ಕೆರೆಯ ತಿರುವಿನಲ್ಲಿ ರಕ್ಷಣೆಯ ಯಾವುದೇ ತಡೆಗೋಡೆ ನಿರ್ಮಿಸಿಲ್ಲ|ಪ್ರತಿ ದಿನ ಒಂದಲ್ಲ ಒಂದು ರೀತಿಯ ಅವಘಡಗಳು ತಪ್ಪಿದಲ್ಲ| ಮಕ್ಕಳಿ, ವಜ್ರಬಂಡಿ ಗ್ರಾಮಗಳಿಗೆ ಹೋಗಬೇಕೆಂದರೆ ಕೆರೆಯ ಎರಡು ಕಡೆಯು ಯಾವುದೇ ತಡೆಗೋಡೆ ಇಲ್ಲ|
ಯಲಬುರ್ಗಾ[ನ.10]: ತಾಲೂಕಿನ ಹುಲೆಗುಡ್ಡ ಗ್ರಾಮದಿಂದ ಹಾದು ವಜ್ರಬಂಡಿ ಹೋಗುವ ರಸ್ತೆಯು ಬಾರಿ ಅಪಾಯದ ತಿರುವುಗಳನ್ನೊಂಡಿದೆ. ಈ ಗ್ರಾಮದಿಂದ ವಜ್ರಬಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಅಪಾಯಕಾರಿಯಾಗಿದ್ದು, ಕೆರೆಯ ತಿರುವಿನಲ್ಲಿ ರಕ್ಷಣೆಯ ಯಾವುದೇ ತಡೆಗೋಡೆ ನಿರ್ಮಿಸಿಲ್ಲ, ಅಲ್ಲದೆ ಅಪಾಯದ ಸೂಚನಾ ಫಲಕಗಳು ಇಲ್ಲದಿರುವುದರಿಂದ ಪ್ರಯಾಣಿಕರು ತಮ್ಮ ಜೀವನನ್ನೇ ಗಟ್ಟಿ ಹಿಡಿದುಕೊಂಡು ಪ್ರಯಾಣಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿ ದಿನ ಒಂದಲ್ಲ ಒಂದು ರೀತಿಯ ಅವಘಡಗಳು ತಪ್ಪಿದಲ್ಲ, ಮಕ್ಕಳಿ, ವಜ್ರಬಂಡಿ ಗ್ರಾಮಗಳಿಗೆ ಹೋಗಬೇಕೆಂದರೆ ಕೆರೆಯ ಎರಡು ಕಡೆಯು ಯಾವುದೇ ತಡೆಗೋಡೆ ಇಲ್ಲ. ಈ ರಸ್ತೆ ಕೆಳಭಾಗದಲ್ಲಿ ವಿಶಾಲವಾದ ಕೆರೆ ಇದ್ದು, ಈ ಕೆರೆಗೆ ಸೂಕ್ತ ತಡೆಗೋಡೆವಿಲ್ಲದ ಕಾರಣ ಹಲವು ವಾಹನಗಳು ನಿಯಂತ್ರಣ ತಪ್ಪಿ ಕೆರೆಗೆ ಉರುಳಿರುವ ಸಾಕಷ್ಟು ಉದಾಹರಣೆಗಳಿವೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಬಗ್ಗೆ ಗಮನಿಸುತ್ತಿರುವ ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯಾಗಲಿ, ತಾಲೂಕಾಡಳಿತವಾಗಲಿ ಕೆರೆಗೆ ತಡೆಗೋಡೆ ನಿರ್ಮಿಸಲು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಾರ್ಗದಲ್ಲಿ ಸರ್ಕಾರಿ ಬಸ್‌ಗಳು, ಟ್ರ್ಯಾಕ್ಸ್, ಟಂಟಂ, ಟಾಟಾ ಎಸಿ ಸೇರಿದಂತೆ ಅನೇಕ ವಾಹನಗಳು ಸಂಚರಿಸುತ್ತವೆ ಚಾಲಕನ ನಿಯಂತ್ರಣ ಸ್ವಲ್ಪಆಯಾ ತಪ್ಪಿದಲ್ಲಿ ಕೆರೆಗೆ ಉರುಳಿ ಬೀಳುವುದರಲ್ಲಿಅನುಮಾನವಿಲ್ಲ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳಾಗಲಿ, ಚುನಾಯಿತ ಜನಪ್ರತಿನಿಧಿಗಳಾಗಲಿ ಈ ರಸ್ತೆ ಹತ್ತಿರ ಇರುವ ಕೆರೆಗೆ ಅಗತ್ಯ ರಕ್ಷಣಾತ್ಮಕ ಕ್ರಮಗಳನ್ನು ತಗೆದುಕೊಳ್ಳಬೇಕು ಹಾಗೂ ಸೂಕ್ತ ತಡೆಗೋಡೆಗಳನ್ನು ನಿರ್ಮಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.