ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರೋ, ಸೆನ್ಸಿಟಿವ್ ಹೆಣ್ಣೆಂದರೆ ಗಂಡಿಗೆ ಇಷ್ಟ!

Published : Jul 22, 2018, 03:53 PM IST
ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರೋ, ಸೆನ್ಸಿಟಿವ್ ಹೆಣ್ಣೆಂದರೆ ಗಂಡಿಗೆ ಇಷ್ಟ!

ಸಾರಾಂಶ

ಪಾಶ್ ಆಗಿರೋ ಹುಡುಗೀರಂದ್ರೆ ಹುಡುಗರಿಗೆ ಇಷ್ಟವಾಗಬಹುದು ಎಂಬ ಮನಃಸ್ಥಿತಿ ಬಹುತೇಕರಲ್ಲಿದೆ. ಆದರೆ, ತುಂಬಾ ಟಿಪಕಲ್ ಆಗಿ ಡ್ರೆಸ್ ಮಾಡಿಕೊಳ್ಳುವ, ಟ್ರೆಡಿಷನರ್ ಹುಡುಗೀರು ಎಂದರೆ ಹುಡುಗರು ಪ್ರಾಣ ಬಿಡ್ತಾರೆ. ಎಂಥ ಹುಡುಗೀರು ಬೇಕೆಂದು ಬಯಸುತ್ತಾರೆ ಹುಡುಗರು?

ಹುಡುಗಿ ಸ್ಟೈಲ್ ಆಗಿದ್ರೆ ಸಾಕು, ಹುಡುಗರು ಲವ್ ಮಾಡಿ ಬಿಡ್ತಾರೆ ಎಂದು ಹುಡುಗಿಯರು ತಿಳಿದುಕೊಂಡಿದ್ದರೆ ಅದು ತಪ್ಪು. ಯಾಕೆಂದರೆ ಹುಡುಗರು ಸುಮ್ ಸುಮ್ನೆ ಲವ್ ಮಾಡಲ್ಲ. ತಮ್ಮ ಹುಡುಗಿಯ ಗುಣ, ನಡತೆ ಕಡೆಗೂ ಅವರು ಗಮನ ಹರಿಸುತ್ತಾರೆ. ಅಂದ್ರೆ ಅವರಿಗೂ ತಮ್ಮ ಗರ್ಲ್ ಫ್ರೆಂಡ್ ಹೀಗಿರಬೇಕು ಎಂಬ ಆಸೆ ಇರುತ್ತದೆ. ಈ ಗುಣಗಳು ಹುಡುಗಿಯಲ್ಲಿದ್ದರೆ, ಆಕೆ ಪರ್ಫೆಕ್ಟ್ ಗರ್ಲ್ ಫ್ರೆಂಡ್ ಆಗ್ತಾಳೆ ಅಂತಾರೆ ಹುಡುಗರು... 
- ಫೈನಾನ್ಸಿಯಲ್ ವಿಚಾರ ಆಗಿರಬಹುದು ಅಥವಾ ಭಾವನಾತ್ಮಕ ವಿಚಾರ ಆಗಿರಲಿ ಹುಡುಗಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವವಳು ಆಗಿರಬೇಕು. ಎಲ್ಲದಕ್ಕೂ ಹುಡುಗನ ಮೇಲೆ ಡಿಪೆಂಡ್ ಆಗೋದು ಹುಡುಗರಿಗೆ ಇಷ್ಟವಾಗೋಲ್ಲ. - ಸಣ್ಣ ಪುಟ್ಟ ವಿಷಯಕ್ಕೂ ಓವರ್ ಆಗಿ ರಿಯಾಕ್ಟ್ ಮಾಡುವ ಹುಡುಗಿಯರು ಸುತರಾಂ ಇಷ್ಟವಾಗಲ್ಲ. ಜೊತೆಗೆ ಸುಮ್ನೆ ಜಗಳ ಕಾಯುವ ಹುಡುಗಿಯಂತೂ ಆಗೋದೇ ಇಲ್ಲ. - ಹುಡುಗರಿಗೆ ಸೈಲೆಂಟ್ ಆಗಿರುವ ಟ್ರಡಿಷನಲ್ ಹುಡುಗಿಯರು ಇಷ್ಟವಾಗುತ್ತಾರೆ. ಆದರೆ ತುಂಬಾ ಸಂಪ್ರದಾಯಸ್ಥೆ ಆದ್ರೂ, ನೋ ಎನ್ನುತ್ತಾರೆ. - ತಮ್ಮ ಜೀವನದಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಯೋಚಿಸಿ ಮುಂದಡಿ ಇಡುವಂಥ ಫುಲ್ ಸ್ಮಾರ್ಟ್ ಗರ್ಲ್ ಎಂದ್ರೆ ಹುಡುಗರಿಗೆ ಅಚ್ಚುಮೆಚ್ಚು.-ಹುಡುಗಿಯರು ಸದಾ ಫೋನ್‌ನಲ್ಲಿರುತ್ತಾರೆ. ಆದರೆ, ಇದು ಹುಡುಗರಿಗೆ ಇಷ್ಟವಾಗೋಲ್ಲ. ಇದನ್ನು ಅರ್ಥ ಮಾಡಿಕೊಳ್ಳೋ ಹುಡುಗಿ ಬೇಕು ಅವರಿಗೆ. - ಪ್ರೀತಿ ಎಷ್ಟು ಮುಖ್ಯವೋ ಅದೇ ರೀತಿ ಸೆಕ್ಸುವಲ್‌ ಹೊಂದಾಣಿಕೆಯೂ ಮುಖ್ಯ. ಆಕೆ ಸೆಕ್ಸುಯಲಿ ಆ್ಯಕ್ಟಿವ್‌ ಹಾಗೂ ಎಕ್ಸೈಟಿಂಗ್‌ ಆಗಿರಬೇಕೆಂದು ಅವರು ಬಯಸುತ್ತಾರೆ.- ಉತ್ತಮ ಸ್ನೇಹಿತೆಯಾಗಿರಬೇಕು. ಅದೇ ರೀತಿ ತನ್ನ ಸ್ನೇಹಿತರನ್ನು ಗೌರವಿಸಬೇಕು ಹಾಗು ಅವರ ಜೊತೆಯೂ ಉತ್ತಮ ಬಾಂಧವ್ಯ ಹೊಂದಿರಬೇಕು ಎಂದು ಇಷ್ಟಪಡುತ್ತಾರೆ. - ಎಂಧ ಸಂದರ್ಭವೇ ಎದುರಾದರೂ, ಜತೆಯಲ್ಲಿ ನಿಲ್ಲುವ ಹೆಣ್ಣೆಂದರೆ, ಗಂಡಿಗೆ ಸಿಕ್ಕಾಪಟ್ಟೆ ಇಷ್ಟ. 

PREV
click me!

Recommended Stories

ಮದುವೆ ಔಟ್‌ಡೇಟೆಡ್‌ ಆಗೋಯ್ತಾ!
ಒಟ್ರಾವರ್ಟ್‌ ಅನ್ನೋ ಹೊಸ ವ್ಯಕ್ತಿತ್ವ ಮಾದರಿ, ನೀವಿದ್ದೀರ ಇದ್ರಲ್ಲಿ?