ಗಂಡಸರು ಕಿವಿಯೋಲೆ ಧರಿಸಿದರೆ ಹೆಚ್ಚುತ್ತೆ ವೀರ್ಯ ಪ್ರಮಾಣ

By Web DeskFirst Published Sep 3, 2018, 5:13 PM IST
Highlights

ಸೌಂದರ್ಯ ಹೆಚ್ಚಲು ಹೆಣ್ಣು ಧರಿಸುವ ಆಭರಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಆಯಾ ಜಾಗದಲ್ಲಿ ಧರಿಸುವ ಇವು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತವೆ.

ಮೂಗುತಿ ಹಾಗು ಕಿವಿಯೋಲೆ ದೇಹದ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಅಲ್ಲದೇ ವೇದ ಶಾಸ್ತ್ರಗಳ ಪ್ರಕಾರ ಅದರಿಂದ ಹೆಣ್ಣಿನ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರಿ, ಹಲವು ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು. 

ಆಭರಣ ತೊಡುವುದು ಕೆಲವರಿಗೆ ಸಂಪ್ರದಾಯವಾದರೆ, ಮತ್ತೆ ಕೆಲವರಿಗೆ ಇದೊಂದು ಫ್ಯಾಷನ್ ಸ್ಟೇಟ್‌ಮೆಂಟ್. ಮಕ್ಕಳು ಕಿವಿ ಓಲೆ ಧರಿಸುವುದರಿಂದ ಅವರ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗುವುದಲ್ಲದೇ, ಬೆಳವಣಿಗೆಗೆ ಆಗೋ ತೊಂದರೆಯನ್ನೂ ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಅಷ್ಟಕ್ಕೂ ಇದರ ಪ್ರಯೋಜನವೇನು?

  • ಸಂತಾನೋತ್ಪತ್ತಿಗೆ ಸಹಕರಿಸುತ್ತದೆ. ಎಡ ಭಾಗದಲ್ಲಿ ಮೂಗುತಿ ಧರಿಸುವುದರಿಂದ ಹೆಣ್ಣು ಜನ್ಮ ನೀಡುವ ಸಮಯದಲ್ಲಿ ಅಗತ್ಯವಾದ ಬೇಕಾದ ಮಾನಸಿಕ ಹಾಗು ದೈಹಿಕ ಸ್ಥೈರ್ಯ ಹೆಚ್ಚುತ್ತದೆ.
  • ಮಗುವಿಗೆ ಜನ್ಮ ನೀಡುವಾಗ ಯಾವುದೇ ನೋವಾಗದಂತೆ ತಡೆಯುತ್ತದೆ. 
  • ಮುಟ್ಟಿನ ಹೊಟ್ಟೆ ನೋವು ಅಥವಾ ಮೈ-ಕೈ ನೋವು ಬಾರದಂತೆಯೂ ತಡೆಯಬಲ್ಲದು.
  • ಕಿವಿ ಓಲೆ ದೇಹದಲ್ಲಿ ರಕ್ತ ಸಂಚಾರ ಸುಗಮ ಮಾಡಲು ಸಹಾಯ ಮಾಡುತ್ತದೆ. ರಕ್ತ ಸಂಚಾರ ಸರಿಯಾದಲ್ಲಿ ಜ್ಞಾಪಕ ಶಕ್ತಿ ಹೆಚ್ಚುತ್ತದೆ. 
  • ರೋಗ ನೀರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.
  • ಗಂಡು ಮಕ್ಕಳು ಓಲೆ ಧರಿಸುವುದರಿಂದ ಮೀರ್ಯ ಪ್ರಮಾಣವೂ ಹೆಚ್ಚುತ್ತದೆ.
  • ಆಕ್ಯುಪಂಕ್ಚರ್ ಚಿಕಿತ್ಸಾ ಪದ್ಧತಿಯಂತೆ ಕಿವಿ ಮಧ್ಯ ಭಾಗದೊಂದಿಗೆ ಕಣ್ಣಿಗೆ ನೇರ ಸಂಪರ್ಕವಿರುತ್ತದೆ. ಆದುದರಿಂದ ಕಣ್ಣಿನ ದೃಷ್ಟಿ ಸರಿಯಾಗಿರಲು ಮಕ್ಕಳಿಗೆ ಕಿವಿ ಚುಚ್ಚಿಸಿದರೊಳಿತು.
click me!