ಬಿಜೆಪಿ ಒಂದು ಡ್ರಾಮ ಕಂಪನಿ ಇದ್ದಂಗೆ ಎಂದ ಮಾಜಿ ಸಚಿವ ಶಿವರಾಜ್ ತಂಗಡಗಿ| ಶಕುನಿ ಪಾತ್ರವನ್ನು ಈಶ್ವರಪ್ಪ ಚೆನ್ನಾಗಿ ನಿಭಾಯಿಸುತ್ತಾರೆ| ಅನರ್ಹರಿಂದ ಬಿಜೆಪಿಯವರು ಮಂತ್ರಿ ಆಗಿ, ಅನರ್ಹರನ್ನು ಬೀದಿಗೆ ತಂದು ನಿಲ್ಲಿಸಿ, ಬಿಜೆಪಿಯವರು ಸುಖ ಅನುಭವಿಸುತ್ತಿದ್ದಾರೆ|
ಕೊಪ್ಪಳ[ನ.8]: ಬಿಜೆಪಿ ಒಂದು ಡ್ರಾಮ ಕಂಪನಿ ಇದ್ದಂಗೆ, ಇದನ್ನ ಮಾಡಿ ಅಂತಾ ಕೇಂದ್ರ ಸರ್ಕಾರ ಹೇಳಿಕೊಡುತ್ತೆ. ಅದರಲ್ಲಿ ಶಕುನಿ ಪಾತ್ರವನ್ನು ಸಚಿವ ಕೆ.ಎಸ್. ಈಶ್ವರಪ್ಪ ಅವರು ಚೆನ್ನಾಗಿ ನಿಭಾಯಿಸುತ್ತಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಜಿಲ್ಲೆಯ ಕಾರಟಗಿಯಲ್ಲಿ ನಡೆದ ಸದ್ಭಾವನಾ ಯಾತ್ರೆ ಬಳಿಕ ಮಾತನಾಡಿದ ಅವರು, ಅನರ್ಹರಿಂದ ಬಿಜೆಪಿಯವರು ಮಂತ್ರಿ ಆದ್ರು ಅನರ್ಹರನ್ನು ಬೀದಿಗೆ ತಂದು ನಿಲ್ಲಿಸಿ, ಬಿಜೆಪಿಯವರು ಸುಖ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಿ. ಎಸ್. ಯಡಿಯೂರಪ್ಪ ಅವರನ್ನ ಸಿಎಂ ಆಗಿ ನೋಡಲು, ಆರ್.ಎಸ್.ಎಸ್ ಗೆ ಇಷ್ಟವಿಲ್ಲ. ಬಿಜೆಪಿಯ ಕೆಲ ಮುಖಂಡರೇ ಸಿಎಂ ಕೆಳಗಿಳಿಸಲು ಪ್ರಯತ್ನ ಮಾಡ್ತಿದ್ದಾರೆ. ಬರೀ ಬಿಜೆಪಿ ಶಾಸಕರು, ಸಚಿವರು ಪೋಸು ಕೊಡ್ತಾ ಇದ್ದಾರೆ. ಯಡಿಯೂರಪ್ಪ ಸರ್ಕಾರ ಬಹಳ ದಿನ ಉಳಿಯಲ್ಲ. ಜೆಡಿಎಸ್ ನವರಿಗೆ ತತ್ವ ಇಲ್ಲ, ಸಿದ್ದಾಂತ ಇಲ್ಲ, ಜೆಡಿಎಸ್ ಹಾಗೂ ಸ್ಥಳೀಯ ಶಾಸಕರ ಬಗ್ಗೆ ಮಾತನಾಡೋದು ಟೈಮ್ ವೇಸ್ಟ್ ಎಂದು ತಿಳಿಸಿದ್ದಾರೆ.