ಖರ್ಗೆ ಪ್ರಧಾನಿ ಆಗಲಿಲ್ಲ, ನಾನು ಮಂತ್ರಿ ಆಗಲಿಲ್ಲ, ನೋವು ತೋಡಿಕೊಂಡ ಬಸವರಾಜ ರಾಯರೆಡ್ಡಿ

Published : Dec 19, 2025, 10:40 PM IST
basavaraj rayareddy Mallikarjun Kharge

ಸಾರಾಂಶ

ಖರ್ಗೆ ಪ್ರಧಾನಿ ಆಗಲಿಲ್ಲ, ನಾನು ಮಂತ್ರಿ ಆಗಲಿಲ್ಲ, ನೋವು ತೋಡಿಕೊಂಡ ಬಸವರಾಜ ರಾಯರೆಡ್ಡಿ, ಈ ದೇಶದಲ್ಲಿ ಪ್ರಧಾನಿಯಾಗಲು ಅರ್ಹ, ಸೂಕ್ತ ವ್ಯಕ್ತಿ ಎಂದು ಯಾರಾದರು ಇದ್ದರೆ ಅದು ಮಲ್ಲಿಕಾರ್ಜುನ ಖರ್ಗೆ ಎಂದಿದ್ದಾರೆ. ನೋವಿನಲ್ಲಿ ರಾಯರೆಡ್ಡಿ ಹೇಳಿದ್ದೇನು?

ಕೊಪ್ಫಳ (ಡಿ.19) ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿ ಕದನ ಒಂದು ಹಂತಕ್ಕೆ ತಣ್ಣಗಾಗಿದ್ದರೂ ಒಳಗೊಳಗೆ ಗುದ್ದಾಟಗಳು ನಡೆಯುತ್ತಿದೆ. ಕುರ್ಚಿ ಉಳಿಸಿಕೊಂಡು ಆಡಳಿತ ನಡೆಸಲು ನೋಡಿದರೆ, ಗೃಹಲಕ್ಷ್ಮಿ ಬಾಕಿ ಹಣ, ಗ್ಯಾರೆಂಟಿ, ಅಭಿವೃದ್ಧಿ, ಅನುದಾನ ಸೇರಿದಂತೆ ಹಲವು ಸವಾಲುಗಳು ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಎದುರಾಗಿದೆ. ತಲೆನೋವು ಹೆಚ್ಚಾಗುತ್ತಿದ್ದಂತೆ ಇತ್ತ ಮಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ತಾನು ಮಂತ್ರಿಯಾಗಲಿಲ್ಲ ಅನ್ನೋ ನೋವು ಹೊರಹಾಕಿದ್ದಾರೆ. ಈ ದೇಶದಲ್ಲಿ ಪ್ರಧಾನಿಯಾಗಲು ಯೋಗ್ಯ ವ್ಯಕ್ತಿ ಮಲ್ಲಿಕಾರ್ಜುನ ಖರ್ಗೆ. ಆಧರೆ ಖರ್ಗೆ ಪ್ರಧಾನಿಯಾಗಲಿಲ್ಲ. ತಾನು ಮಂತ್ರಿಯಾಗಲಿಲ್ಲ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಕರ್ನಾಟಕ ಕಾಂಗ್ರೆಸ್‌ನಲ್ಲಿ ಮಂತ್ರಿಯಾಗಲು ಯೋಗ್ಯವ್ಯಕ್ತಿ ತಾನು ಎಂದಿದ್ದಾರೆ.

ದುರದೃಷ್ಟ ಖರ್ಗೆ ಅವರು ಪ್ರಧಾನಿ ಆಗಿಲ್ಲ

ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದಲ್ಲಿ ಮಾತನಾಡಿದ ರಾಯರೆಡ್ಡಿ, ಮಲ್ಲಿಕಾರ್ಜುನ ಖರ್ಗೆ ಒಬ್ಬ ಉತ್ತಮ‌ ಆಡಳಿತಗಾರ. ಮಲ್ಲಿಕಾರ್ಜುನ ಖರ್ಗೆ ಅವರು ಈ ದೇಶದ ಪ್ರಧಾನಿ ಆಗಲು ಯೋಗ್ಯ ವ್ಯಕ್ತಿ. ಆದರೆ ಏನು ಮಾಡೋದು, ಖರ್ಗೆ ಪ್ರಧಾನಿಯಾಗಲಿಲ್ಲ, ನಾನು ಮಂತ್ರಿ ಆಗಲಿಲ್ಲ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಈಗಿನ ಬಹುತೇಕ ಸಚಿವರ ತಂದೆಯವರೊಂದಿಗೆ ನಾನು ಕೆಲಸ ಮಾಡಿದ್ದೇನೆ. ಆದರೆ ನಾನು ಸಚಿವನಾಗಲಿಲ್ಲ ಎಂದು ಪರೋಕ್ಷವಾಗಿ ನೋವು ತೋಡಿಕೊಂಡಿದ್ದಾರೆ.

ಯಾರೋ ಆಗಬೇಕು ಅಂತಾರೆ , ಆದರೆ ಆಗಲ್ಲ

ಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು ಎಂದು ಹಲವರು ಅಂದಕೊಳ್ಳುತ್ತಾರೆ. ಆದ್ರೆ ಸುದೈವದಿಂದ ಕೆಲವು ಸಲ ಆಗೋಕೆ ಆಗಲ್ಲ.ಯಾರ ಯಾರೋ ಆಗಬೇಕ ಅಂತಾರೆ ಆಗೋಕೆ ಆಗಲ್ಲ. ನಾನು ಮಂತ್ರಿ ಆಗಲಿಲ್ಲಾ,ಅದಕ್ಕೆ ಜಗಳ ಮಾಡೋಕೆ ಆಗುತ್ತಾ ಎಂದು ಬಸವರಾಜ ರಾಯರೆಡ್ಡಿ ಪ್ರಶ್ನಿಸಿದ್ದಾರೆ.

ಶರಣ ಪ್ರಕಾಶನಿಗೆ ಲಾಟರಿ

ಶರಣ ಪ್ರಕಾಶ 8 ವರ್ಷ ಮಂತ್ರಿ ಆಗುವ ಮೂಲಕ ಲಾಟರಿ ಹೊಡಿದಿದ್ದಾನೆ. ನಂಗೂ ಶರಣ ಪ್ರಕಾಶ್‌ಗೆ 20 ವರ್ಷ ಅಂತರ ಇದೆ. ನಾನು ವಯಸ್ಸು ಹೇಳಿಲ್ಲ,ನಾನು ಶಾಸಕನಾಗಿದ್ದು 1985ರಲ್ಲಿ. ಶರಣಪ್ರಕಾಶ್ ಪಾಟೀಲ್ ಆಗಿದ್ದು 2004ರಲ್ಲಿ. ವಯಸ್ಸು ಬಹಳ ಜನರಿಗೆ ಆಗುತ್ತೆ. ಅದಕ್ಕೆ ನಾನು ಹೊಟ್ಟೆ ಕಿಚ್ಚು ಪಟ್ಟಿಲ್ಲ. ಶರಣ ಪ್ರಕಾಶ ಪಾಟೀಲ್ ಒಳ್ಳೆಯವರು,ಪ್ರೀಯಾಂಕ್ ಖರ್ಗೆ ಕೂಡಾ ಗುಡ್ ಪರ್ಸನ್ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ನಾನು ನಿಮ್ಮ ತಂದೆಯವರ ಜೊತೆ ಕೆಲಸ ಮಾಡಿ,ನಿಮ್ಮ ಜೊತೆನೂ ಕೆಲಸ ಮಾಡುತ್ತಿದ್ದೀನಿ ಎಂದು ರಾಯರೆಡ್ಡಿ ಹೇಳಿದ್ದಾರೆ.

ಸರ್ಕಾರ ಐದು ವರ್ಷ ಇರುತ್ತೆ

ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ನಮ್ಮ ಸರ್ಕಾರ ಐದು ವರ್ಷ ಇರಲಿದೆ. ಯಾರೂ ಗೊಂದಲಕ್ಕೀಡುವ ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಒಳ್ಳೆ ಬಜೆಟ್ ಕೊಡುತ್ತೇವೆ ಎಂದು ರಾಯರೆಡ್ಡಿ ಹೇಳಿದ್ದಾರೆ.

ಗೃಹಲಕ್ಷ್ಮಿ ಬಾಕಿ ಹಣಕ್ಕೆ ನೋ ಕಮೆಂಟ್ಸ್

ಗ್ರಹಲಕ್ಷ್ಮಿ ಬಾಕಿ ಹಣ ಹಾಕುವ ವಿಚಾರದಲ್ಲಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಗೊಂದಲದಲ್ಲಿದ್ದಾರೆ. ಬಾಕಿ ಉಳಿದ ಹಣ ಈಗ ಹಾಕಲು ಬರುತ್ತಾ ಅನ್ನೋ ಗೊಂದಲದಿಂದ ರಾಯರೆಡ್ಡಿ ಹೊರಬಂದಿಲ್ಲ. ಕಳೆದ ವರ್ಷ ಪೆಬ್ರುವರಿ ಮಾರ್ಚ ತಿಂಗಳ ಹಣ ಹಾಕಿಲ್ಲ ಅದು ನಿಜ ನನಗೆ ಗೊತ್ತಿದೆ. ಆದ್ರೆ ಮಾಹಿತಿ ಕೊರತೆಯಿಂದ, ಕಣ್ತಪ್ಪಿನಿಂದ ಸಚಿವರು ಕೊಟ್ಟಿದ್ದೇವೆ ಎಂದಿದ್ದಾರೆ. ತಪ್ಪನ್ನು ಸಚಿವರು ಒಪ್ಪಿಕೊಂಡಿದ್ದಾರೆ. ವಿರೋದ ಪಕ್ಷದವರು ಅದನ್ನ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ. ಆದರೆ ಕಳೆದ ವರ್ಷದ ಬಾಕಿ ಹಣ ವರ್ಷ ಕೊಡಲು ಸಾಧ್ಯವೇ ಅನ್ನೋದು ಸ್ಪಷ್ಟಪಡಿಸದೇ ತೆರಳಿದ್ದಾರೆ.

 

PREV
Read more Articles on
click me!

Recommended Stories

'ಎರಡನೆ ಬೆಳೆಗೆ ನೀರಿಲ್ಲ, ಸಸಿ ನಾಟಿ ಮಾಡಬೇಡಿ' ತುಂಗಭದ್ರಾ ರೈತರಿಗೆ ಸಚಿವ ತಂಗಡಗಿ ಅಚ್ಚರಿಯ ಸಲಹೆ!
ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಶೀಘ್ರವೇ ಡಿಪಿಆರ್, ಚಿತ್ರದುರ್ಗವರೆಗೆ ವಿಸ್ತರಿಸುವಂತೆ ಒತ್ತಾಯ