ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿಗೆ ಗುಂಡು

ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕೋಲಾರದ ಕೆಜಿಎಫ್‌ನಲ್ಲಿ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಬಾಲಕಿಯ ತಾಯಿ ಈ ಬಗ್ಗೆ ದೂರು ನೀಡಿದ್ದರು.

man Rapes girl in kolar shot by police

ಕೋಲಾರ(ಅ.12): ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ಗುರುವಾರ ರಾತ್ರಿ ಅತ್ಯಾಚಾರವೆಸಗಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ. ಊರಿಗಾಂಪೇಟೆ ಬಳಿ ಇರುವ ಮಂಜುನಾಥ್‌ ಕೆಜಿಎಫ್‌ ನಗರದ ಜನತಾ ಕಾಲೋನಿಯಲ್ಲಿ ಈ ದುರ್ಘಟನೆ ನಡೆದಿದೆ.

ಬಾಲಕಿಯ ಮೇಲೆ ಅತ್ಯಾಚಾರ

ಬಾಲಕಿ ಮೇಲೆ 26 ವರ್ಷದ ಕುಟ್ಟಿಆಲಿಯಾಸ್‌ ತಮಿಳರಸನ್‌ ಅತ್ಯಾಚಾರ ಮಾಡಿದ್ದಾನೆ. ಬಾಲಕಿಯ ತಾಯಿ ಚೀಟಿ ಹಣ ಕಟ್ಟಲು ಸಮೀಪದ ಮನೆಯೊಂದಕ್ಕೆ ತೆರಳಿದ ವೇಳೆಯಲ್ಲಿ ಮನೆಗೆ ಪ್ರವೇಶಿಸಿದ ಆರೋಪಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ರಾತ್ರಿ ಬಾಲಕಿ ನೋವಿನಿಂದ ನರಳಾಡುತ್ತಿದ್ದಳು. ಬೆಳಗ್ಗೆ ನೋವು ಜಾಸ್ತಿಯಾದಾಗ ತಾಯಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಮಗುವನ್ನು ರಾಬರ್ಟಸನ್‌ಪೇಟೆಯ ಸರ್ಕಾರಿ ಮಕ್ಕಳ ಆಸ್ಪತ್ರೆಯಲ್ಲಿ ತೋರಿಸಿದಾಗ, ಅತ್ಯಾಚಾರ ನಡೆದಿರುವುದು ದೃಢಪಟ್ಟಿತು.

ಆರೋಪಿ ಕಾಲಿಗೆ ಗುಂಡು

ಬಾಲಕಿಯ ತಾಯಿ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಹುಡುಕಿಕೊಂಡು ಊರಿಗಾಂಪೇಟೆಯನ್ನು ಜಾಲಾಡಿದ್ದಾರೆ. ಬಡಾವಣೆಯ ಹೊರವಲಯದ ಯರನಾಗನಹಳ್ಳಿ ರಸ್ತೆಯಲ್ಲಿ ಪತ್ತೆಯಾದ ಆತ್ಯಾಚಾರಿಯನ್ನು ಬಂಧಿಸಲು ಹೋದಾಗ, ಆತ ಕಲ್ಲಿನಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಮುನಿಸ್ವಾಮಿ ಎಂಬ ಕಾನ್ಸಟೇಬಲ್‌ ಗಾಯಗೊಂಡಿದ್ದಾರೆ. ತಕ್ಷಣ ಸರ್ಕಲ್‌ ಇನ್ಸ್‌ಪೆಕ್ಟರ್‌ ಸೂರ್ಯಪ್ರಕಾಶ್‌ ಗಾಳಿಯಲ್ಲಿ ಗುಂಡು ಹಾರಿಸಿ, ಶರಣಾಗುವಂತೆ ಸೂಚಿಸಿದರು. ಆದರೆ ಆರೋಪಿ ಪುನಃ ಹಲ್ಲೆ ನಡೆಸಲು ಮುಂದಾದಾಗ, ಆತನ ಕಾಲಿಗೆ ಗುಂಡು ಹಾರಿಸಿ, ಬಂಧಿಸಿದರು.

ಕೋಲಾರದಲ್ಲಿ ಜಾಲಪ್ಪ ಸಂಸ್ಥೆಗಳ ಮೇಲೆ ಐಟಿ ದಾಳಿ

ಆರೋಪಿಯನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಗೊಂಡಿರುವ ಪೊಲೀಸ್‌ ಪೇದೆ ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಬರ್ಟಸನ್‌ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಎಸ್ಪಿ ಮೊಹಮದ್‌ ಸುಜೀತ, ಡಿವೈಎಸ್ಪಿ ಬಿ.ಎಲ್‌.ಶ್ರೀನಿವಾಸಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದರು.

ಕೋಲಾರ: ನೀರಿಲ್ಲದ ಕೊಳವೆ ಬಾವಿಗೂ ವಿದ್ಯುತ್‌ ಬಿಲ್‌!

Latest Videos
Follow Us:
Download App:
  • android
  • ios