ಶಿಶ್ನದ ಮುಂದೊಗಲಿನ ಹಿಂದಿತ್ತು ಡ್ರಗ್ಸ್..

By Web Desk  |  First Published Nov 28, 2018, 5:52 PM IST

ಸೋಶಿಯಲ್ ಮೀಡಿಯಾದಲ್ಲಿ ಯಾವುದು ಯಾವ ಕಾರಣಕ್ಕೆ ಟ್ರೆಂಡ್ ಆಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಮಾದಕ ದ್ರವ್ಯ ಕಳ್ಳ ಸಾಗಾಟಗಾರನ ವಿಚಾರವೊಂದು ಸದ್ಯದ ಮಟ್ಟಿನ ವೈರಲ್ ಚೆಕ್...


ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಮಾಡುವವರು ಅದು ಯಾವ್ಯಾವ ರೀತಿಯಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡುತ್ತಾರೋ ಗೊತ್ತಿಲ್ಲ. ಆದರೆ ಇಲ್ಲೊಂದು ಪ್ರಕರಣ ಮಾತ್ರ ಒಮ್ಮೆ ನಮ್ಮನ್ನೆಲ್ಲ ಅಚ್ಚರಿಗೆ ದೂಡುತ್ತದೆ.

21 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದರು. ನಂತರ ವ್ಯಕ್ತಿಗೆ ಟ್ರಿಟ್‌ಮೆಂಟ್ ನೀಡಿದಾಗ ಆತ ಕಿಸೆಯಲ್ಲಿದ್ದ ಕೋಕೆನ್ ಪಾಕೆಟ್‌ಗಳನ್ನು ಪೊಲೀಸರಿಗೆ ನೀಡಿದನು. ಆದರೆ ನಂತರ ತನ್ನ ಶಿಶ್ನದ ಅಡಿ ಅಡಗಿಸಿ ಇಟ್ಟಿದ್ದ ಕೋಕೆನ್ ಪ್ಯಾಕೆಟ್‌ ತೆಗೆದು ನೀಡಿದ್ದು ಪೊಲೀಸರನ್ನು ದಂಗು ಬಡಿಸಿತ್ತು.

Latest Videos

undefined

ಯೋನಿಯೊಳಗೆ 80 ಗ್ರ್ಯಾಂ ಡ್ರಗ್ಸ್ ಬಚ್ಚಿಟ್ಟಿದ್ದು ಗೊತ್ತಾಗಿದ್ದೇಗೆ?

ಪೊಲೀಸರ ಟಾರ್ಚರ್‌ಗೆ ಬಗ್ಗಿದ ವ್ಯಕ್ತಿ ತನ್ನ ಪ್ಯಾಂಟ್‌ ತೆಗೆದು ನಂತರ ಶಿಶ್ನದ ಮುಂದೊಗಲನ್ನು ಹಿಂದಕ್ಕೆ ಸರಿಸಿ ಅಲ್ಲಿಂದ ಕೋಕೆನ್ ಪ್ಯಾಕೆಟ್ ತೆಗೆದು ನೀಡಿದನು. ಈ ಮಾಸ್ಟರ್ ಮೈಂಡ್‌ನ ಹೆಸರು ಜೇಮ್ಗಸ್ ಮಾಸನ್.. ಈತ  ಮಾದಕ ದ್ರವ್ಯ ಪ್ರಕರಣದಲ್ಲಿ ಅನೇಕ ಸಾರಿ ಸಿಕ್ಕಿಬಿದ್ದಿದ್ದು ಒಂದೊಂದು ಸಾರಿ ಒಂದೊಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.

click me!