3 ವರ್ಷದಿಂದ ಪತ್ರ ವಿತರಿಸದ ಪೋಸ್ಟ್ ಮನ್ : ಎಷ್ಟೋ ಜನರಿಗೆ ನೌಕರಿಯೇ ಮಿಸ್

By Kannadaprabha News  |  First Published Nov 12, 2019, 10:19 AM IST

ಪೋಸ್ಟ್ ಮ್ಯಾನ್ ಓರ್ವರು  ಸತತ 3 ವರ್ಷಗಳಿಂದ ಯಾವುದೇ ಪತ್ರಗಳನ್ನು ವಿತರಿಸದ ಘಟನೆಯೊಂದು ಕೊಪ್ಪಳ ಜಿಲ್ಲೆಯಲ್ಲಾಗಿದೆ. 


ಯಲಬುರ್ಗಾ (ನ.12): ತಾಲೂಕಿನ ಸಂಗನಾಳ ಗ್ರಾಮದಲ್ಲಿ ಕಳೆದ ಮೂರು ವರ್ಷಗಳಿಂದ ಪೋಸ್ಟ್ ಆಫೀಸಿಗೆ ಬಂದಿದ್ದ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಪತ್ರಗಳನ್ನು ವಿಲೇವಾರಿ ಮಾಡದೇ ಸ್ಥಳೀಯ ಪೋಸ್ಟ್‌ಮನ್ ಕರ್ತವ್ಯಲೋಪ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪರಿಣಾಮ ಎಟಿಎಂ ಕಾರ್ಡು, ಪ್ರಮುಖ ಪರೀಕ್ಷೆಗಳ ಪ್ರವೇಶಪತ್ರಗಳೂ ಸೇರಿದಂತೆ ಹಲವಾರು ಮಹತ್ವದ ದಾಖಲೆಗಳು ತಲುಪಬೇಕಾದ ವಿಳಾಸಕ್ಕೆ ತಲುಪದೆ ಜನರು ಸಾಕಷ್ಟು ಸಮಸ್ಯೆಎದುರಿಸಿದ್ದಾರೆ.

Latest Videos

undefined

ಸಂಗನಾಳ ಗ್ರಾಮದ ಪೋಸ್ಟ್‌ಮ್ಯಾನ್ ಸುರೇಶ ತಳವಾರ ಎಂಬಾತನೇ ಇಂಥ ಕೃತ್ಯ ಎಸಗಿದ ಆರೋಪ ಎದುರಿಸುತ್ತಿರುವವರು. 2017 ರಿಂದ 2019 ರ ವರೆಗಿನ ಕಚೇರಿಗೆ ಬಂದ ಪತ್ರಗಳನ್ನು ಸಂಬಂಧಿಸಿದವರಿಗೆ ವಿತರಿಸದೆ ಎಲ್ಲವನ್ನು ಅವರು ತನ್ನ ಬಳಿಯೇ ಉಳಿಸಿಕೊಂಡಿದ್ದಾರೆ. ಕಚೇರಿಗೆ ಬಂದಿದ್ದ ಪತ್ರಗಳಲ್ಲಿ ಸರ್ಕಾರದ ಅಧಿಕೃತ ಪ್ರಕಟಣೆಗಳು, ವಿಮೆ ನೋಟಿಸುಗಳು, ಬ್ಯಾಂಕ್ ಪಾಸ್ ಬುಕ್ ಗಳು, ಎಟಿಎಂ ಕಾರ್ಡುಗಳು, ಪದವಿ ಪ್ರಮಾಣ ಪತ್ರಗಳು, ಪರೀಕ್ಷಾ ಪ್ರವೇಶ ಪತ್ರಗಳು, ಕೆಲಸದ ನೇಮಕ ಪತ್ರ ಹಾಗೂ ಬಹುಮುಖ್ಯವಾದ ಮಾಹಿತಿ ಪತ್ರಗಳೂ ಸೇರಿವೆ. ಸುಮಾರು 1500 ಪತ್ರಗಳು ಹಾಗೂ ವಿವಿಧ ವಸ್ತುಗಳು ಬಂದರೂ ಅವುಗಳನ್ನು ವಿತರಿಸಿಲ್ಲ!

ಕೈಗೆ ಸೇರಬೇಕಾದ ದಾಖಲೆ ಸರಿಯಾದ ಸಮಯಕ್ಕೆ ಸೇರದ್ದರಿಂದ ಗ್ರಾಮಸ್ಥರು ಬಹಳ ತಲೆ ಕೆಡಿಸಿಕೊಂಡಿದ್ದರು. ಕೆಲವರು ಸರ್ಕಾರಿ ಕಚೇರಿಯ ಕೆಲಸಗಳು ಇದರಿಂದ ಬಾಕಿಯಾಗಿ ಬಹಳ ಸಮಸ್ಯೆಗಳಾಗಿದ್ದವು. ಹಲವರು ಪತ್ರ ಕಳಿಸಿರುವ ವಿವಿಧ ಕಚೇರಿಗಳಿಗೆ ಪೋನ್ ಮಾಡಿ, ಹೋಗಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಗಲಾಟೆಯನ್ನೂ ತೆಗೆದಿದ್ದರು. ಕಳಿಸಬೇಕಾದ ದಾಖಲೆ ನಾವು ಕಳಿಸಿದ್ದೇವೆ. ನೀವು ನಿಮ್ಮ ಅಂಚೆಕಚೇರಿಯನ್ನು ಸಂಪರ್ಕಿಸಿ ಎಂಬ ಉತ್ತರ ಅಲ್ಲಿಂದ ಬರುತ್ತಿತ್ತು. ಅಂಚೆ ಕಚೇರಿಗೆ ಬಂದು ವಿಚಾರಿಸಿದರೆ ಇಲ್ಲಿಗೆ ಪತ್ರ ಬಂದೇ ಇಲ್ಲ ಎಂದೇ ಹೇಳಲಾಗುತ್ತಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಘಟನೆ ತಡವಾಗಿ ಬೆಳಕಿಗೆ: ಸುಮಾರು 3 ವರ್ಷಗಳಿಂದ ಗ್ರಾಮಕ್ಕೆ ವೃದ್ಧಾಪ್ಯ ವೇತನ, ಆಧಾರ್ ಕಾರ್ಡ್ ಇನ್ನಿತರ ಯಾವುದೇ ಪತ್ರಗಳು ಬರುತ್ತಿಲ್ಲ ಎಂಬ ಸಾರ್ವಜನಿಕ ವಲಯದಿಂದ ದೂರು ಬಂದಿದ್ದರಿಂದ ಅಧಿಕಾರಿಗಳು ಕಚೇರಿಗೆ ಬಂದು ಗಮನಿಸಿದ್ದಾರೆ. ಆಗ ತನಿಖಾ ಅಧಿಕಾರಿಗಳಿಗೆ ಸಾವಿರಾರು ಪತ್ರಗಳು ಸೇರಿದಂತೆ ಎಟಿಎಂ ಕಾರ್ಡ್‌ಗಳು, ಬ್ಯಾಂಕ್ ಪಾಸ್‌ಬುಕ್, ಪ್ಯಾನ್ ಕಾರ್ಡ್ ಗಳು ಸಿಕ್ಕಿವೆ. ಒಂದೇ ಕೊಠಡಿಯಲ್ಲಿ ಸಾವಿ ರಾರು ಪತ್ರಗಳು 3 ವರ್ಷದಿಂದ ಸಂಗ್ರಹವಾಗಿ ಧೂಳು ತಿನ್ನುತ್ತಿವೆ. ಪೋಸ್ಟ್‌ಮನ್ ಸುರೇಶ ತಳವಾರ ಅವರ ಬಳಿ ಗ್ರಾಮಸ್ಥರು ಸಾಕಷ್ಟು ಬಾರಿ ವಿಚಾರಿಸಿದರೂ ಯಾವುದೇ ಪತ್ರಗಳು ಬಂದಿಲ್ಲ ಎಂದು ಹೇಳುವ ಜತೆಗೆ ಉಡಾಫೆ ಮಾತುಗಳನ್ನಾಡಿದ್ದಾನೆ ಎನ್ನಲಾಗಿದೆ.

click me!