ಬಿಡಾಡಿ ದನಗಳ ದಾಳಿಗೆ ಮಹಿಳೆ ಸಾವು

By Sathish Kumar KH  |  First Published Nov 21, 2022, 8:20 PM IST

ರಾಜ್ಯದಲ್ಲಿ ಅಭಿವೃದ್ಧಿ ಕಾಣದ ನಗರವಾದ ಕೊಪ್ಪಳದ  30 ನೇ ವಾರ್ಡಾದ ದೇವರಾಜ್ ಅರಸ್ ಕಾಲೋನಿಯಲ್ಲಿ ಬಿಡಾಡಿ ದನಕ್ಕೆ ಮಹಿಳೆ ಬಲಿಯಾಗಿದ್ದಾಳೆ.


ಕೊಪ್ಪಳ (ನ.21): ನಗರಸಭೆ ಮುಂದೆ ಪ್ರತಿಭಟನೆ ನಡೆಯೋದು ಸಾಮಾನ್ಯವಾಗಿರುತ್ತದೆ. ‌ಆದರೆ ಇಂದು ನಗರಸಭೆಯ ಮುಂದೆ ಶವವೊಂದಿಗೆ ಪ್ರತಿಭಟನೆ ನಡೆಯಿತು. ಅಷ್ಟಕ್ಕೂ ಯಾವ ಕಾರಣಕ್ಕಾಗಿ ಯಾವ ನಗರಸಭೆ ಮುಂದೆ ಶವದೊಂದಿಗೆ ಪ್ರತಿಭಟನೆ ನಡೆದದ್ದು ಅಂತೀರಾ? ಹಾಗಾದ್ರೆ ಈ ರಿಪೋರ್ಟ್ ನೋಡಿ.

ಕೊಪ್ಪಳ ಎಂದ ತಕ್ಷಣವೇ  ನಮಗೆ ನೆನಪಿಗೆ ಬರುವುದು ಅಭಿವೃದ್ದಿ ಕಾಣದ ಜಿಲ್ಲೆ ಹಾಗೂ ನಗರವೆಂದು. ಜಿಲ್ಲೆಯಾಗಿ 25 ವರ್ಷಗಳು ಕಳೆದರೂ ಸಹ ಇನ್ನೂ ಸಹ ಕೊಪ್ಪಳ ಜಿಲ್ಲೆ ಸೇರಿದಂತೆ ನಗರ ಇನ್ನೂ ಅಭಿವೃದ್ಧಿಯಾಗಿಲ್ಲ. ಇಂತಹ ಅಭಿವೃದ್ಧಿ ಕಾಣದ ನಗರವಾದ ಕೊಪ್ಪಳದ (Koppala) 30 ನೇ ವಾರ್ಡಾದ ದೇವರಾಜ್ ಅರಸ್ (devaraj aras) ಕಾಲೋನಿಯಲ್ಲಿ ಬಿಡಾಡಿ ದನಕ್ಕೆ ಮಹಿಳೆ ಬಲಿಯಾಗಿದ್ದಾಳೆ. ನಿನ್ನೆ ರಾತ್ರಿ ದೇವರಾಜ್ ಅರಸ್ ಕಾಲೋನಿಯಲ್ಲಿ ಬಿಡಾಡಿ ದನಕ್ಕೆ (stray cattle) ರಮೀಜಾ ಬೇಗಂ (38) ಎನ್ನುವ ಮಹಿಳೆ ಬಿಡಾಡಿ ದನಕ್ಕೆ ಬಲಿಯಾಗಿದ್ದಾಳೆ.

Tap to resize

Latest Videos

undefined

ರಸ್ತೆಗಳಲ್ಲೇ ಜಾನುವಾರು ಠಿಕಾಣಿ; ವಾಹನ ಸವಾರರು ಪರದಾಟ

ರಮೀಜಾ ಬೇಗ್ಂ ಹೊಟೇಲ್ ಕೆಲಸಕ್ಕೆ ಹೋಗುತ್ತಾಳೆ.‌ ಎಂದಿನಂತೆ ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ದೇವರಾಜ ಅರಸ್ ಕಾಲೋನಿಯ ಬಳಿ ಎರಡು ಬಿಡಾಡಿ ದನಗಳು ಕಾದಾಡುತ್ತಾ ಬಂದು ರಮೀಜಾ ಅವರ ಹೊಟ್ಟೆಗೆ ಚುಚ್ಚಿವೆ. ಬಳಿಕ ತೀವ್ರ ರಕ್ತಸ್ರಾವದಿಂದ (Bleeding) ಬಳಲುತ್ತಿದ್ದ ರಮೀಜಾ ಅವರನ್ನು ಜಿಲ್ಲಾ ಆಸ್ಪತ್ರೆಗೆ (Hospital) ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಪರಿಹಾರಕ್ಕಾಗಿ ಶವವಿಟ್ಟು ಪ್ರತಿಭಟನೆ: ಬೀಡಾಡಿ ದನಕ್ಕೆ ಬಲಿಯಾಗಿರುವ ರಮೀಜಾ ಬೇಗ್ಂ ಸಾವಿಗೆ ನಗರಸಭೆ (City Council) ಅಧಿಕಾರಿಗಳೇ ಕಾರಣವೆಂದು ಸ್ಥಳೀಯರ ಆರೋಪವಾಗಿದೆ. ಈ ಹಿನ್ನಲೆಯಲ್ಲಿ ಮೃತ ರಮೀಜಾ ಬೇಗಂ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ (compensation) ನೀಡಬೇಕೆನ್ನೆವುದು ಸ್ಥಳೀಯರ ಒತ್ತಾಯವಾಗಿದೆ. ಈ ಹಿನ್ನಲೆಯಲ್ಲಿ ಒಂದು ಗಂಟೆಗಳ ಕಾಲ ಸ್ಥಳೀಯರು ರಮೀಜಾ ಶವವನ್ನು (Dead body) ನಗರಸಭೆ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು. ಈ ವೇಳೆ ನಗರಸಭೆ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ಸಹ ನಡೆಯಿತು.

ಇನ್ನು ನಗರದಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚಳವಾಗಿದ್ದರೂ ಸಹ ನಗರಸಭೆ ಅಧಿಕಾರಿಗಳು ಮಾತ್ರ ಅವುಗಳ ನಿಯಂತ್ರಣಕ್ಕೆ (Control) ಮುಂದಾಗಿಲ್ಲ. ಕೇವಲ ಕಾಟಾಚಾರಾಕ್ಕೆ ಆಗೋಮ್ಮೆ, ಈಗೋಮ್ಮೆ ಹಿಡಿಯುವ ಕೆಲಸ ಮಾಡುತ್ತಾರೆ. ಇನ್ನಾದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತು ಬಿಡಾಡಿ ದನಗಳ‌ ನಿಯಂತ್ರಣಕ್ಕೆ ಮುಂದಾಗಬೇಕಿದೆ. ಅಂದಾಗ ಮಾತ್ರ ಅಮಾಯಕರ ಪ್ರಾಣ ಉಳಿಯಲು ಸಾಧ್ಯ.

click me!