ಸಕಾಲಕ್ಕೆ ಉತ್ತಮ ಪ್ರಮಾಣದಲ್ಲಿ ಆದ ಹಿಂಗಾರು ಮಳೆ| ಈ ಮೂಲಕ ರೈತರ ಜಮೀನಿನಲ್ಲಿ ನಿರ್ಮಿಸಿಕೊಂಡ ಕೃಷಿ ಹೊಂಡಗಳು ಭರ್ತಿ| ತಾಲೂಕಿನ ರೈತರ ಹರ್ಷ| ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಉತ್ತರಿ, ಸ್ವಾತಿ ಮಳೆ ಹಾಗೂ ಚಿತ್ತಿ ಮಳೆ ದೊಡ್ಡ ಪ್ರಮಾಣದಲ್ಲಿ ಸುರಿದಿದ್ದಕ್ಕೆ 2014 ರಿಂದ ಸೇರಿದಂತೆ 2018-19 ನೇ ಸಾಲಿನಲ್ಲಿ ನಿರ್ಮಾಣಗೊಂಡಿರುವ ಕೃಷಿ ಹೊಂಡಗಳು ಸಂಪೂರ್ಣವಾಗಿ ಭರ್ತಿಯಾಗಿವೆ| ಜತೆಗೆ ಹಳ್ಳ, ಕೊಳ್ಳಗಳು, ತೆಗ್ಗು ಪ್ರದೇಶಗಳು ಕೂಡ ತುಂಬಿವೆ|
ಯಲಬುರ್ಗಾ[ಅ21]: ಕಳೆದ ಮೂರ್ನಾಲ್ಕು ವರ್ಷಗಳಿಂದ ಸತತ ಬರಗಾಲ ಹಾಗೂ ಪ್ರಸಕ್ತ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರ ಬದುಕು ದಿಕ್ಕು ತೋಚದಂತಾಗಿತ್ತು. ಆದರೆ ಈ ಸಾರಿ ಹಿಂಗಾರು ಮಳೆ ಸಕಾಲಕ್ಕೆ ಉತ್ತಮ ಪ್ರಮಾಣದಲ್ಲಿ ಆಗುವ ಮೂಲಕ ರೈತರ ಜಮೀನಿನಲ್ಲಿ ನಿರ್ಮಿಸಿಕೊಂಡ ಕೃಷಿ ಹೊಂಡಗಳು ಭರ್ತಿಯಾಗಿರುವುದಕ್ಕೆ ತಾಲೂಕಿನ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಉತ್ತರಿ, ಸ್ವಾತಿ ಮಳೆ ಹಾಗೂ ಚಿತ್ತಿ ಮಳೆ ದೊಡ್ಡ ಪ್ರಮಾಣದಲ್ಲಿ ಸುರಿದಿದ್ದಕ್ಕೆ 2014 ರಿಂದ ಸೇರಿದಂತೆ 2018-19 ನೇ ಸಾಲಿನಲ್ಲಿ ನಿರ್ಮಾಣಗೊಂಡಿರುವ ಕೃಷಿ ಹೊಂಡಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಜತೆಗೆ ಹಳ್ಳ, ಕೊಳ್ಳಗಳು, ತೆಗ್ಗು ಪ್ರದೇಶಗಳು ಕೂಡ ತುಂಬಿವೆ. ಹೀಗಾಗಿ ಹಿಂಗಾರು ಬಿತ್ತನೆಗೆ ಬೇಕಾದ ಮಳೆ ಸಹ ಸಂಪೂರ್ಣವಾಗಿದ್ದು ಸತತ ಬರಗಾಲದಿಂದ ಕಂಗೆಟ್ಟ ರೈತರಲ್ಲಿ ಈ ಹಿಂಗಾರು ಬೆಳೆಯ ಉತ್ತಮ ಫಸಲು ನಿರೀಕ್ಷೆಯಲ್ಲಿದ್ದಾರೆ. ಕೃಷಿ ಭಾಗ್ಯ ಯೋಜನೆಯನ್ನು ಪಟ್ಟಣ ಪ್ರದೇಶಕ್ಕೂ ವಿಸ್ತರಿಸಿದ್ದಕ್ಕೆ ಯಲಬುರ್ಗಾ ಸುತ್ತಲಿನ ಕಪ್ಪುಮಣ್ಣಿನ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಿಂಗಾರು ಬಿತ್ತನೆ ವೇಳೆಗೆ ಜನರು ಹಾಗೂ ದನಗಳು ಕುಡಿಯಲು ಎರೇ ಪ್ರದೇಶಗಳಲ್ಲಿ ನೀರು ಸಿಗುತ್ತಿರಲಿಲ್ಲ.ಈಗ ಕೃಷಿ ಹೊಂಡಗಳು ತುಂಬಿದ್ದು ಬಿತ್ತನೆ ವೇಳೆಗೆ ನೀರಿನಕೊರತೆಯಾಗದು ಎಂಬುದು ರೈತರ ಅಭಿಪ್ರಾಯವಾಗಿದೆ. ಕೃಷಿ ಹೊಂಡಗಳ ನಿರ್ಮಾಣದಿಂದ ಅಂತರ್ಜಲ ಮಟ್ಟವೂ ಸುಧಾರಣೆಯಾಗಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇತ್ತೀಚೆಗೆ ಮಳೆ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಬಗ್ಗೆರೈತರಲ್ಲಿ ಸಾಕಷ್ಟು ಜಾಗೃತಿ ಮೂಡಿದೆ.
ಯಲಬುರ್ಗಾ ತಾಲೂಕಿನಲ್ಲಿ 2014ರಿಂದ 2019 ನೇ ಸಾಲಿನವರೆಗೊ ಒಟ್ಟು 5110 ಕೃಷಿ ಹೊಂಡಗಳು ನಿರ್ಮಾಣವಾಗಿವೆ. ತಾಲೂಕಿನ ಕುಕನೂರು ಹೋಬಳಿಯಲ್ಲಿ ಅತಿ ಹೆಚ್ಚು 2656 ಕೃಷಿ ಹೊಂಡಗಳುನಿರ್ಮಾಣವಾಗಿವೆ. ಆ ಪೈಕಿ ಕುಕನೂರು ಹೋಬಳಿ 2656, ಮಂಗಳೂರು 775, ಹಿರೇವಂಕಲಕುಂಟಾ 252, ಯಲಬುರ್ಗಾ 1473 ನಿರ್ಮಾಣವಾಗಿವೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ಕೃಷಿಹೊಂಡಗಳು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನಲ್ಲಿನಿರ್ಮಾಣವಾಗಿವೆ.ಕಳೆದ ಕೆಲ ದಿನಗಳಿಂದ ಸುರಿದ ಮಳೆಯಿಂದ ಸಾವಿರಾರು ಕೃಷಿ ಹೊಂಡಗಳು ಭರ್ತಿಯಾಗಿದ್ದು, ಜಲಸಂಭ್ರಮಕ್ಕೆ ನಾಂದಿಯಾಗಿದೆ. ತಾಲೂಕಿನ ಎರೇ ಭಾಗದಲ್ಲಿಉತ್ತಮ ಹಿಂಗಾರು ಮಳೆಯಿಂದ ಸಂತಸ ಮನೆ ಮಾಡಿದೆ. ರೈತರಿಗೆ ಪ್ರಸ್ತುತ ವರ್ಷದ ಹಿಂಗಾರು ಹಂಗಾಮಿನಲ್ಲಿಕೊನೆಯ ಹಂತದ ಮಳೆಯಿಂದಲೇ ಕೃಷಿ ಹೊಂಡಗಳುತುಂಬಿ ತುಳುಕಿದ್ದು ರೈತರ ಮೊಗದಲ್ಲಿ ಹರ್ಷ ಮೂಡಿದೆ.ಬೆಳೆ ಬೆಳೆಯದಿದ್ದ ಕಪ್ಪು ಮಣ್ಣಿನ ಜಮೀನುಗಳಲ್ಲಿ ಹಾಗೂ ಬಿತ್ತನೆ ಬಳಿಕ ಮಳೆ ಆಗದಿದ್ದರೆ ರೈತರು ಕೃಷಿ ಹೊಂಡದನೀರು ಹರಿಸಿ ಹಸಿರು ಕಾಣುವ ಉಮೇದಿಯಿಂದ ಕೃಷಿ ಚಟುವಟಿಯಲ್ಲಿ ತೊಡಗಿಕೊಂಡಿದ್ದಾರೆ.
ತಾಲೂಕಿನ ರೈತಾಪಿ ವರ್ಗ ಕೃಷಿಹೊಂಡ ಯೋಜನೆಯಿಂದ ಹಿಂಗಾರು ಹಂಗಾಮಿನಲ್ಲಿ ಉತ್ತಮ ಬೆಳೆ ಬೆಳೆಸುವ ಆಶಯ ಹೊಂದಿದ್ದಾರೆ. ಕೃಷಿ ಭಾಗ್ಯಯೋಜನೆಯನ್ನು ರೈತರು ಸಮರ್ಪಕವಾಗಿ ಬಳಕೆ ಮಾಡಿದರೆ ಒಣಬೇಸಾಯ ವ್ಯವಸ್ಥೆಯಲ್ಲಿ ಸುಧಾರಣೆಕಂಡುಕೊಳ್ಳಲು ಉಪಯುಕ್ತ ಯೋಜನೆ ಇದಾಗಿದೆ.
ನಮ್ಮ ಜಮೀನಿನಲ್ಲಿ ಕೃಷಿ ಇಲಾಖೆ ವತಿಯಿಂದ ಕೃಷಿಹೊಂಡ ನಿರ್ಮಾಣಮಾಡಿದ್ದೇವೆ. ಕೆಲ ದಿನಗಳಿಂದ ಸುರಿದ ಮಳೆಗೆ ಕೃಷಿ ಹೊಂಡ ತುಂಬಿರುವುದು ಸಂತಸ ತಂದಿದೆ. ಹಿಂಗಾರು ಬಿತ್ತನೆ ಮಾಡಿದ ಮೇಲೆ ಮಳೆಆಗದಿದ್ದರೂ ಚಿಂತೆಯಿಲ್ಲ. ಕೃಷಿ ಹೊಂಡದ ನೀರನ್ನು ಬಳಕೆ ಮಾಡಿ ಒಳ್ಳೆಯ ಬೆಳೆಯನ್ನು ತೆಗೆಯುತ್ತೇವೆ ಎನ್ನುವ ಆತ್ಮವಿಶ್ವಾಸ ಹೊಂದಿದ್ದೇವೆ ಎಂದು ರೈತರಾದ ಸಿದ್ದಪ್ಪ ಹಾಡಿನ್, ಬಸಪ್ಪ ಸೋಂಪುರ ಅವರು ಹೇಳಿದ್ದಾರೆ.
ಕೃಷಿ ಭಾಗ್ಯ ಯೋಜನೆ ಫಲಪ್ರದವಾಗಿದೆ. ಯೋಜನೆಯನ್ನು ರೈತರು ಸಮರ್ಪಕವಾಗಿ ಬಳಕೆ ಮಾಡಿದರೆ ಒಣಬೇಸಾಯ ವ್ಯವಸ್ಥೆಯಲ್ಲಿ ಸಂಪೂರ್ಣ ಸುಧಾರಣೆ ಜತೆಗೆ ಅಂತರ್ಜಲ ಹೆಚ್ಚಳಕ್ಕೂ ಅನುಕೂಲವಾಗಲಿದೆ. ಬಿತ್ತನೆ ಬಳಿಕ ಮಳೆ ಬರದಿದ್ದರೆ ಕೃಷಿ ಹೊಂಡದಲ್ಲಿನ ನೀರನ್ನು ಹೊಲಕ್ಕೆ ಬಳಸಿಕೊಂಡು ನಿರೀಕ್ಷೆಗೆ ಮೀರಿಫಸಲು ಪಡೆಯಬಹುದು ಎಂದು ಯಲಬುರ್ಗಾದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶರಣಪ್ಪ ಗುಂಗಾಡಿ ಅವರು ತಿಳಿಸಿದ್ದಾರೆ.