದ್ದಲ ಮಾಡದಂತೆ ಜಾಗ್ರತೆ ವಹಿಸುತ್ತೇನೆ ಎನ್ನುತ್ತಾಳೆ. 

 

PREV
click me!

Recommended Stories

25 ವರ್ಷಗಳಲ್ಲಿ ಏನೇನ್‌ ಆಯ್ತು ಗೊತ್ತಾ? 21ನೇ ಶತಮಾನದ ಕಾಲು ಶತಮಾನಕ್ಕೆ ತೆರೆ, ಶರವೇಗದಲ್ಲಿ ಬದಲಾಗಿದೆ ಕಾಲ
ಯಶಸ್ವಿ ಜನರು ಪಾಲಿಸುವ ದಿನಚರಿ: 2026ರಲ್ಲಿ ನೀವು ಕೂಡ ಅನುಸರಿಸಬಹುದಾದ 10 ದಾರಿಗಳು