ಸರ್ಕಾರ ವರ್ಗಾವಣೆ ದಂಧೆ ಬಿಟ್ಟು ಬೇರೇನೂ ಮಾಡ್ತಿಲ್ಲ: ಕೈ ಶಾಸಕ ಕಿಡಿ

By Kannadaprabha News  |  First Published Oct 26, 2019, 2:10 PM IST

ರಾಜ್ಯ ಸರ್ಕಾರ ಬರೀ ವರ್ಗಾವಣೆ ದಂಧೆಯಲ್ಲಿ ತಲ್ಲೀನವಾಗಿದೆ. ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯಾದಾದ್ಯಂತ ವರ್ಗಾವಣೆ ದಂಧೆ ಬಿಟ್ಟರೆ ಬೇರೆ ಏನು‌ ಮಾಡುತ್ತಿಲ್ಲ ಎಂದು ಬಂಗಾರಪೇಟೆ ಕೈ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದ್ದಾರೆ. ರಾಜ್ಯದ ಪ್ರಬುದ್ದ ರಾಜಕಾರಣಿ ಡಿಕೆಶಿ ಅವರು ಬಿಜೆಪಿ ತಾಳಕ್ಕೆ ಕುಣಿಯಲಿಲ್ಲ ಎಂಬ ಕಾರಣಕ್ಕೆ ಹಿಂಸೆ‌ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.


ಕೋಲಾರ(ಅ.26) : ರಾಜ್ಯ ಸರ್ಕಾರ ಬರೀ ವರ್ಗಾವಣೆ ದಂಧೆಯಲ್ಲಿ ತಲ್ಲೀನವಾಗಿದೆ. ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯಾದಾದ್ಯಂತ ವರ್ಗಾವಣೆ ದಂಧೆ ಬಿಟ್ಟರೆ ಬೇರೆ ಏನು‌ ಮಾಡುತ್ತಿಲ್ಲ ಎಂದು ಬಂಗಾರಪೇಟೆ ಕೈ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಅವರು, ಬಿಜೆಪಿ ಕುತಂತ್ರದಿಂದ ಇಡಿಯನ್ನ ದರ್ಬಳಕೆ ಮಾಡಿಕೊಂಡು ಡಿ. ಕೆ. ಶಿವಕುಮಾರ್ ಅವರನ್ನು ಕುಗ್ಗಿಸಲು ಪ್ರಯತ್ನಿಸುತ್ತಿದೆ, ರಾಜ್ಯದ ಪ್ರಬುದ್ದ ರಾಜಕಾರಣಿ ಡಿಕೆಶಿ ಅವರು ಬಿಜೆಪಿ ತಾಳಕ್ಕೆ ಕುಣಿಯಲಿಲ್ಲ ಎಂಬ ಕಾರಣಕ್ಕೆ ಹಿಂಸೆ‌ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

Latest Videos

undefined

ಯಾರೂ ಅಡ್ಡಿ ಪಡಿಸಲು ಸಾಧ್ಯವಿಲ್ಲ: BJP ಸೇರುವ ಸುಳಿವು ನೀಡಿದ JDS ಶಾಸಕ

ಅನರ್ಹ ಶಾಸಕರ ಬಗ್ಗೆ ಮಾತನಾಡಿ, ಅನರ್ಹ ಶಾಸಕರು ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿ ಹೊರಟಿದ್ದಾರೆ. ಡಿಸಿಎಂ ಅಶ್ವತ್ಥ ನಾರಾಯಣ ಮಧ್ಯವರ್ತಿ. ರಾಜ್ಯದ ಜನರ ಬೆಂಬಲ ಅವರಿಗಿಲ್ಲ. ಡಿಕೆಶಿ ಬಗ್ಗೆ ಮಾತನಾಡುವ ಯೋಗ್ಯತೆಯೂ ಅವರಿಗಿಲ್ಲ. ಡಿಕೆಶಿ ಆಗಮನ ಉಪ ಚುನಾವಣೆಯಲ್ಲಿ ಹೆಚ್ಚಿನ ಪ್ರಭಾವ ಬೀರಲಿದೆ. ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದೆ. ಡಿಕೆಶಿ ಬಿಗ್ ರಿಲೀಫ್ ಸಿಕ್ಕಿದ್ದು ಉಪ ಚುನಾವಣೆ ಮೇಲೆ ನೇರ ಪರಿಣಾಮ ಬೀರಲಿದೆ ಎಂದಿದ್ದಾರೆ.

ಮೋದಿ ಹವಾ ಕುಗ್ಗಿದೆ:

ಮಹಾರಾಷ್ಟ್ರ,ಹರಿಯಾಣ ಫಲಿತಾಂಶ ಮೋದಿ ಹವಾ ಕುಗ್ಗಿಸಿದೆ. 15 ಕ್ಷೇತ್ರಗಳಲ್ಲೂ ಕಾಂಗ್ರೇಸ್ ಜಯಬೇರಿ ಸಾಧಿಸಲಿದೆ. ಹಾಗಾಗಿ ಸರ್ಕಾರದ ಭವಿಷ್ಯ ಉಪ ಚುನಾವಣೆವರೆಗೂ ಮಾತ್ರ. ರಾಜ್ಯದಲ್ಲಿ ಮತ್ತೆ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಬಿಜೆಪಿಗೆ ಜನರ ಬಗ್ಗೆ ಮೊದಲಿನಿಂದಲೂ ಕಾಳಜಿ ಇಲ್ಲ. ಅದಿವೇಶನವನ್ನ ಮೂರೇ ದಿನಕ್ಕೆ ಮುಗಿಸಿದ್ದಾರೆ. ನೆರೆ ಸಂತ್ರಸ್ತರಿಗೆ ಪರಿಹಾರ ಕೊಡುವ ಬದಲು ಕೇಂದ್ರ ಸರ್ಕಾರ ಮೂಗಿಗೆ ಬೆಣ್ಣೆ ಹಚ್ಚುತ್ತಿದೆ ಎಂದು ಕಿಡಿಕಾರಿದ್ದಾರೆ.

ಸಮಾಜದ ಹಿತಾಸಕ್ತಿಗೆ ರಾಜೀನಾಮೆಗೂ ಸಿದ್ಧ ಎಂದ ಶಾಸಕ.

click me!