ಮಡಿಕೇರಿ ಯುವ ದಸರಾ ಸಂಭ್ರಮದಿಂದ ನಡೆಯಿತು. ಸಾವಿರಾರು ಮಂದಿ ಡಿಜೆ, ವಾಲಗಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು. ಜಿಲ್ಲೆಯ 8 ತಂಡಗಳು ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರತಿಭೆ ಪ್ರದರ್ಶಿಸಿದರು.
ಮಡಿಕೇರಿ(ಅ.07): ದಸರಾ ಅಂಗವಾಗಿ 3ಡಿ ಸಮಿತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಶನಿವಾರ ನಡೆದ ಯುವ ದಸರಾ ಗಮನ ಸೆಳೆಯಿತು. ಸಾವಿರಾರು ಮಂದಿ ಡಿಜೆ, ವಾಲಗಕ್ಕೆ ನೃತ್ಯ ಮಾಡಿ ಸಂಭ್ರಮಿಸಿದರು.
ಜಿಲ್ಲೆಯ 8 ತಂಡಗಳು ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರತಿಭೆ ಪ್ರದರ್ಶಿಸಿದರು. ಮಡಿಕೇರಿಯ ಯುನೈಟೆಡ್ ಕಿಂಗ್ಡಂ ತಂಡ ಅಯ್ಯಪ್ಪ ದೇವರ ಸಾಹಸದ ಬಗ್ಗೆ ನೃತ್ಯದ ಮೂಲಕ ತಿಳಿಸಿದರು. ಕುಶಾಲನಗರದ ಡ್ರೀಮ್ ಸ್ಟಾರ್ ತಂಡ ಶಿವ ತಾಂಡವ ನೃತ್ಯದ ಮೂಲಕ ವೇದಿಕೆಯಲ್ಲಿ ದೂಳೆಬ್ಬಿಸಿದರು. ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡ ನರಸಿಂಹನಿಂದ ಹಿರಣ್ಯಕಶಪುವಿನ ಮರ್ಧನ ಕಥೆಯನ್ನು ವಿನೂತನ ರೀತಿಯಲ್ಲಿ ನೃತ್ಯದ ಮೂಲಕ ತೋರ್ಪಡಿಸಿದರು. ನೃತ್ಯಪಟುಗಳ ವೇಷಭೂಷಣ ಎಲ್ಲರನ್ನೂ ಆಕರ್ಷಿಸಿತು.
undefined
ಸುಂಟಿಕೊಪ್ಪದ ನಾಟಿ ಕಿಡ್ಸ್ ತಂಡ ತಮಿಳುನಾಡು ಮತ್ತು ಕರ್ನಾಟಕ ನಡುವಿನ ಕಾವೇರಿ ನದಿ ನೀರಿನ ವಿವಾದದ ಬಗ್ಗೆ ಬೆಳಕು ಚೆಲ್ಲಿದರು. ಗೊಂದಲ ಬದಿಗೊತ್ತಿ ಒಂದಾಗೋಣ ಎಂಬ ಸಂದೇಶ ಸಾರಿದರು.
ಮಡಿಕೇರಿ ಮಹಿಳಾ ದಸರಾ : ಸಾಂಪ್ರದಾಯಿಕ ಉಡುಪಲ್ಲಿ ಮಿಂಚಿದ DC, CEO, SP
ಅಡ್ವೆಂಚರ್ ಡ್ಯಾನ್ಸ್ ಸ್ಟೂಡಿಯೋ ಆಂಜನೇಯ ಶಕ್ತಿ ಹೇಳುವ ಹಾಡಿಗೆ ಹೆಜ್ಜೆ ಹಾಕಿದರು. ಕುಶಾಲನಗರದ ಟೈಂ ಬ್ರೇಕರ್ಸ್ ತಂಡ ಶಿವನಿಂದ ಯಮನ ಗರ್ವಗಂಭ ಕಥೆ ಸಾರುವ ಪೌರಾಣಿಕ ಹಿನ್ನೆಲೆಯ ನೃತ್ಯ ರೂಪಕ ಪ್ರದರ್ಶಿಸಿದರು. ಮಡಿಕೇರಿಯ ಗ್ಯಾಂಗ್ ಆಫ್ ಡ್ಯಾನ್ಸರ್ಸ್ ತಂಡ ರಾವಣನ ಕಥೆಯನ್ನು ನೃತ್ಯ ಮೂಲಕ ಪ್ರದರ್ಶಿಸಿದರು. ಸೋಮವಾರಪೇಯ ನಾಟ್ಯಾಲಯ ಡ್ಯಾನ್ಸ್ ಸ್ಟುಡಿಯೋ ಅಖಂಡ ಭಾರತ ನೃತ್ಯ ಪ್ರಾಕರವನ್ನು ಸುಮಾರು 70 ನೃತ್ಯಪಟುಗಳು ಪ್ರದರ್ಶಿಸಿ ಪ್ರಶಂಸೆಗೆ ಪಾತ್ರವಾದರು.
ಜ್ಞಾನ ಗಾನ ವೈಭವ:
ಸರಿಗಮಪ ರಿಯಾಲಿಟಿ ಶೋ ಖ್ಯಾತಿಯ ಪುಟಾಣಿ ಗಾಯಕಿ ಜ್ಞಾನ ಗುರುರಾಜ್ ಹಾಡಿದ ಹಾಡಿಗೆ ಪ್ರೇಕ್ಷಕರು ಮನಸೋತರು. ತಿಂಗಳು ಉರುಳಿದವು ಹಾಡು ಪುಟಾಣಿ ಕಂಠಸಿರಿಯಲ್ಲಿ ಅಮೋಘವಾಗಿ ಮೂಡಿಬಂತು. ಈ ದೇಶ ಚೆಂದ ಈ ಮಣ್ಣು ಅಂದ ಹಾಡು ನಮ್ಮ ನೆಲದ ಸೊಗಡು, ದೇಶಾಭಿಮಾನದ ಬಗ್ಗೆ ಬೆಳಕು ಚೆಲ್ಲಿತು. ಮನೆಗೆ ಹೋಗುವುದಿಲ್ಲ ಎಂಬ ಸಿನಿಮಾ ಗೀತೆಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.
ಯುವ ದಸರಾ ಅಂಗವಾಗಿ ನಡೆದ ಡಿಜೆ ಕಾರ್ಯಕ್ರಮ ಯುವ ಜನಾಂಗವನ್ನು ಕುಣಿದು ಕುಪ್ಪಳಿಸುವಂತೆ ಮಾಡಿತು. ಸುಮಾರು 1 ಗಂಟೆಗಳ ಕಾಲ ಝಗಮಗಿಸುವ ಬೆಳಕಿನ ನಡುವೆ ಕುಣಿದು ಸಂಭ್ರಮಿಸಿದರು. ಆಫ್ರಿಕಾನ್ ಆರ್ಕೇಸ್ಟಾ್ರ ಬೀಟ್ ಕೂಡ ಹೆಜ್ಜೆ ಹಾಕುವಂತೆ ಮಾಡಿತು.
ಮಡಿಕೇರಿ: ಜನೋತ್ಸವ ದಸರಾದಲ್ಲಿ ಚಿಣ್ಣರ ಕಲರವ
ನೃತ್ಯ ಸ್ಪರ್ಧೆ ವಿಜೇತರು: ಯುವ ದಸರಾ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕಿಂಗ್ಸ್ ಆಫ್ ಕೂರ್ಗ್ ಪ್ರಥಮ, ಯುನೈಟೆಡ್ ಕಿಂಗ್ಡಮ್ ದ್ವಿತೀಯ, ನಾಟ್ಯಾಲಯ ಡ್ಯಾನ್ಸ್ ಸ್ಟುಡಿಯೋ ತೃತೀಯ ಸ್ಥಾನ ಗಳಿಸಿತು.Youth dasara celebrated in Madikeri