ಕೋಲಾರ: ಮತ್ತೆ ತಲೆ ಎತ್ತಿದ ಫಿಲ್ಟರ್‌ ಮರಳು ದಂಧೆ

By Kannadaprabha NewsFirst Published Oct 23, 2019, 12:49 PM IST
Highlights

ಮುಳಬಾಗಿಲಿನಲ್ಲಿ ಮತ್ತೆ ಫಿಲ್ಟರ್ ಮರಳು ದಂಧೆ ಆರಂಭವಾಗಿದೆ. ಆಕ್ರಮ ಮರಳುದಂದೆ ಅಧಿಕಾರಿಗಳ ಕೃಪೆಯಲ್ಲಿ ಮತ್ತೆ ತಲೆ ಎತ್ತಿ ನಿಂತಿರುವುದಕ್ಕೆ  ನಗರಕ್ಕೆ ಹೊಂದಿಕೊಂಡಿರುವ ನುಗುಲಬಂಡೆ ವ್ಯಾಪ್ತಿಯಲ್ಲಿನ ಬೊಮ್ಮರಾಸು ಕುಂಟೆ ಸಾಕ್ಷಿಯಾಗಿದೆ.

ಕೋಲಾರ(ಅ.23): ಮುಳಬಾಗಿಲು ತಾಲೂಕಿನಲ್ಲಿ 10 ವರ್ಷಗಳ ಹಿಂದೆ ಎಗ್ಗಿಲ್ಲದೆ ಹಳ್ಳ, ಕೊಳ್ಳ ಕೆರೆಗಳನ್ನು ಸೇರಿ ಮರಳು ದಂಧೆ ನಡೆಸಿದ್ದ ರೀತಿಯಲ್ಲಿ ಮತ್ತೊಮ್ಮೆ ಮರಳು ದಂಧೆ ಶುರುವಾಗಿದೆ.

ಮುಳಬಾಗಿಲು ತಾಲೂಕಿನಲ್ಲಿ 10 ವರ್ಷಗಳ ಹಿಂದೆ ಎಗ್ಗಿಲ್ಲದೆ ಹಳ್ಳ, ಕೊಳ್ಳ ಕೆರೆಗಳನ್ನು ಸೇರಿದಂತೆ ರೈತರ ಕೃಷಿ ಭೂಮಿಯಲ್ಲಿನ ಮಣ್ಣನ್ನು ಸಹ ತೆಗೆದು ಫಿಲ್ಟರ್‌ಗಳ ಮೂಲಕ ಮರಳನ್ನು ತಯಾರಿಸಿ ದೂರದ ನಗರಗಳಿಗೆ ಸಾಗಣಿಕೆ ಮಾಡಿ ರಾಜ್ಯದಲ್ಲಿಯೇ ಹೆಸರು ಗಳಿಸಿದ್ದ ಮುಳಬಾಗಿಲಿನಲ್ಲಿ ಪ್ರಸ್ತುತ ಆದೇ ಕೆಲಸ ಮತ್ತೆ ಆರಂಭವಾಗಿದೆ.

ಆಕ್ರಮ ಮರಳುದಂದೆ ಅಧಿಕಾರಿಗಳ ಕೃಪೆಯಲ್ಲಿ ಮತ್ತೆ ತಲೆ ಎತ್ತಿ ನಿಂತಿರುವುದಕ್ಕೆ  ನಗರಕ್ಕೆ ಹೊಂದಿಕೊಂಡಿರುವ ನುಗುಲಬಂಡೆ ವ್ಯಾಪ್ತಿಯಲ್ಲಿನ ಬೊಮ್ಮರಾಸು ಕುಂಟೆ ಸಾಕ್ಷಿಯಾಗಿದೆ.

ಕೆರೆಯಲ್ಲಿ ಫಿಲ್ಟರ್‌ ದಂಧೆ

ಕಳೆದ 10 ವರ್ಷಗಳ ಹಿಂದೆ ಬೆರಳಣಿಕೆಯಷ್ಟುಜನ ಪ್ರಾರಂಭಿಸಿದ ಮರಳು ಸಾಗಣಿಕೆಯ ದಂಧೆಯಿಂದ ಪ್ರಚೋದನೆಗೊಂಡ ಇತರರು ತಮ್ಮ ಕೃಷಿಕಾರ್ಯಗಳನ್ನು ಬಿಟ್ಟು ಮರಳು ಸಾಗಣಿಕೆ ಮತ್ತು ಫಿಲ್ಟರ್‌ ಮೂಲಕ ಮಣ್ಣಿನಿಂದ ಮರಳನ್ನು ಬೆರ್ಪಡಿಸುವ ಕಡೆ ಮುಖ ಮಾಡಿ ಒಂದು ದಿನಕ್ಕೆ 100 ಲಾರಿಗಳಿಗು ಹೆಚ್ಚು ಮರಳನ್ನು ಬೆಂಗಳೂರು ನಗರಕ್ಕೆ ಸಾಕಣಿಕೆ ಮಾಡುವಂತೆ ಬೆಳದ ದಂಧೆಯಿಂದ ಗ್ರಾಮಗಳ ರಸ್ತೆಗಳೆಲ್ಲ ಆಳಾಗಿದ್ದಲ್ಲದೆ, ಪೊಲೀಸರ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ಕಣ್ಣು ತಪ್ಪಿಸಿಕೊಳ್ಳಲು ಮರಳು ತುಂಬಿದ ಲಾರಿಗಳ ಅತಿವೇಗ ಚಾಲನೆಯಿಂದ ಅಪಾಘತಗಳಾಗಿ ಸಾರ್ವಜನಿಕರು ಪ್ರಾಣ ಕಳೆದುಕೊಳ್ಳುವಂತಾಗಿತ್ತು.

ಅಕ್ರಮ ಮರಳು ಸಾಗಾಣಿಕೆ

ಆದರೆ ಕಳೆದ ಎರಡು ಮೂರು ತಿಂಗಳಿನಿಂದ ಮತ್ತೆ ಆಕ್ರಮ ಮರಳು ದಂಧೆ ತಾಲೂಕಿನ ನಂಗಲಿ, ಬೈರಕೂರು, ಆವಣಿ, ತಾಯಲೂರು ಮತ್ತು ಕಸಾಬ ಹೋಬಳಿಗಳಲ್ಲಿ ತಲೆ ಎತ್ತಿದೆ, ದಂಧೆಕೋರರು ನಿರ್ಜನ ಪ್ರದೇಶಗಳಲ್ಲಿನ ಕೆರೆ ಕುಂಟೆಗಳನ್ನು ಆಯ್ಕೆ ಮಾಡಿಕೊಂಡು ಇತ್ತಿಚೆಗೆ ಸುರಿದ ಅಲ್ಪಸ್ವಲ್ಪ ಮಳೆಯಲ್ಲಿ ಶೇಖರಣೆಗೊಂಡಿರುವ ನೀರಿನಲ್ಲಿ ಹಗಲು ಸಮಯದಲ್ಲಿ ಮಣ್ಣನ್ನು ನೀರಿನಲ್ಲಿ ಫಿಲ್ಟರ್‌ ಮಾಡಿ ಮರಳನ್ನು ತಯಾರಿಸಿಕೊಂಡು ರಾತ್ರಿ ವೇಳೆ ಟ್ಯಾಕ್ಟರ್‌ ಮತ್ತು ಲಾರಿಗಳ ಮೂಲಕ ಸಂಬಂದಪಟ್ಟಇಲಾಖೆಗಳ ಅಧಿಕಾರಿಗಳ ಕೃಪೆಯಲ್ಲಿ ಸಾಗಣಿಕೆ ಮಾಡುತ್ತಿದ್ದಾರೆ.

ಮೂತ್ರಪಿಂಡದಿಂದ ದಾಖಲೆ ಗಾತ್ರದ ಕಲ್ಲು ಹೊರತೆಗೆದ ವೈದ್ಯರು

ನಗರ ಪ್ರದೇಶದಲ್ಲಿ ಹಗಲಿನಲ್ಲಿಯೇ ಯಾವುದೇ ಭಯಬೀತಿಯಿಲ್ಲದೆ ಟ್ಯಾಕ್ಟರ್‌ಗಳಲ್ಲಿ ಮರಳನ್ನು ತುಂಬಿಕೊಂಡು ಅದರ ಮೇಲೆ ಟಾರ್ಪಲ್‌ ಮುಚ್ಚಿ ಸಾಗಣಿಕೆ ಮಾಡುತ್ತರೆ. ಇಷ್ಟೇಲ್ಲ ತಮ್ಮ ಕಣ್ಣುಮುಂದೆಯೇ ನಡೆಯುತ್ತಿದ್ದರು ಕ್ರಮ ತೆಗೆದುಕೊಳ್ಳಬೇಕಾದ ಇಲಾಖೆಗಳು ಕಣ್ಣು ಮುಚ್ಚಿ ಕುಳುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸುವಂತಾಗಿದೆ.

ಮುಳಬಾಗಿಲು ನಗರದ ನುಗುಲಬಂಡೆ ವ್ಯಾಪ್ತಿಯಲ್ಲಿನ ಬೊಮ್ಮರಾಸು ಕುಂಟೆಯಲ್ಲಿ ಆಕ್ರಮ ಮರಳು ತಯಾರಿಕಾ ಘಟಕಗಳನ್ನು ತೆರೆದು ಮರಳನ್ನು ತಯಾರಿಸುತ್ತಿರುವುವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಸಂಬಂದಪಟ್ಟಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ತಾಲೂಕಿನಲ್ಲಿ ಯಾವುದೆ ಕಾರಣಕ್ಕು ಮರಳು ದಂಧೆ ತಲೆ ಎತ್ತಲು ಬಿಡುವುದಿಲ್ಲ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಹೇಳಿದ್ದಾರೆ.

ಕೋಲಾರ: ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾ ಪಟ್ಟಿ ಪ್ರಕಟ

click me!
Last Updated Oct 23, 2019, 12:51 PM IST
click me!