Koppala ಮುಳ್ಳಿನ ಮೇಲೆ ಭಕ್ತಿಯ ಪರಾಕಾಷ್ಠೆ

By Suvarna News  |  First Published Apr 12, 2022, 2:16 PM IST

ಕೊಪ್ಪಳ ಜಿಲ್ಲೆ ಸದಾ ಧಾರ್ಮಿಕ, ಸಾಂಸ್ಕೃತಿಕ,ಸಾಹಿತ್ಯಿಕ ಕ್ಷೇತ್ರಗಳಲ್ಲಿ ಸದಾ ಮುಂದು. ಇಂತಹ ಜಿಲ್ಲೆಯ ಕಾರಟಗಿ ತಾಲೂಕಿನ ಡಗ್ಗಿ ಗ್ರಾಮದಲ್ಲಿ ಮುಳ್ಳಿನ ಜಾತ್ರೆ ನಡೆಯುತ್ತದೆ


ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ(ಏ.12): ಭಾರತ ವಿವಿಧ ಸಂಪ್ರದಾಯಗಳನ್ನು ಹೊಂದಿರುವ ದೇಶ. ಇಲ್ಲಿ ಜರುಗುವ ಜಾತ್ರೆ, ಹಬ್ಬ, ಹರಿದಿನಗಳು ತನ್ನದೇ ಆದ  ಆಚರಣೆಗಳನ್ನು ಹೊಂದಿದೆ. ಇಂತಹದ್ದೇ ಒಂದು ವಿಶಿಷ್ಠವಾದ ಆಚರಣೆಯನ್ನು ಹೊಂದಿರುವ ಜಾತ್ರೆಯ ಬಗ್ಗೆ ನಾವು ನಿಮಗೆ ಹೇಳ್ತೀವಿ.  

Latest Videos

undefined

ಮುಳ್ಳಿನ ಜಾತ್ರೆಯ ವಿಶೇಷ: ನಾವು ನಿಮಗೆ ಹೇಳಲು ಹೊರಟಿರುವುದು ಮುಳ್ಳಿನ (thorn) ಜಾತ್ರೆಯ ಬಗ್ಗೆ. ಹೌದು ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ವಿವಿಧ ರೀತಿಯಲ್ಲಿ ಹರಕೆಗಳನ್ನು ಹೊರುತ್ತಾರೆ. ಬಳಿಕ ಅವು ಈಡೇರಿದ ಮೇಲೆ ವಿವಿಧ ರೀತಿಯಲ್ಲಿ ಹರಕೆಗಳನ್ನು ಈಡೇರಿಸುತ್ತಾರೆ.‌ ಅದೇ ರೀತಿ ಇಲ್ಲೊಂದು ಊರಲ್ಲಿ ತಮ್ಮ ಇಷ್ಟಾರ್ಥಗಳ  ಈಡೇರಿಕೆಗಾಗಿ ಕಾರಿ ಮುಳ್ಳಿನ ಮೇಲೆ ಹಾರುವ ಮೂಲಕ ಪ್ರಾರ್ಥಿಸುತ್ತಾರೆ. ಈ ರೀತಿ ಮಾಡಿದರೆ ತಾವು ಅಂದುಕೊಂಡದ್ದು ನೆರವೆರುತ್ತದೆ ಎನ್ನುವ ನಂಬಿಕೆ ಅನಾದಿಕಾಲದಿಂದಲೂ ಇದೆ.

ಎಲ್ಲಿ ಈ ಮುಳ್ಳಿನ ಹರಕೆ ಆಚರಣೆ: ಕೊಪ್ಪಳ (Koppala) ಜಿಲ್ಲೆ ಸದಾ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲಿ ಸದಾ ಮುಂದು. ಇಂತಹ ಜಿಲ್ಲೆಯ ಕಾರಟಗಿ ತಾಲೂಕಿನ ಡಗ್ಗಿ ಗ್ರಾಮದಲ್ಲಿ ಇಂತಹದ್ದೊಂದು ವಿಶಿಷ್ಠ ಆಚರಣೆ ಇರುವುದು. ಡಗ್ಗಿ ಗ್ರಾಮದ ವಾಯುಪುತ್ರ ಆಂಜನೇಯನ (Anjaneya) ಜಾತ್ರಾ ಮಹೋತ್ಸವದಲ್ಲಿ ಇಂತಹದ್ದೊಂದು ವಿಶೇಷ ಹಾಗೂ ಮೈ ಜುಮ್ಮೆನಿಸುವ ಆಚರಣೆ ಮಾಡಲಾಗುತ್ತದೆ.

Udupi fishermen community ಮೀನುಗಾರ ಸಮುದಾಯಕ್ಕೆ ಭರ್ಜರಿ ಗಿಫ್ಟ್ ನೀಡಿದ ಸಿಎಂ

ಏನೆಲ್ಲ ಆಚರಣೆ ಮಾಡಲಾಗುತ್ತದೆ: ಡಗ್ಗಿ ಗ್ರಾಮದ ಆಂಜನೇಯನ ಜಾತ್ರೆ ಬಂದರೆ ಸಾಕು ಡಗ್ಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಆಂಜನೇಯನ ಜಾತ್ರೆಯ ದಿನ ಕಾರಿ ಮುಳ್ಳಿನ ಹಾರುವ ವಿಶೇಷ ಆಚರಣೆ ಇರುತ್ತದೆ.

ಇನ್ನು ಜಾತ್ರೆಯ ದಿನ ಕಾರಿ ಮುಳ್ಳಿನಲ್ಲಿ ಹಾರುವವರು ಬೆಳಿಗ್ಗೆಯಿಂದ ಸಂಜೆವರೆಗೂ ಉಪವಾಸ ವೃತ ಮಾಡುತ್ತಾರೆ. ಜಾತ್ರೆಯ ದಿನ ಮಧ್ಯಾಹ್ನ ಸ್ನಾನ ಮಾಡಿ ಗ್ರಾಮದ ಹೊರವಲಯದ ಕಾಡಿಗೆ ಹೋಗುತ್ತಾರೆ. ಈ ವೇಳೆಯಲ್ಲಿ ಗ್ರಾಮಸ್ಥರು ಕೊಡಲಿ, ಕೂಡಗೋಲು ಉಪಯೋಗಿಸದೆ ಕೇವಲ ಕಲ್ಲಿನಿಂದ ಕಾರಿ ಮುಳ್ಳನ್ನು ಕಡಿದುಕೊಂಡು ಬಂದು ಗ್ರಾಮದ ಮದ್ಯೆ ಒಂದು ಕಡೆ ಗುಂಪು ಹಾಕುತ್ತಾರೆ. ಬಳಿಕ ಹರಕೆ ಹೊತ್ತ ಯುವಕರು ಒಬ್ಬೊಬ್ಬರಾಗಿ ಓಡೋಡಿ ಬಂದು ಕಾರಿ ಮುಳ್ಳಿನ ಮೇಲೆ ಹಾರುತ್ತಾರೆ. ಈ ವೇಳೆ ಇದನ್ನು ನೋಡುತ್ತಿರುವವರಿಗೆ ಮೈ ಜುಮ್ಮೆನದೇ ಇರದು.‌ಅಷ್ಟೊಂದು ಭಯವಾಗುವ ರೀತಿಯಲ್ಲಿ ಕಾರಿ ಮುಳ್ಳಿನ ಮೇಲೆ ಹಾರುತ್ತಾ ತಮ್ಮ ಭಕ್ತಿಯನ್ನು ಮೆರೆಯುತ್ತಿರುತ್ತಾರೆ.

ನಾನು ಯಾವುದೇ ವಿವಾದದಲ್ಲಿ ಬೀಳಲು ಬಯಸುವುದಿಲ್ಲ Basavaraj Bommai

ಮುಳ್ಳು ಏನಾಗುತ್ತವೆ: ಸಾಮಾನ್ಯವಾಗಿ ನಮಗೆ ಮುಳ್ಳು ಚುಚ್ಚಿದರೆ ನಮಗೆ ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೋವಾಗುತ್ತದೆ. ಅಂತದ್ದರಲ್ಲಿ ಮುಳ್ಳಿನ ಮೇಲೆ ಮಲಗಿಕೊಂಡರೆ ಮುಳ್ಳು ಚುಚ್ಚದೇ ಇರಲಾರವು.‌ ಹೌದು ಮುಳ್ಳಿನ ಮೇಲೆ ಜಿಗಿಯುವ ಪ್ರತಿಯೊಬ್ಬರಿಗೂ ದೇಹದ ತುಂಬೇಲ್ಲಾ ಮುಳ್ಳುಗಳು ಚುಚ್ಚುತ್ತವೆ. ಈ ವೇಳೆಯಲ್ಲಿ ಯುವಕರು ರಾತ್ರಿ ವೇಳೆ ಮನೆಯಲ್ಲಿ ಕಂಬಳಿ ಹೊತ್ತುಕೊಂಡು ಮಲಗಿದರೆ ಬೆಳಗಾಗುವುದರೊಳಗೆ ಮುಳ್ಳುಗಳೆಲ್ಲ ದೇಹದಿಂದ‌ ಹೊರಬಂದಿರುತ್ತವೆ.‌ಅಷ್ಟೇ ಅಲ್ಲ ದೇಹದ ನೋವು ಸಹ ಮಾಯವಾಗಿರುತ್ತವೆ. 

ಇನ್ನು ಡಗ್ಗಿ ಗ್ರಾಮದಲ್ಲಿ ಅನಾದಿಕಾಲದಿಂದಲೂ ಇಂತಹದ್ದೊಂದು ವಿಶಿಷ್ಠವಾದ ಸಂಪ್ರದಾಯ ಆಚರಣೆಯನ್ನು ಮಾಡುತ್ತಾ ಬರುತ್ತಿದ್ದು.ಈ ಆಚರಣೆ ನಿಜಕ್ಕೂ ವಿಶೇಷವೇ ಎಂದು ಹೇಳಬಹುದು.

click me!