ತುಮಕೂರು ಮಾತ್ರವಲ್ಲ, ಕೋಲಾರದಲ್ಲಿಯೂ ಜಿ. ಪರಮೇಶ್ವರ್ ಒಡೆತನದ ಸಂಸ್ಥೆ..!

By Kannadaprabha News  |  First Published Oct 13, 2019, 12:55 PM IST

ತುಮಕೂರಿನಲ್ಲಿ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಐಟಿ ದಾಲಿ ನಡೆಯುತ್ತಿರುವ ಸಂದರ್ಭದಲ್ಲಿಯೇ ಕೋಲಾರದಲ್ಲಿಯೂ ಅವರ ಒಡೆತನದ ಸಂಸ್ಥೆ ಇರುವುದು ಬೆಳಕಿಗೆ ಬಂದಿದೆ. ಕೋಲಾರದ ಗಾಂಧೀ ನಗರದಲ್ಲಿ ಶಿಕ್ಷಣ ಸಂಸ್ಥೆ ಇದ್ದು, 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
 


ಕೋಲಾರ(ಅ.13): ತುಮಕೂರಿನಲ್ಲಿ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಐಟಿ ದಾಲಿ ನಡೆಯುತ್ತಿರುವ ಸಂದರ್ಭದಲ್ಲಿಯೇ ಕೋಲಾರದಲ್ಲಿಯೂ ಅವರ ಒಡೆತನದ ಸಂಸ್ಥೆ ಇರುವುದು ಬೆಳಕಿಗೆ ಬಂದಿದೆ. ಕೋಲಾರದ ಗಾಂಧೀ ನಗರದಲ್ಲಿ ಶಿಕ್ಷಣ ಸಂಸ್ಥೆ ಇದೆ.

ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರ ಶಿಕ್ಷಣ ಸಂಸ್ಥೆಗೆ ಸೇರಿದ ಶ್ರೀಸಿದ್ಧಾರ್ಥ ವಸತಿ ಪ್ರೌಢಶಾಲೆ ಕೋಲಾರದ ಗಾಂಧಿನಗರದಲ್ಲಿ ಕಂಡುಬಂದಿದೆ.

Tap to resize

Latest Videos

undefined

ಕೋಲಾರ: ಐಟಿ ಅಧಿಕಾರಿಗಳಿಂದ ಕ್ಯಾಷಿಯರ್‌ಗೆ ಕಪಾಳ ಮೋಕ್ಷ..!

ತುಮಕೂರು ಮೂಲದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗೆ ಸೇರಿದ್ದು ಎಂದು ಹೇಳಲಾಗಿದೆ. ಪರಮೇಶ್ವರ್‌ ಅವರ ತಂದೆ ಸಂಸ್ಥಾಪಕ ಕಾರ್ಯದರ್ಶಿ ಎಚ್‌.ಎಂ.ಗಂಗಾಧರಯ್ಯ ಹೆಸರಲ್ಲಿ ಈ ಸಂಸ್ಥೆ ಇದೆ.

ಇದಕ್ಕೆ 1996 ನವೆಂಬರ್‌ 11 ರಂದು ಡಾ.ಜಿ.ಪರಮೇಶ್ವರ್‌ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಗಿತ್ತು. ಇಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿಗೆ ಗುಂಡು

click me!