ಕೋಲಾರ: ದೀಪಾವಳಿಗೆ ಚೈನೀಸ್ ಪಟಾಕಿ ಮಾರಾಟವಿಲ್ಲ

By Kannadaprabha NewsFirst Published Oct 23, 2019, 1:05 PM IST
Highlights

ಪರವಾನಗಿಯಲ್ಲಿ ಅನುಮತಿ ನೀಡಿರುವ ಪ್ರಮಾಣಕ್ಕಿಂತ ಹೆಚ್ಚಿನ ಪಟಾಕಿ ಹಾಗೂ ಚೈನೀಸ್‌ ಪಟಾಕಿಗಳನ್ನು ಮಾರಾಟ ಮಾಡಬಾರದು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದ್ದಾರೆ. ದೀಪಾವಳಿ ಹಬ್ಬ ಸಮೀಪಿಸಿದ್ದು, ಈ ಸಂಬಂಧ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.

ಕೋಲಾರ(ಅ.23): ದೀಪಾವಳಿ ಹಾಗೂ ಇತರೆ ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಸಿಡಿಸುವ ಪಟಾಕಿ ಮಾರಾಟಗಾರರು ಹಾಗೂ ಗ್ರಾಹಕರು ಮುನ್ನೆಚರಿಕೆ ಕ್ರಮಗಳು ಹಾಗೂ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಿಳಿಸಿದ್ದಾರೆ .

ಚೀನಾದ ಪಟಾಕಿ ಬಳಸಬೇಡಿ

ಪಟಾಕಿ ಮಾರಾಟಗಾರರು ಕಡ್ಡಾಯವಾಗಿ ತಮ್ಮ ಪರವಾನಗಿಯನ್ನು ಸಾರ್ವಜನಿಕವಾಗಿ ಅಂಗಡಿಗಳ ಮುಂಭಾಗದಲ್ಲಿ ಪ್ರದರ್ಶಿಸಬೇಕು. ಪರವಾನಗಿಯಲ್ಲಿ ಅನುಮತಿ ನೀಡಿರುವ ಪ್ರಮಾಣಕ್ಕಿಂತ ಹೆಚ್ಚಿನ ಪಟಾಕಿ ಹಾಗೂ ಚೈನೀಸ್‌ ಪಟಾಕಿಗಳನ್ನು ಮಾರಾಟ ಮಾಡಬಾರದು. ಭಾರತ ಸರ್ಕಾರದ ಆದೇಶದ ರೀತ್ಯ ಪೆಟ್ರೋಲಿಯಂ ಅಂಡ್‌ ಎಕ್ಸ್‌ಪ್ಲೋಸಿವ್ ಆರ್ಗನೈಸೇಶನ್‌ ಅವರು ಹೊರಡಿಸಿರುವ ಪಟಾಕಿಗಳನ್ನು ಬಳಸುವ ಸಂದರ್ಭದಲ್ಲಿ ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕರು ಮಾಡಬೇಕಾದ ಹಾಗೂ ಮಾಡಬಾರದಂತಹ ಎಚ್ಚರಿಕೆ ಭಿತ್ತಿಪತ್ರಗಳನ್ನು ಕಡ್ಡಾಯವಾಗಿ ಅಂಗಡಿ ಮುಂಗಟ್ಟುಗಳಲ್ಲಿ ಪ್ರದರ್ಶಿಸಬೇಕು ಎಂದಿದ್ದಾರೆ.

ಕೋಲಾರ: ಮತ್ತೆ ತಲೆ ಎತ್ತಿದ ಫಿಲ್ಟರ್‌ ಮರಳು ದಂಧೆ

ವಿದೇಶಗಳಿಂದ ಆಮುದಾಗುವ ಯಾವುದೇ ಪಟಾಕಿ ಅಥವಾ ಸಿಡಿಮದ್ದುಗಳಿಗೆ ಸ್ಪೋಟಕಗಳ ಕಾಯ್ದೆ 2008 ರಂತೆ ಯಾವುದೇ ಅನುಮತಿಯನ್ನು ನೀಡಲಾಗುವುದಿಲ್ಲ. ಪಿಇಎಸ್‌ಒ ಅಥವಾ ಜಿಲ್ಲಾ ಪ್ರಾಧಿಕಾರದಿಂದ ನೀಡಲಾಗುವ ಎಲ್‌-5 ಪರವಾನಗಿ ಹೊಂದಿದ ಸಗಟು ಮಾರಾಟಗಾರರಿಂದ ಮಾತ್ರ ತಾತ್ಕಾಲಿಕ ಪಟಾಕಿ ಮಾರಾಟಗಾರರು ಪಟಾಕಿ ಖರೀದಿಸಲು ಅವಕಾಶ ನೀಡಲಾಗಿದೆ ಎಂದರು.

10 ಗಂಟೆ ಬಳಿಕ ಪಟಾಕಿ ಸಿಡಿಸುವಂತಿಲ್ಲ

ಅನಧಿಕೃತವಾಗಿ ಮಾರಾಟ ಮಾಡಿದಲ್ಲಿ ಸ್ಪೋಟಕಗಳ ನಿಯಮ 88 ರ ಉಲ್ಲಂಘನೆಯಾಗಲಿದ್ದು, ಸರ್ವೋಚ್ಚ ನ್ಯಾಯಲಯದ ಸುತ್ತೋಲೆ ಸಂ. ಹೆಚ್‌ಡಿ 192 ಎಸ್‌ಎಸ್‌ಟಿ 2018 ಕರ್ನಾಟಕ ಸರ್ಕಾರದ ಸಚಿವಾಲಯ, ವಿಧಾನಸೌಧ, ಬೆಂಗಳೂರು ರವರ ಸುತ್ತೋಲೆಯಂತೆ ರಾತ್ರಿ 8 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಅವಕಾಶ ನೀಡಿದೆ. ಶಬ್ದಮಾಲಿನ್ಯವಾಗುವ 125 ಡಿಬಿ(ಎ1) ಅಥವಾ 145 ದಿಬಿ(ಚ) ಹೆಚ್ಚಿನ ಡೆಸಿಬಲ್ಸ್‌ ಪಟಾಕಿಗಳನ್ನು ಸ್ಪೋಟಕಗಳನ್ನು ಬಳಸಬಾರದು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಮೂತ್ರಪಿಂಡದಿಂದ ದಾಖಲೆ ಗಾತ್ರದ ಕಲ್ಲು ಹೊರತೆಗೆದ ವೈದ್ಯರು

click me!