ಸಿಗರೇಟ್ ಸೇದಿದ್ರೆ ದೃಷ್ಟಿ ಕಳ್ಕೋಬೇಕಾಗುತ್ತೆ!

By Web DeskFirst Published Sep 3, 2018, 4:12 PM IST
Highlights

ಮನುಷ್ಯನಿಗೆ ಪ್ರತಿಯೊಂದೂ ಅಂಗಾಗವೂ ಮುಖ್ಯ. ಹೊರ ಜಗತ್ತಿನೊಂದಿಗೆ ನಮ್ಮನ್ನು ಸಂಪರ್ಕಿಸುವ ಹಾಗೂ ಮುಖದ ಸೌಂದರ್ಯವನ್ನು ಹೆಚ್ಚಿಸುವ ಕಣ್ಣಿನ ಆರೋಗ್ಯದೆಡೆಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ. ಅಷ್ಟಕ್ಕೂ ದೃಷ್ಟಿ ದೋಷಕ್ಕೆ ಸಾಮಾನ್ಯ ಕಾರಣಗಳೇನು?

ಮನುಷ್ಯ ಬಹುತೇಕ ಕೆಲಸಗಳನ್ನು ಕಣ್ಣಿನ ಸಹಾಯದಿಂದಲೇ ಮಾಡುತ್ತಾನೆ. ಪ್ರತಿಯೊಂದೂ ಅಂಗಕ್ಕೂ ತನ್ನದೇ ವೈಶಿಷ್ಟ್ಯವಿದ್ದರೂ, ಕಣ್ಣು ಎಲ್ಲವನ್ನೂ ಮೀರಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಆದರೆ, ಪೋಷಕಾಂಶಗಳ ಕೊರತೆ ಸೇರಿ, ವಿವಿಧ ಕಾರಣಗಳಿಂದ ದೃಷ್ಟಿ ದೋಷ ಅನೇಕರನ್ನು ಕಾಡುತ್ತದೆ. ಅದೂ ಅಲ್ಲದೇ ಕಣ್ಣಿನ ಆರೋಗ್ಯವನ್ನು ನಿರ್ಲಕ್ಷಿಸುವುದೇ ಹೆಚ್ಚು. ಅಷ್ಟಕ್ಕೂ ದೃಷ್ಟಿ ದೋಷಕ್ಕೇನು ಕಾರಣ?

ಧೂಮಪಾನ

ಧೂಮಪಾನದ ಹೊಗೆ, ಕಣ್ಣನ್ನು ಒಣಗುವಂತೆ ಮಾಡುತ್ತದೆ. ಇದು ನರಗಳನ್ನು ಹಾನಿಗೊಳಿಸುತ್ತದೆ.

ಸನ್ ಗ್ಲಾಸ್ ಧರಿಸದೆ ಇರುವುದು

ಬಿಸಿಲಿನಲ್ಲಿ ಹೆಚ್ಚಾಗಿ ಓಡಾಡುವುದರಿಂದ ಸೂರ್ಯನಲ್ಲಿರೋ ಯುವಿ ಕಿರಣಗಳು, ಕಣ್ಣಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಕಣ್ಣನ್ನು ಕೆಂಪು ಮಾಡುವುದಲ್ಲದೇ, ಸುಮ್ಮನೆ ನೀರು ಬರಿಸುತ್ತದೆ. ಇದರಿಂದ ಸರಿಯಾದ ಯುವಿ ಕಿರಣಗಳನ್ನು ನಿಯಂತ್ರಿಸುವಂಥ ಸನ್ ಗ್ಲಾಸ್ ಧರಿಸಬೇಕು. 

ಎಲೆಕ್ಟ್ರಾನಿಕ್ ಡಿವೈಸ್ ಬಳಕೆ

ಕತ್ತಲಲ್ಲಿ ದೇಹ ಹೆಚ್ಚು ವಿಶ್ರಾಂತಿ ಬಯಸುತ್ತದೆ. ಆ ಸಂದರ್ಭಗಳಲ್ಲಿ ಯಾವುದೇ ಎಲೆಕ್ಟ್ರಾನಿಕ್ ಯಂತ್ರಗಳನ್ನು ಬಳಸಬಾರದು. ಮೊಬೈಲ್ ಸೃಷ್ಟಿಸುವ ನೀಲಿ ಕಿರಣಗಳು ದೃಷ್ಟಿಯನ್ನು ಹಾಳು ಮಾಡುತ್ತದೆ. ಇದರಿಂದ ನಿದ್ದೆಯೂ ಕಡಿಮೆಯಾಗಿ, ಕಣ್ಣು ಕುರುಡಾಗೋ ಸಾಧ್ಯತೆಗಳಿರುತ್ತವೆ. 

ಅಸಮರ್ಪಕ ತರಕಾರಿ ಸೇವನೆ

ದೇಹದ ಅಗತ್ಯಕ್ಕೆ ತಕ್ಕಂತೆ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಬೇಕು. ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಅಗತ್ಯವಿರುವ ವಿಟಮಿನ್ ಸಿ, ಇ, ಎ ಮತ್ತು ಜಿಂಕ್‌ಯಿಂದ ಕಣ್ಣಿನ ದೃಷ್ಟಿ ಗಟ್ಟಿ ಮಾಡುತ್ತದೆ. 

ಕಣ್ಣು ಉಜ್ಜಿಕೊಳ್ಳುವುದು

ಧೂಳು ಕಣ್ಣಿಗೆ ಹೋದ ಕೂಡಲೇ ಉಜ್ಜಿ ಕೊಳ್ಳುವುದು ಸಹಜ. ಆದರೆ, ಇದು ಕಾರ್ನಿಯಾವನ್ನು ಘಾಸಿಗೊಳಿಸುತ್ತದೆ. ದೃಷ್ಟಿ ಮಂದವೂ ಆಗಬಹುದು. 

ಲೆನ್ಸ್ ತೊಳೆಯುವುದು ಅಥವಾ ತೆಗೆಯುವುದು

ಲೆನ್ಸ್ ತೆಗೆದ ನಂತರ ಸರಿಯಾದ ಸೊಲ್ಯುಷನ್‌ನಲ್ಲಿ ಇಡಬೇಕು. ಅಲ್ಲದೇ ಲೆನ್ಸ್ ಧರಿಸಿ, ಮಲಗುವಂತೆಯೂ ಇಲ್ಲ. ಕಣ್ಣು ಅದರ ಆಕಾರ ಕಳೆದುಕೊಂಡು, ಒಣಗಕಾಣಿಸಿಕೊಳ್ಳುತ್ತದೆ. 

ಸರಿಯಾದ ಕ್ರಮದಲ್ಲಿ ಮೇಕಪ್

ಕಣ್ಣಿನ ಕಾಡಿಗೆ, ಐಲೈನರ್ ಮತ್ತು ಮಸ್ಕೆರಾಗಳನ್ನು ಹಚ್ಚಿಕೊಂಡರೆ, ಉಳಿಯದಂತೆ ತೊಳೆದುಕೊಂಡು ಮಲಗಿ. ಇಲ್ಲವಾದರೆ ಅದರಲ್ಲಿರುವ ಕೆಮಿಕಲ್ ಸೋಂಕನ್ನುಂಟು ಮಾಡುತ್ತದೆ.

click me!